ಟ್ರೈಲರ್ ಮೂಲಕವೇ ಬೆಚ್ಚಿ ಬೀಳಿಸುತ್ತಾ, ಪೋಸ್ಟರ್ ಗಳ ಮೂಲಕವೇ ಕ್ಯೂರಿಯಾಸಿಟಿ ಬಿಲ್ಡ್ ಮಾಡುತ್ತಾ ಬಂದಿರೋ ಒಂದು ಕಥೆ ಹೇಳ್ಲಾ ಚಿತ್ರ ಈ ವಾರ ರಾಜ್ಯಾಧ್ಯಂತ ಬಿಡುಗಡೆಯಾಗುತ್ತಿದೆ. ಒಂದು ಸಿನಿಮಾದಲ್ಲಿ ಒಂದು ಹಾರರ್ ಕಥೆ ಇದ್ದರೇನೇ ಪ್ರೇಕ್ಷಕರು ಎಂಜಾಯ್ ಮಾಡ್ತಾರೆ. ಅಂಥಾದ್ದರಲ್ಲಿ ಈ ಚಿತ್ರ ಒಟ್ಟೊಟ್ಟಿಗೆ ಐದು ಹಾರರ್ ಕಥೆಗಳನ್ನ ಹೇಳ ಹೊರಟಿದೆ. ಈ ಮೂಲಕ ನಿರ್ದೇಶಕ ಗಿರೀಶ್ ಹೊಸಾ ಪ್ರಯೋಗವೊಂದನ್ನು ಮಾಡಿದ್ದಾರೆ. ಅದರ ಮೋಡಿ ಎಂಥಾದ್ದೆಂಬುದು ಈ ವಾರವೇ ಜಾಹೀರಾಗಲಿದೆ.
ಕ್ರೌಡ್ ಫಂಡಿಂಗ್ ಮೂಲಕ ನಿರ್ಮಾಣಗೊಂಡಿರೋ ಈ ಚಿತ್ರವನ್ನು ಗಿರೀಶ್ ನಿರ್ದೇಶನ ಮಾಡಿದ್ದಾರೆ. ಹಲವಾರು ವರ್ಷಗಳಿಂದ ಸಿನಿಮಾ ಧ್ಯಾನದಲ್ಲಿದ್ದ ಇವರು ಒಂದಷ್ಟು ಅನುಭವವನ್ನೂ ಹೊಂದಿದ್ದಾರೆ. ಈ ಹಿಂದೆ ದಿ ಲೂಸಿಡ್ ಹ್ಯಾಂಗೋವರ್ ಮುಂತಾದ ವಿಭಿನ್ನ ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ ಅನುಭವ ಅವರಿಗಿದೆ. ಹೊಸತನದೊಂದಿಗೇ ಏನನ್ನಾದರೂ ಮಾಡಬೇಕನ್ನೋ ಹಂಬಲದಿಂದಲೇ ಅವರು ಒಂದು ಕಥೆ ಹೇಳ್ಲಾ ಚಿತ್ರವನ್ನು ಅವರು ನಿರ್ದೇಶನ ಮಾಡಿದ್ದಾರೆ.
ಈ ಸಿನಿಮಾ ಟ್ರೈಲರ್ ಮೂಲಕ ಈಗಾಗಲೇ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟು ಹಾಕಿದೆ. ಹಾರರ್ ಕಥೆಗಳ ಗುಚ್ಛ ಹೊಂದಿರೋ ಈ ಚಿತ್ರದಲ್ಲಿ ಪ್ರಯೋಗಗಳ ಮೆರವಣಿಗೆಯೇ ಇದೆ. ಇದರಲ್ಲಿ ತಾಂಡವ್, ಶಕ್ತಿ ಸೋಮಣ್ಣ, ಪ್ರತೀಕ್, ಸೌಮ್ಯಾ ರಮಾಕಾಂತ್, ರಮಾಕಾಂತ್ ಮುಂತಾದವರು ನಟಿಸಿದ್ದಾರೆ. ಬಕೇಶ್ ಮತ್ತು ಕಾರ್ತಿಕ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೀರ್ತನ್ ಪೂಜಾರಿ ಕ್ಯಾಮೆರಾ ಕಣ್ಣಾಗಿದ್ದಾರೆ. ಪ್ರಯೋಗಾತ್ಮಕ ಹಾರರ್ ಕಥನದ ಅಸಲೀ ಮಜಾ ಅನುಭವಿಸಲು ಪ್ರೇಕ್ಷಕರೀಗ ತುದಿಗಾಲಲ್ಲಿ ನಿಂತಿದ್ದಾರೆ.
Leave a Reply
You must be logged in to post a comment.