ಫೈವ್ ಸ್ಟಾರ್ ಫಿಲಂ ಲಾಂಛನದಲ್ಲಿ ನಿರ್ಮಾಣವಾಗಿರುವ ಸಿನಿಮಾ ಆಪರೇಷನ್ ನಕ್ಷತ್ರ. ಈ ಚಿತ್ರಕ್ಕೆ ಮಧುಸೂದನ್ ಕೆ.ಆರ್. ಕಥೆ, ಚಿತ್ರಕಥೆ ಬರೆದು ಆ್ಯಕ್ಷನ ಕಟ್ ಹೇಳಿದ್ದಾರೆ. ನಂದಕುಮಾರ್ ಎನ್, ಅರವಿಂದ ಟಿ.ಎಸ್. ರಾಧಾಕೃಷ್ಣ ಸಿ.ಎಸ್., ಕಿಶೋರ್ ಕುಮಾರ್ ಮೇಗಳ ಮನೆ ಈ ಚಿತ್ರಕ್ಕೆ ಬಂಡವಾಳ ಹೂಡಿ, ನಿರ್ಮಾಣ ಮಾಡಿದ್ದಾರೆ. ಇನ್ನು ನಿರಂಜನ್ ಒಡೆಯರ್, ಲಿಖಿತ್ ಸೂರ್ಯ, ಅದಿಥಿ ಪ್ರಭುದೇವ್ ಹಾಗೂ ಯಜ್ಞಾಶೆಟ್ಟಿ ಚಿತ್ರದ 4 ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗೋವಿಂದೇಗೌಡ (ಕಾಮಿಡಿ ಕಿಲಾಡಿಗಳು), ಪ್ರಶಾಂತ್, ನಟನಾ, ಶ್ರೀನಿವಾಸ್‍ಪ್ರಭು, ದೀಪಕ್ ರಾಜ್ ಶೆಟ್ಟಿ, ವಿಕ್ಟರಿ ವಾಸು ಕೂಡ ಈ ಚಿತ್ರದಲ್ಲಿದ್ದಾರೆ.

ಮೃಂದ ಗೇಮ್ ಆಧಾರಿತವಾಗಿ ನಡೆಯುವ ಕಥೆ ಇದಾಗಿದ್ದು, 4 ಜನ ಪಾತ್ರಧಾರಿಗಳ ಜೀವನದಲ್ಲಿ ಬಂದು ಹೋಗುವ ಘಟನೆಗಳು ಅವರ ಜೀವನದಲ್ಲಿ ಹೇಗೆ ಟ್ವಿಸ್ಟ್ ಅಂಡ್ ಟರ್ನ್ ಕೊಡುತ್ತವೆ ಎಂದು ಆಪರೇಷನ್ ನಕ್ಷತ್ರ ಚಿತ್ರದ ಮೂಲಕ ಟ್ರೈ ಮಾಡಲಾಗಿದೆಯಂತೆ. ಜನರಿಗೆ ನಾವು ಮೋಸ ಮಾಡಲು ಪ್ರಯತ್ನಿಸಿದರೆ ಆಗ ನಾವೇ ಹೇಗೆ ಮೋಸ ಹೋಗ್ತೀವಿ ಎನ್ನುವುದೇ ಚಿತ್ರದ ಎಳೆ.

CG ARUN

‘ಮಾರ್ಲಾಮಿ’ ಚಿತ್ರಕ್ಕೆ ಒಳ್ಳೆಯ ಹುಡ್ಗ ಪ್ರಥಮ್ ಚಾಲನೆ

Previous article

ಭಾರತದಲ್ಲಿ ರಿಲೀಸ್ ಆಗಲಿದೆ ಮೆನ್ ಇನ್‌ ಬ್ಲ್ಯಾಂಕ್ 4

Next article

You may also like

Comments

Leave a reply

Your email address will not be published. Required fields are marked *