ಫೈವ್ ಸ್ಟಾರ್ ಸಂಸ್ಥೆಯ ಲಾಂಛನದಲ್ಲಿ ನಂದಕುಮಾರ್ ಎನ್., ಅರವಿಂದ್ ಮೂರ್ತಿ ಟಿ.ಎಸ್. ರಾಧಾಕೃಷ್ಣ ಹಾಗೂ ಕಿಶೋರ್ ಮೇಗಳ ಮನೆ ನಿರ್ಮಿಸುತ್ತಿರುವ ಆಪರೇಷನ್ ನಕ್ಷತ್ರ ಚಿತ್ರದ ಮೊದಲ ಲಿರಿಕಲ್ ವೀಡಿಯೋ ಅನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಸಂಗೀತ ನಿರ್ದೇಶಕ ವೀರ್ ಸಮರ್ಥ್ ರಾಗ ಸಂಯೋಜಿಸಿದ್ದು, ಯುವ ಗಾಯಕ ಸಂಚಿತ್ ಹೆಗ್ಡೆ ಹಾಡಿರುವ ಹಾಡಿಗೆ ಪತ್ರಕರ್ತ ವಿಜಯ್ ಭರಮಸಾಗರ ಸಾಹಿತ್ಯ ಬರೆದಿದ್ದಾರೆ. ‘ನಾ ಪರಿಚಯವಾಗದೆ ಈ ಒಲವಿಗೆ ಸಿಲುಕಿದೆ, ಹೇಗೆ ಹೇಳಲಿ ನನ್ನೀ ತಳಮಳ ಬಂಧಿಯಾಗಲೆ, ಆಸೆ ಮೂಡಿದೆ ಪ್ರೀತಿಯೊಂದಕೆ ಅತಿಥಿಯಾಗಲೇ…’ ಎಂದು ಶುರುವಾಗುವ ಹಾಡು ಕೇಳಿ ಮೆಚ್ಚಿಕೊಂಡ ರಕ್ಷಿತ್ ಶೆಟ್ಟಿ, ‘ಹೊಸಬರ ಹೊಸ ಪ್ರಯತ್ನ ಗೆಲ್ಲಬೇಕು. ಕನ್ನಡಕ್ಕೆ ಜಾಜ್ ಶೈಲಿಯ ಹಾಡು ಹೊಸತು. ಈ ರೀತಿಯ ಪ್ರಯೋಗ ಮಾಡಿರುವ ಸಂಗೀತ ನಿರ್ದೇಶಕರ ಕೆಲಸ ಇಷ್ಟವಾಯಿತು. ಸಾಹಿತ್ಯ ಮತ್ತು ಗಾಯಕ ಸಂಚಿತ್ ಹೆಗ್ಡೆ ಅವರು ಹೊಸ ಬಗೆಯಲ್ಲಿ ಹಾಡಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು ಚಿತ್ರ ಗೆಲುವು ನೀಡಲಿ. ಹೊಸಬರ ಪ್ರಯತ್ನಕ್ಕೆ ಶುಭವಾಗಲಿ’ ಎಂದು ಹಾರೈಸಿದರು.
ಇದೀಗ ಚಿತ್ರದ ಚಿತ್ರಿಕರಣ ಪೂರ್ಣಗೊಂಡಿದ್ದು , ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಮಧುಸೂಧನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಶಿವಸೀನ ಛಾಯಾಗ್ರಹಣ, ವೀರ್ಸಮರ್ಥ ಸಂಗೀತ, ಎರಡು ಗೀತೆಗಳಿಗೆ ಪತ್ರಕರ್ತ ವಿಜಯ್ ಭರಮಸಾಗರ ಅವರ ಸಾಹಿತ್ಯ, ಕಿಶೋರ್ ಮೇಗಳ ಮನೆ ಮಧುಸೂಧನ್ ಸಂಭಾಷಣೆ, ಕಿಟ್ಟು ಅರ್ಜುನ್ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ, ಅಲ್ಟಿಮೇಟ್ ಶಿವು ಸಾಹಸ, ಶರಣ್ ಗೆಣ್ಕಲ್ ಸಹ ನಿರ್ದೇಶನವಿದೆ. ಚಿತ್ರದಲ್ಲಿ ನಿರಂಜನ್ ಒಡೆಯರ್, ಅದಿತಿ ಪ್ರಭುದೇವ್, ಯಜ್ಞಾಶೆಟ್ಟಿ, ಲಿಖಿತ್ ಸೂರ್ಯ ನಾಯಕ, ನಾಯಕಿಯರಾದರೆ, ಉಳಿದಂತೆ ದೀಪಕ್ರಾಜ್ ಶೆಟ್ಟಿ, ಶ್ರೀನಿವಾಸ್ ಪ್ರಭು, ಗೋವಿಂದೇಗೌಡ,ವಿಜಯಲಕ್ಷ್ಮಿ,ಅರವಿಂದೇಗೌಡ, ಶ್ರೀಜಾ, ಅರವಿಂದ್ ಮೂರ್ತಿ ಟಿ.ಎಸ್. ಭರತ್ ಇನ್ನು ಮುಂತಾದವರ ತಾರಾ ಬಳಗವಿದೆ. ಚಿತ್ರಕ್ಕೀಗ ಹಿನ್ನೆಲೆ ಸಂಗೀತ ನಡೆಯುತ್ತಿದ್ದು, ಜೂನ್ ಅಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.
No Comment! Be the first one.