ನಿಮ್ಮ ಸಿನಿಮಾ ಲಾಂಛನದಲ್ಲಿ ನವೀನ್ ಅವರು ನಿರ್ಮಿಸಿರುವ, ಗೋಲ್ದನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ ‘ಆರೆಂಜ್‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪ್ರಶಾಂತ್ ರಾಜ್ ಅವರೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಸಂತೋಷ್ ರೈ ಪತಾಜೆ ಅವರ ಛಾಯಾಗ್ರಹಣವಿದೆ. ರವಿಚಂದ್ರನ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ಮುರಳಿ ನೃತ್ಯ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ನಟರಾಜ್ ಸಂಭಾಷಣೆ ಬರೆದಿದ್ದಾರೆ. ಗಣೇಶ್, ಪ್ರಿಯಾ ಆನಂದ್, ಸಾಧುಕೋಕಿಲ, ರಂಗಾಯಣ ರಘು, ಅವಿನಾಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಇದೇ ಪ್ರಶಾಂತ್ ರಾಜ್ ನಿರ್ದೇಶಿಸಿ, ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ್ದ ಜ಼ೂಮ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಯಶಸ್ವಿ ಜೋಡಿಯ ‘ಆರೆಂಜ್’ ತೆರೆಗೆ ಬರುತ್ತಿರೋದರಿಂದ ಪ್ರೇಕ್ಷಕ ವಲಯದಲ್ಲೂ ಒಂಥರಾ ಕುತೂಹಲ ಮನೆ ಮಾಡಿದೆ. ‘ಲವ್ ಗುರು’ ಸಿನಿಮಾದ ಮೂಲಕ ನಿರ್ದೇಶಕರಾಗಿ ಬಂದು ಗೆಲುವು ಕಂಡವರು ಪ್ರಶಾಂತ್ ರಾಜ್, ಲವರ್ ಬಾಯ್ ಆಗಿದ್ದುಕೊಂಡೇ ಸಿನಿಮಾ ಪ್ರೇಮಿಗಳ ಎದೆಗೆ ಮುಂಗಾರುಮಳೆ ಚುಮುಕಿಸಿದವರು ಗಣೇಶ್. ಈ ಇಬ್ಬರ ಕಾಂಬಿನೇಷನ್ ‘ಆರೆಂಜ್’ ಮೂಲಕ ಮತ್ತೆ ಒಂದಾಗಿರೋ ವಿಚಾರವೇ ಮಜಬೂತಾಗಿದೆ. ಈಗಾಗಲೇ ಹೊರಬಂದಿರುವ ಹಾಡುಗಳು ಕೇಳುಗರ ಕಿವಿಗೆ ನಾಟಿದ್ದು, ಮನಸ್ಸಿನಲ್ಲಿ ಹಿತವಾದ ಭಾವ ಹೊಮ್ಮಿಸಿದೆ. ಈ ವಾರವೇ ತೆರೆಗೆ ಬರುತ್ತಿರುವ ‘ಆರೆಂಜ್’ ನೋಡಿದ ಪ್ರತಿಯೊಬ್ಬರನ್ನೂ ಆವರಿಸಿಕೊಳ್ಳುವ ಲಕ್ಷಣವೇ ಹೆಚ್ಚಾಗಿದೆ…
#
No Comment! Be the first one.