ಸಂಚಾರಿ ವಿಜಯ್ ಅವರನ್ನು ಭಿನ್ನವಾದ ಗೆಟಪ್ಪಿನಲ್ಲಿ ನೋಡೋ ಕ್ಷಣಗಳು ಹತ್ತಿರಾಗಿವೆ. ಆರ್ಟ್ ಆಂಡ್ ಸೋಲ್ ಮೀಡಿಯಾ ನಿರ್ಮಾಣ ಮಾಡಿರುವ, ಹೃಷಿಕೇಶ್ ಜಂಬಗಿ ನಿರ್ದೇಶನದ ಪಾದರಸ ಅಬ್ಬರದೊಂದಿಗೇ ನಾಳೆ ರಾಜ್ಯಾದಂತ ಬಿಡುಗಡೆಯಾಗಲಿದೆ.
ಅಷ್ಟಕ್ಕೂ ಪಾದರಸ ಏಕಾಏಕಿ ಅಸೀಮ ಕೌತುಕವೊಂದರ ಮೂಲಕ ಪ್ರೇಕ್ಷಕರ ಮನಸು ಹೊಕ್ಕು ಹರಿದಾಡಲಾರಂಭಿಸಿದ್ದು ಟ್ರೈಲರ್ ಮೂಲಕ. ಆ ಮೂಲಕ ಚೆಂದದ, ಡಿಫರೆಂಟಾದ ಹಾಡಾಗಿಯೂ ಸೆಳೆದುಕೊಂಡಿದ್ದ ಪಾದರಸ ಈ ಪರಿಯಾಗಿ ಕ್ರೇಜ್ ಹುಟ್ಟು ಹಾಕಲು ಪ್ರಧಾನ ಕಾರಣ ಸಂಚಾರಿ ವಿಜಯ್ ಅವರ ವಿಶಿಷ್ಟವಾದ ಗೆಟಪ್.
ಸಂಚಾರಿ ವಿಜಯ್ಗೆ ಇಂಥಾದ್ದೊಂದು ಬೆರಗಾಗಿಸೋ ಹೊಸಾ ಲುಕ್ಕು ಸಿಕ್ಕಿದ್ದರ ಹಿದೆ ಆರ್ಟ್ ಆಂಡ್ ಸೋಲ್ ಮೀಡಿಯಾದ ಪಾತ್ರ ದೊಡ್ಡದಿದೆ. ನಾನು ಅವನಲ್ಲ ಅವಳು ಚಿತ್ರದ ಹಂತದಿಂದಲೂ ಈ ಸಂಸ್ಥೆಯ ನಿರ್ಮಾತೃಗಳು ವಿಜಯ್ ಅವರನ್ನು ಬೇರೆಯದ್ದೇ ಬಗೆಯಲ್ಲಿ ಪ್ರೇಕ್ಷಕರೆದುರು ತರಬೇಕೆಂಬ ಕನಸು ಹೊಂದಿದ್ದರಂತೆ. ಅದರ ಭಾಗವಾಗಿಯೇ ಅಸ್ತಿತ್ವಕ್ಕೆ ಬಂದಿರೋ ಆರ್ಟ್ ಆಂಡ್ ಸೋಲ್ ಮೀಡಿಯಾದ ಮೊದಲ ಕಾಣಿಕೆಯಾಗಿ ಪಾದರಸ ಚಿತ್ರ ತೆರೆ ಕಾಣುತ್ತಿದೆ.
ಮೂಲತಃ ಕಾಮಿಡಿ ಪಾತ್ರಗಳತ್ತ ಭಾರೀ ಸೆಳೆತ ಹೊಂದಿರೋ ವಿಜಯ್ ಒಳಗೆಲ್ಲೋ ಇಂಥಾದ್ದೊಂದು ಪಾತ್ರ ಮಾಡಬೇಕೆಂಬ ತುಡಿತ ಇದ್ದೇ ಇತ್ತು. ಆದರೆ ಕಥೆ ಭಿನ್ನವಾಗಿದ್ದರೂ ಒಂದು ಜಾನರಿನ ಚಿತ್ರಗಳಲ್ಲಿಯೇ ನಟಿಸುತ್ತಾ ಬಂದಿದ್ದ ಸಂಚಾರಿ ಪಾಲಿಗಿದು ಹೊಸಾ ಆರಂಭ. ಅದನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುವ ಲಕ್ಷಣಗಳೇ ಕಾಣಿಸುತ್ತಿವೆ.
#
No Comment! Be the first one.