ಎಮ್. ರಮೇಶ್ ರೆಡ್ಡಿ ನಿರ್ಮಾಣದ ಪಡ್ಡೆಹುಲಿ ಚಿತ್ರದ ಮೇಲಿನ ನಿರೀಕ್ಷೆ ನಿಗಿನಿಗಿಸಲಾರಂಭಿಸಿದೆ. ಗುರುದೇಶಪಾಂಡೆ ನಿರ್ದೇಶನದ ಈ ಸಿನಿಮಾ ಮೂಲಕ ಖ್ಯಾತ ನಿರ್ಮಾಪಕ ಕೆ ಮಂಜು ಪುತ್ರ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಇದೀಗ ಹೊಸಾ ಹುಡುಗ ಶ್ರೇಯಸ್ಗೆ ಟ್ರೈಲರ್ ಬಿಡುಗಡೆ ಮಾಡೋ ಮೂಲಕ ಸಾಥ್ ನೀಡಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಾಗಿದ್ದಾರೆ.
ನಾಳೆ ಸಂಜೆ ಆರು ಘಂಟೆಯ ಹೊತ್ತಿಗೆಲ್ಲ ಪಡ್ಡೆಹುಲಿ ಟ್ರೈಲರ್ ಅನ್ನು ದರ್ಶನ್ ಪಿಆರ್ಕೆ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆ ಮಾಡಲಿದ್ದಾರೆ. ಪರಿಶ್ರಮ ಪಟ್ಟು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡೋ ಹೊಸಬರಿಗೆ ಸದಾ ಬೆಂಬಲ ನೀಡೋದು ದರ್ಶನ್ ಅವರಲ್ಲಿ ಎಲ್ಲರೂ ಮೆಚ್ಚಿಕೊಳ್ಳುವಂಥಾ ವ್ಯಕ್ತಿತ್ವ. ಪಡ್ಡೆಹುಲಿಗೆ ಟ್ರೈಲರ್ ಬಿಡುಗಡೆ ಮಾಡೋ ಮೂಲಕ ಸಾಥ್ ಕೊಡುವ ಮೂಲಕ ದರ್ಶನ್ ಮತ್ತೊಂದು ಹೊಸಾ ಪ್ರತಿಭೆಗೆ ಬೆಂಬಲ ಸೂಚಿಸಿದಂತಾಗಿದೆ.
ಈ ಹಿಂದೆ ಶ್ರೇಯಸ್ ಅಭಿನಯದ ಪಡ್ಡೆಹುಲಿ ಸಾಂಗೊಂದನ್ನು ನೋಡಿ ದರ್ಶನ್ ಬಹುವಾಗಿ ಮೆಚ್ಚಿಕೊಂಡಿದ್ದರು. ಶ್ರೇಯಸ್ ಸಾಕಷ್ಟು ತಯಾರಿ ಮಾಡಿಕೊಂಡು ಬಂದಿರೋದು ಚಿತ್ರದ ತುಣುಕುಗಳ ಮೂಲಕವೇ ಸಾಬೀತಾಗಿದೆ ಅಂತ ಮೆಚ್ಚಿಕೊಂಡು ಮಾತಾಡಿದ್ದರು. ಪಡ್ಡೆಹುಲಿಗೆ ದೊಡ್ಡ ಮಟ್ಟದಲ್ಲಿ ಗೆಲುವು ಸಿಗಲಿ ಅಂತಲೂ ದರ್ಶನ್ ಅವರು ಹಾರೈಸಿದ್ದರು.
ಮಾಡಿದರೆ ಒಂದೊಳ್ಳೆ ಚಿತ್ರವನ್ನೇ ಮಾಡಬೇಕು ಎಂಬ ಆಕಾಂಕ್ಷೆ ಹೊಂದಿರುವವರು ನಿರ್ಮಾಪಕ ರಮೇಶ್ ರೆಡ್ಡಿ. ಅಂತಾದ್ದೊಂದು ತುಂಬು ಪ್ರೀತಿಯಿಂದಲೇ ಅವರು ಪಡ್ಡೆಹುಲಿಯನ್ನು ಪೊರೆದಿದ್ದಾರೆ. ನಿರ್ದೇಶಕ ಗುರುದೇಶಪಾಂಡೆ ಕೂಡಾ ಅಂಥಾದ್ದೇ ಪ್ರೀತಿಯಿಂದ ಪಡ್ಡೆಹುಲಿಗೆ ಜೀವ ತುಂಬಿದ್ದಾರೆ. ಶ್ರೇಯಸ್ ಕೂಡಾ ಪ್ರತಿಯೊಂದರಲ್ಲಿಯೂ ಪಕ್ಕಾ ಆಗಿಕೊಂಡೇ ಅಖಾಡಕ್ಕಿಳಿದಿದ್ದಾರೆ. ಇಂಥಾ ಪರಿಶ್ರಮವೆಲ್ಲವೂ ದರ್ಶನ್ ಸಾಥ್ ಕೊಡೋ ಮೂಲಕ ಸಾರ್ಥಕಗೊಂಡಂತಾಗಿದೆ.
No Comment! Be the first one.