ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿರೋ ಚಿತ್ರ ಪಡ್ಡೆಹುಲಿ. ರಮೇಶ್ ರೆಡ್ಡಿಯವರ ಬದುಕಿನ ಹಾದಿಯತ್ತ ಒಮ್ಮೆ ಕಣ್ಣು ಹಾಯಿಸಿದರೆ ಅವರು ದಾಟಿಕೊಂಡು ಬಂದಿರೋ ಕಡುಕಷ್ಟದ ಹಾದಿಯ ಕಥೆ ಕಾಡುತ್ತೆ. ಅಲ್ಲಿ ಪ್ರಧಾನವಾಗಿ ಅವರ ಸಿನಿಮಾ ಪ್ರೇಮವೂ ಕಾಣಿಸಿಕೊಳ್ಳುತ್ತೆ. ಅಂಥಾ ಅದೆಷ್ಟೋ ವರ್ಷಗಳ ಕನಸಿನ ಭಾಗವಾಗಿಯೇ ಅವರು ಶ್ರೇಯಸ್ ಅಭಿನಯದ ಪಡ್ಡೆಹುಲಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ನಿರ್ಮಾಪಕ ರಮೇಶ್ ರೆಡ್ಡಿಯವರ ಕನಸಿಗೆ ತಕ್ಕುದಾಗಿಯೇ ನಿರ್ದೇಶಕ ಗುರುದೇಶಪಾಂಡೆ ಈ ಚಿತ್ರವನ್ನು ರೂಪಿಸಿದ್ದಾರೆ. ಅದೇನೇ ಕಾಳಜಿ ಇದ್ದರೂ ಬಜೆಟ್ ಅಂತ ಬಂದಾಗ ಹಿಂದೆ ಮುಂದೆ ಆಲೋಚಿಸುವವರೇ ಹೆಚ್ಚು. ಆದರೆ ರಮೇಶ್ ರೆಡ್ಡಿಯವರ ಕಾಳಜಿಯನ್ನು ಕಂಡು ಇಡೀ ಚಿತ್ರರಂಗ ಮಾತ್ರವಲ್ಲದೇ ಇತರರೂ ಅಚ್ಚರಿಗೊಂಡಿದ್ದಾರೆ. ರಮೇಶ್ ರೆಡ್ಡಿಯವರು ಪಡ್ಡೆಹುಲಿಗಾಗಿ ಸುರಿದ ಬಜೆಟ್ಟಿನ ಗಾತ್ರವೇ ಅಂಥಾದ್ದಿದೆ!
ರಮೇಶ್ ರೆಡ್ಡಿಯವರು ಅಷ್ಟೊಂದು ಕಾಳಜಿ ತೋರಿಸದೇ ಇದ್ದಿದ್ದರೆ ಪಡ್ಡೆಹುಲಿಯ ಹನ್ನೊಂದು ಹಾಡುಗಳು ರೂಪುಗೊಳ್ಳಲು ಸಾಧ್ಯವೇ ಇರುತ್ತಿರಲಿಲ್ಲ. ಏನೇ ಹೊಸಾ ಆಲೋಚನೆಗಳನ್ನು ತೆರೆದಿಟ್ಟಾಗಲೂ ಹಣಕಾಸಿನ ಬಗ್ಗೆ ಯೋಚಿಸದೆ ನಿರ್ಮಾಪಕರು ಸಹಕಾರ ಕೊಡುತ್ತಲೇ ಬಂದಿದ್ದಾರೆ. ಈ ಬಗ್ಗೆ ಚಿತ್ರತಂಡದಲ್ಲಿಯೂ ಮೆಚ್ಚುಗೆಯಿದೆ. ಬಹುಶಃ ಹೊಸಾ ಹುಡುಗನ ಎಂಟ್ರಿಗೆ ಈ ಪಾಟಿ ಹಣ ಸುರಿದಿರೋ ಏಕೈಕ ಕನ್ನಡ ಚಿತ್ರ ಪಡ್ಡೆಹುಲಿ. ಇದಕ್ಕೆ ಕಾರಣವಾಗಿರೋದು ನಿರ್ಮಾಪಕ ರಮೇಶ್ ರೆಡ್ಡಿಯವರ ಸಿನಿಮಾ ಪ್ರೀತಿ.
Comments