ಎಂ. ರಮೇಶ್ ರೆಡ್ಡಿಯವರು ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡಿರುವ ಪಡ್ಡೆಹುಲಿ ಏಪ್ರಿಲ್ ಹತ್ತೊಂಬತ್ತರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಗುರುದೇಶಪಾಂಡೆ ನಿರ್ದೇಶನದ ಸಿನಿಮಾಗಳೆಂದ ಮೇಲೆ ನೆಲದ ಘಮದ ಕಥೆಗಳು ಕಣ್ಣಿಗೆ ಕಟ್ಟುತ್ತವೆ. ಅಂಥಾದ್ದೇ ನೆಲದ ಸೊಗಡಿನ ಕಥೆಯನ್ನು ಪಡ್ಡೆಹುಲಿಯೂ ಹೊಂದಿದೆ.
ಹಲವಾರು ವಿಚಾರಗಳಲ್ಲಿ ಪಡ್ಡೆಹುಲಿ ಮುಖ್ಯವಾಗುತ್ತೆ. ಶ್ರೇಯಸ್ ನಾಯಕನಾಗಿ ಲಾಂಚ್ ಆಗುತ್ತಿರೋ ಈ ಚಿತ್ರದ ಬಗ್ಗೆ ಹೇಳ ಹೊರಟರೆ ಮೊದಲು ಕಾಣಸಿಗೋದೇ ಹಾಡುಗಳ ಮೆರವಣಿಗೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಮಾಡಿರೋ ಹನ್ನೊಂದು ಹಾಡುಗಳೂ ಈಗ ಟ್ರೆಂಡಿಂಗ್‍ನಲ್ಲಿವೆ. ಅದರಲ್ಲಿ ಐದು ಹಾಡುಗಳಂತೂ ನಿಜಕ್ಕೂ ವಿಶೇಷವಾದವುಗಳು.
ಈಗಿನ ಟ್ರೆಂಡಿಗೆ ತಕ್ಕಂತೆ ಹಾಡುಗಳನ್ನೂ ರೂಪಿಸೋದು ಮಾಮೂಲು. ಆದರೆ ಎಂದೂ ಮರೆಯಬಾರದಂಥಾ, ಈ ಪೀಳಿಗೆಗೆ ಅಪರಿಚಿತವಾಗಿದ್ದ ಐದು ಹಾಡುಗಳನ್ನು ಈ ಚಿತ್ರದ ಮೂಲಕ ಮತ್ತೆ ಅನಾವರಣಗೊಳಿಸಲಾಗಿದೆ. ಬಸವಣ್ಣನವರ ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂಬ ವಚನವನ್ನು ಈಗಿನ ಟ್ರೆಂಡಿಗೆ ತಕ್ಕಂತೆ ರೂಪಿಸಲಾಗಿದೆ. ಈ ಮೂಲಕ ಬಸವಣ್ಣನ ಈ ವಚನ ಈ ಪೀಳಿಗೆಗೂ ಪರಿಚಯವಾಗಿದೆ.
ಇನ್ನುಳಿದಂತೆ ಜಿಪಿ ರಾಜರತ್ನಂ ಅವರ ರತ್ನನ್ ಪದ, ಡಿವಿಜಿಯವರ ಬದುಕು ಜಟಕಾಬಂಡಿ, ಕೆ ಎಸ್ ನರಸಿಂಹ ಸ್ವಾಮಿಯವರ ನಿನ್ನ ಪ್ರೇಮದ ಪರಿಯ ಮತ್ತು ಬಿ.ಆರ್ ಲಕ್ಷ್ಮಣರಾವ್ ಅವರ ಹೇಳಿ ಹೋಗು ಕಾರಣ ಹೋಗುವಾ ಮೊದಲು ಎಂಬ ಭಾವಗೀತೆಗಳನ್ನೂ ಕೂಡಾ ಹೊಸಾ ಸಂಗೀತ ಸ್ಪರ್ಶದೊಂದಿಗೆ ರೂಪಿಸಲಾಗಿದೆ. ವಿಶೇಷ ಅಂದರೆ, ಈ ಎಲ್ಲ ಹಾಡುಗಳಿಗೂ ಪಡ್ಡೆಹುಲಿಯ ಸೀನಿಗಳೂಗೂ ನೇರಾನೇರ ಕನೆಕ್ಷನ್ನುಗಳಿವೆಯಂತೆ!
No Comment! Be the first one.