ಸಾಹಸಸಿಂಹ ಡಾ ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಪಡ್ಡೆಹುಲಿ ಚಿತ್ರತಂಡ ಭಿನ್ನವಾದೊಂದು ಗಿಫ್ಟ್ ನೀಡಿದೆ. ನಾಯಕ ಶ್ರೇಯಸ್ ಅಭಿನಯಿಸಿರೋ ರ್‍ಯಾಪ್ ಸಾಂಗ್ ಒಂದನ್ನು ಬಿಡುಗಡೆ ಮಾಡಿತ್ತು. ಆ ಹಾಡು ಎಲ್ಲ ವಿಷ್ಣು ಅಭಿಮಾನಿಗಳ ಮನ ಗೆದ್ದಿದೆ!

ವಿಷ್ಣು ಅಂದರೆ ಅಭಿಮಾನಿಗಳ ಮನಸಲ್ಲಿ ಮೂಡಿಕೊಳ್ಳೋದು ನಾಗರಹಾವು ಚಿತ್ರದ ಪಾತ್ರ. ಆ ಎನರ್ಜಿಟಿಕ್ ಪಾತ್ರದ ಸೀನುಗಳ ಮೂಲಕವೇ ಆರಂಭವಾಗೋ ಈ ರ್‍ಯಾಪ್ ಸಾಂಗ್‌ನಲ್ಲಿ ವಿಷ್ಣು ಅಭಿನಯದ ಹೆಸರು ಮತ್ತವರ ಬಿರುದುಗಳನ್ನಿಟ್ಟುಕೊಂಡೇ ಸಾಹಿತ್ಯ ರಚಿಸಲಾಗಿದೆ.

ಈ ಹಾಡಿನಲ್ಲಿ ನಾಯಕ ಶ್ರೇಯಸ್ ಪಕ್ಕಾ ವಿಷ್ಣುವರ್ಧನ್ ಅವರ ನಾಗರಹಾವು ಗೆಟಪ್ಪಿನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಈ ರ್‍ಯಾಪ್ ಸಾಂಗ್ ಮೂಲಕ ತಮ್ಮೆಳಗಿನ ರಿಯಲ್ ವಿಷ್ಣು ಅಭಿಮಾನವನ್ನೂ ಕೂಡಾ ಜಾಹೀರು ಮಾಡಿದ್ದಾರೆ. ಶ್ರೇಯಸ್ ಅವರ ಅಭಿನಯ, ನಿರ್ದೇಶಕ ಗುರುದೇಶಪಾಂಡೆ ಅವರ ಶ್ರಮ ವಿಷ್ಣು ಅಭಿಮಾನಿಗಳ ವ್ಯಾಪಕ ಮೆಚ್ಚುಗೆಯ ಮೂಲಕ ಸಾರ್ಥಕವಾಗಿದೆ.

ಈ ಚಿತ್ರದಲ್ಲಿಯೂ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿಯೇ ಕಾಣಿಸಿಕೊಂಡಿರೋ ಕೆ ಮಂಜು ಪುತ್ರ ಶ್ರೇಯಸ್ ಈ ಹಾಡಿನಲ್ಲಿಯೂ ವಿಷ್ಟು ಗೆಟಪ್ಪಿನಲ್ಲಿ ಗಮನ ಸೆಳೆದಿದ್ದಾರೆ!

#

CG ARUN

ಕಡೆಗಾಲದಲ್ಲಿ ಜೊತೆಯಿದ್ದದ್ದು ಕಣ್ಣೀರು ಮಾತ್ರ!

Previous article

ಜ್ಯೂನಿಯರ್ ಕಿರಿಕ್ ಪಾರ್ಟಿಗೆ ಭರ್ಜರಿ ಗೆಲುವಿನ ಕಿಕ್ಕು!

Next article

You may also like

Comments

Leave a reply

Your email address will not be published. Required fields are marked *