ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡಿರೋ ಪಡ್ಡೆಹುಲಿ ಹಾಡುಗಳ ಮೂಲಕವೇ ಟ್ರೆಂಡಿಂಗ್ನಲ್ಲಿದೆ. ಇದನ್ನೊಂದು ಮ್ಯೂಸಿಕಲ್ ಹಿಟ್ ಆಗಿ ರೂಪಿಸಲು ಮುಂದಾಗಿರೋ ನಿರ್ದೇಶಕ ಗುರು ದೇಶಪಾಂಡೆ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದ್ದಾರೆ.
ಬದುಕು ಜಟಕಾ ಬಂಡಿ ಎಂಬ ಲಿರಿಕಲ್ ವಿಡಿಯೋ ಸಾಂಗ್ ಇಂದು ಬಿಡುಗಡೆಯಾಗಿದೆ. ಪಿ ಆರ್ ಕೆ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಿರೋ ಈ ಹಾಡು ಕೂಡಾ ಜನಮನ ಸೆಳೆಯೋ ಭರವಸೆ ಚಿತ್ರತಂಡಕ್ಕಿದೆ.
ಈವರೆಗೆ ಬಿಡುಗಡೆಯಾಗಿರೋ ಹಾಡುಗಳನ್ನು ಕೇಳಿರುವವರಲ್ಲಿಯೂ ಆ ಭರವಸೆ ಇದ್ದೇ ಇದೆ.
ಇವತ್ತಿನ ಟ್ರೆಂಡಿಗೆ ತಕ್ಕಂತೆ ಹಾಡುಗಳನ್ನೂ ರೂಪಿಸೋದು ಮಾಮೂಲು. ಆದರೆ ಎಂದೂ ಮರೆಯಬಾರದ, ಈ ಪೀಳಿಗೆಗೆ ಅಪರಿಚಿತವಾಗಿದ್ದ ಐದು ಹಾಡುಗಳನ್ನು ಈ ಚಿತ್ರದ ಮೂಲಕ ಮತ್ತೆ ಅನಾವರಣಗೊಳಿಸಲಾಗಿದೆ. ಬಸವಣ್ಣನವರ ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂಬ ವಚನವನ್ನು ಈಗಿನ ಟ್ರೆಂಡಿಗೆ ತಕ್ಕಂತೆ ರೂಪಿಸಲಾಗಿದೆ. ಈ ಮೂಲಕ ಬಸವಣ್ಣನ ಈ ವಚನ ಈ ಪೀಳಿಗೆಗೂ ಪರಿಚಯವಾಗಿದೆ.
ಇನ್ನುಳಿದಂತೆ ನಿನ್ನ ಪ್ರೇಮದ ಪರಿಯ, ಹೇಳಿ ಹೋಗು ಕಾರಣ ಮುಂತಾದ ಚೆಂದದ ಭಾವಗೀತೆಗಳನ್ನು ಪಡ್ಡೆಹುಲಿ ಚಿತ್ರಕ್ಕೆ ಅಳವಡಿಸಿಕೊಳ್ಳಲಾಗಿದೆ. ಈ ಮೂಲಕ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮೋಡಿಯನ್ನೇ ಮಾಡಿದ್ದಾರೆ. ಇದೀಗ ಬದುಕು ಜಟಕಾ ಬಂಡಿ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ.
No Comment! Be the first one.