ಪಡ್ಡೆಹುಲಿ ಚಿತ್ರದ ಕಡೆಯಿಚಿದ ಪ್ರೇಮಿಗಳಿಗೆಲ್ಲ ರಾಷ್ಟ್ರಗೀತೆಯಾಗುವಂಥಾ ಮೆಲೋಡಿಯಸ್ ಹಾಡೊಂದು ಬಿಡುಗಡೆಯಾಗಿದೆ. ಈ ಹಿಂದೆಯೇ ಚಿತ್ರತಂಡ ಇಂಥಾದ್ದೊಂದು ಸುಳಿವು ನೀಡಿತ್ತು. ಇದೀಗ ಯುವ ಮನಸುಗಳ ಭಾವಲೋಕವನ್ನ ಅರಳಿಸುವಂಥಾ, ಮೈ ಮನಸುಗಳನ್ನು ಆವರಿಸಿಕೊಳ್ಳುವಂಥಾ ಚೆಂದದ ಹಾಡೊಂದು ಅನಾವರಣಗೊಂಡಿದೆ.

ಒಂದು ಮಾತಲ್ಲೇ ನೂರು ಹೇಳಲೇ ಅಂತ ಶುರುವಾಗೋ ಈ ಹಾಡು ಪ್ರತೀ ಪ್ರೇಮಿಗಳ ಲಹ್ಲದಯಾಂತರಾಳದ ಮಾತುಗಳನ್ನೂ ಒಚಿದೇ ಮಾತಿನಲ್ಲಿ ಹೇಳುವಂತೆ ಮೂಡಿ ಬಂದಿದೆ. ಈ ಹಾಡು ಪ್ರತೀ ಯುವ ಪ್ರೇಮಿಗಳಿಗೂ ಒಂದಲ್ಲಾ ಒಚಿದು ರೀತಿಯಲ್ಲಿ ಕನೆಕ್ಟಾಗುತ್ತಲೇ ಮತ್ಯಾವುದೋ ಮಧುರವಾದ ಅನುಭವವನ್ನ ನೀಡುವಂತಿದೆ.

ಅಜನೀಶ್ ಲೋಕನಾಥ್ ಅವರ ಮ್ಯೂಸಿಕ್ ಮೋಡಿ ಈ ಮೂಲಕ ಮತ್ತೆ ಮುಂದುವರೆದಿದೆ. ಕರ್ನಾಟಕದ ಆರ್ಜಿತ್ ಸಿಂಣ್ ಎಂದೇ ಹೆಸರಾಗಿರುವ ಸಂಚಿತ್ ಹೆಗ್ಡೆಯ ಧ್ವನಿಯಲ್ಲಿ ಈ ಹಾಡು ಮೂಡಿ ಬಂದಿದೆ. ಬಿಡುಗಡೆಯಾಗುತ್ತಲೇ ಭರ್ಜರಿ ಓಪನಿಂಗ್ ಕೂಡಾ ಸಿಕ್ಕಿದೆ. ಒಟ್ಟಾರೆಯಾಗಿ ಈಗ ಹೊರ ಬಂದಿರೋ ಹಾಡು ಪಡ್ಡೆ ಹುಲಿ ಚಿತ್ರ ಪ್ರೇಮಿಗಳಿಗೆ ಕೊಟ್ಟಿರೋ ಗ್ರೇಟ್ ಗಿಫ್ಟ್. ನಾಯಕ ಶ್ರೇಯಸ್, ಗುರುದೇಶಪಾಂಡೆ ಸೇರಿದಂತೆ ಇಡೀ ಚಿತ್ರತಂಡದ ಶ್ರಮದಿಂದಲೇ ಈ ಸುಂದರ ಹಾಡು ಜೀವ ಪಡೆದಿದೆ.

https://youtu.be/FNzoLyWXrw4 #

CG ARUN

ಅಲಾದ್ದೀನ್’ ಟೀಸರ್ ಔಟ್; ಬ್ಲ್ಯೂ ಜಿನಿ ಪಾತ್ರದಲ್ಲಿ ವಿಲ್ ಸ್ಮಿತ್!

Previous article

ರಾಮೋಜಿರಾವ್ ಫಿಲ್ಮ್‌ಸಿಟಿಯಲ್ಲಿ ವಿಕ್ರಂ ’ಮಹಾವೀರ ಕರ್ಣ’

Next article

You may also like

Comments

Leave a reply

Your email address will not be published. Required fields are marked *