ಪ್ರೇಮಕವಿ ಬಿ.ಆರ್ ಲಕ್ಷ್ಮಣರಾಯರು ಬರೆದ ಹೇಳಿ ಹೋಗು ಕಾರಣ ಎಂಬ ಭಾವಗೀತೆ ಒಂದು ತಲೆಮಾರಿನ ಪ್ರೇಮ ಯಾತನೆಗೆ ಮದ್ದಾಗಿದೆ. ಸಿ ಅಶ್ವತ್ಥ್ ಅವರ ಕಂಠದಲ್ಲಿ ಪ್ರಸಿದ್ಧಿ ಪಡೆದಿದ್ದ ಈ ಹಾಡು ಪ್ರೇಮದ ಎಲ್ಲ ಭಾವಗಳನ್ನೂ ಉದ್ದೀಪಿಸಿದೆ, ನೋವುಗಳನ್ನ ಹಿವಾಗಿ ಸವರಿ ಸಂತೈಸಿದೆ. ಇದೇ ಭಾವಗೀತೆಯೀಗ ಅಜನೀಶ್ ಲೋಕನಾಥ್ ಮಾಂತ್ರಿಕ ಸಂಗೀತ ಸ್ಪರ್ಶದೊಂದಿಗೆ ಹೊಸ ತಲೆಮಾರನ್ನೂ ತಲುಪಿಕೊಂಡಿದೆ!
ಅಜನೀಶ್ ಲೋಕನಾಥ್ ಪಡ್ಡೆಹುಲಿ ಚಿತ್ರಕ್ಕಾಗಿ ಹೇಳಿ ಹೋಗು ಕಾರಣ ಗೀತೆಗೆ ಹೊಸಾ ಹುಟ್ಟು ನೀಡಿದ್ದಾರೆ. ಈ ವರೆಗೂ ಪಡ್ಡೆಹುಲಿಯ ಒಂದಷ್ಟು ಹಾಡುಗಳು ಹೊರ ಬಂದಿವೆ. ಅವೆಲ್ಲವೂ ಹಿಟ್ ಕೂಡಾ ಆಗಿವೆ. ಪ್ರತಿಯೊಂದು ಹಾಡಿನಲ್ಲಿಯೂ ಒಂದೊಂದು ವಿಶೇಷತೆಗಳೊಂದಿಗೇ ಪ್ರೇಕ್ಷಕರನ್ನ ತಲುಪಬೇಕೆಂಬುದು ಗುರುದೇಶಪಾಂಡೆ ಅವರ ಅಭಿಲಾಶೆ. ಅದರನ್ವಯವೇ ಈ ಹಾಡೀಗ ಹೊರ ಬಂದು ಎಲ್ಲೆಡೆ ಹರಿದಾಡುತ್ತಿದೆ.
ಈ ಹಾಡನ್ನು ಸಿದ್ಧಾರ್ಥ್ ಮಹಾದೇವನ್ ಮತ್ತು ಗುಬ್ಬಿ ಹಾಡಿದ್ದಾರೆ. ಬಿ ಆರ್ ಲಕ್ಷ್ಮಣರಾಯರು ಬರೆದ ಈ ಹಾಡು ಸಿ ಅಶ್ವತ್ಥ್ ಧ್ವನಿಯಲ್ಲಿ ಮಂದ್ರ ಸಂಗೀತದೊಂದಿಗೆ ಜನರನ್ನ ಆವರೆಇಸಿಕೊಂಡಿತ್ತು. ಅದಕ್ಕೀಗ ಇಂದಿನ ತಲೆಮಾರಿನ ಆವೇಗಗಳನ್ನ ಹೊಂದಿರುವ ರ್ಯಾಪ್ ಶೈಲಿಯನ್ನು ಹದವಾಗಿ ಬೆರೆಸಿ ಅಜನೀಶ್ ಹೊಸಾ ಟ್ರೆಂಡ್ ಹುಟ್ಟು ಹಾಕಿದ್ದಾರೆ.
ಈ ಹಾಡಿನ ಮೂಲಕವೇ ಶ್ರೇಯಸ್ ಅಭಿನಯದ ಪಡ್ಡೆಹುಲಿ ಚಿರತ್ರ ಮತ್ತಷ್ಟು ನಿರೀಕ್ಷೆ ಮೂಡಿಸಿದೆ
#
No Comment! Be the first one.