ರಾವ್ ಅಂಡ್ ರಾವ್ ಸಿನಿಮಾಸ್ ಬ್ಯಾನರ್ ನಲ್ಲಿ ದಾಮೋದರ್ ರಾವ್ ಮತ್ತು ನಾಮದೇವ ಭಟ್ಟರ್ ನಿರ್ಮಾಣ ಮಾಡಿರುವ ಪದ್ಮಾವತಿ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು ಪ್ರಮಾಣಪತ್ರವನ್ನು ನೀಡಿದೆ. ಪದ್ಮಾವತಿಯಲ್ಲಿ ವಿಕ್ರಮ್ ಆರ್ಯ ಮತ್ತು ದಾಮೋದರ್ ಪಾರಗೆ ಇಬ್ಬರು ನಾಯಕಿದ್ದಾರೆ.
ಹೆಣ್ಣಿನ ಮನದ ಭಾವನೆಗಳನ್ನು ಆಕೆಯ ತಪ್ಪು ಒಪ್ಪುಗಳನ್ನು ಪ್ರತಿನಿಧಿಸುವಂತಹ ಕಥಾಹಂದರವಿದ್ದು ಒಂದು ಪಕ್ಕಾ ಲವ್ ಸ್ಟೋರಿ ಪ್ಯಾಕೇಜನ್ನು ಹೊಂದಿದೆ. ಇದು ಮಹಿಳಾಪ್ರಧಾನ ಚಿತ್ರವೂ ಆಗಿದೆ. ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗುವ ಸಾಧ್ಯತೆ ಇದೆ. ಮಿಥುನ್ ಚಂದ್ರಶೇಖರ್ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಶೋಯಬ್ ಅಹಮ್ಮದ್ ಛಾಯಾಗ್ರಹಣ, ದಿನೇಶ್ಕುಮಾರ್ ಸಂಗೀತ, ಈಶ್ವರ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ, ತ್ರಿಭುವನ್ ನೃತ್ಯನಿರ್ದೇಶನ, ಪ್ರೇಮ್ ಸಾಯಿ ಸಾಹಿತ್ಯ, ಲತ ಎಸ್. ಕಥೆ –ಚಿತ್ರಕತೆ ಇದೆ. ವಿಕ್ರಮ್ ಆರ್ಯ, ಸಾಕ್ಷಿ ಮೇಘನಾ, ದಾಮೋದರ್ ಪಾರಗೆ, ರಾಘವ ಕಲಾಲ್, ನಭಿರಸುಲ್, ಸುರೇಶ್, ಸ್ವಾಮಿಗೌಡ, ಅಭಿಲಾಷ್, ಶರಣ್ ಗಿನ್ಕೇರಿ, ಶಿವಮೊಗ್ಗ ರಾಮಣ್ಣ, ಕೀರ್ತಿ ಸಿ.ಎನ್., ರಾಜೇಶ್ವರಿ ಪಾಂಡೆ ಅರ್ಚನಾ ಶೆಟ್ಟಿ ಇನ್ನು ಮುಂತಾದವರ ತಾರಾಬಳಗವಿದೆ.
No Comment! Be the first one.