ಕಿಚ್ಚ ಸುದೀಪ್ ಪೈಲ್ವಾನ್ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿಕೊಂಡಿದ್ದಾರೆ. ಇದರ ಬೆನ್ನಿಗೇ ಕೋಟಿಗೊಬ್ಬ 3 ಚಿತ್ರದ ಚಿತ್ರೀಕರಣದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಆದರೆ ಅದೆಷ್ಟೇ ಬ್ಯುಸಿಯಾಗಿದ್ದರೂ ಕೂಡಾ ಆಗಾಗ ತಮ್ಮ ಆಪ್ತ ವಲಯದವರನ್ನು ಕಿಚಾಯಿಸುತ್ತಾ ಆ ಮೂಲಕ ಸಂಭ್ರಮಿಸೋದು ಸುದೀಪ್ ಅವರ ಸ್ಪೆಷಾಲಿಟಿ. ಹಾಗೆಯೇ ಅವರೀಗ ಪೈಲ್ವಾನ್ ನಿರ್ದೇಶಕರಾದ ಕೃಷ್ಣ ಅವರನ್ನು ಶರ್ಟು ಬಿಚ್ಚಿ ನಿಲ್ಲಿಸೋವಂಥಾದ್ದೊಂದು ಚಾಲೆಂಜ್ ಮಾಡಿದ್ದಾರೆ! ಸುದೀಪ್ ಪೈಲ್ವಾನ್ ಚಿತ್ರಕ್ಕಾಗಿ ದೇಹವನ್ನು ಹುರಿಗೊಳಿಸಿಕೊಂಡಿದ್ದ ವಿಚಾರವೇ ಸೆನ್ಸೇಷನ್ ಸೃಷ್ಟಿಸಿರೋದೀಗ ಇತಿಹಾಸ, ಕನ್ನಡ ಮಾತ್ರವಲ್ಲದೇ ಈ ಸಿನಿಮಾ ಬಗ್ಗೆ ಬೇರೆ ಭಾಷೆಗಳಲ್ಲಿಯೂ ನಿರೀಕ್ಷೆ ಮೂಡಿಕೊಂಡಿರೋದರ ಹಿಂದೆ ಈ ವಿಚಾರವೂ ಕೆಲಸ ಮಾಡಿದೆ. ಹೀಗೆ ಶ್ರಮ ವಹಿಸಿ ಬಾಡಿ ಬಿಲ್ಡ್ ಮಾಡಿಕೊಂಡಿದ್ದ ಸುದೀಪ್ ಹೀಗೆ ದೇಹವನ್ನು ಕಟ್ಟುಮಸ್ತಾಗಿ ಸಜ್ಜುಗೊಳಿಸಿಕೊಂಡ ಫೋಟೋ ಹಾಕುವಂತೆ ಅಭಿಮಾನಿಗಳಿಗೂ ಸಾಮಾಜಿಕ ಜಾಲತಾಣಗಳ ಮೂಲಕ ಒಂದು ಚಾಲೆಂಜ್ ಮಾಡಿದ್ದರು.
ಇಂಥಾದ್ದೊಂದು ಚಾಲೆಂಜಿಗೆ ಕಿಚ್ಚನ ಅಭಿಮಾನಿಗಳ ಕಡೆಯಿಂದ ವ್ಯಾಪಕ ಪ್ರತಿಕ್ರಿಯೆ ಬಂದಿತ್ತು. ಅದೆಷ್ಟೋ ಅಭಿಮಾನಿಗಳು ಈ ಪೈಲ್ವಾನ್ ಚಾಲೆಂಜ್ ಸ್ವೀಕರಿಸಿ ತಮ್ಮ ದೇಹಸಿರಿಯ ಫೋಟೋ ಹಾಕಿಕೊಂಡಿದ್ದರು. ಇದೀಗ ಸುದೀಪ್ ಟ್ವಿಟರ್ ಮೂಲಕ ಪೈಲ್ವಾನ್ ನಿರ್ದೇಶಕ ಕೃಷ್ಣ ಅವರಿಗೂ ಇಂಥಾದ್ದೇ ಚಾಲೆಂಜ್ ಮಾಡಿದ್ದಾರೆ. ಪೈಲ್ವಾನ್ ಚಾಲೆಂಜಿಗೆ ಎಲ್ಲರೂ ಸ್ಪಂದಿಸಿದ್ದಾರೆ. ಈಗ ನಿರ್ದೇಶಕ ಕೃಷ್ಣ ಅವರೂ ಕೂಡಾ ಶರ್ಟು ಬಿಚ್ಚಿ ಫೋಟೋ ಹಾಕಿಕೊಳ್ಳುವ ಮೂಲಕ ಈ ಚಾಲೆಂಜನ್ನು ಸ್ವೀಕರಿಸಬೇಕು ಅಂತ ಬರೆದುಕೊಂಡಿದ್ದಾರೆ.
ಇದನ್ನು ಕಂಡ ನಿರ್ದೇಶಕ ಕೃಷ್ಣ ಕ್ರಮೆಯಿರಲಿ ಸರ್ ಅಂತ ಕೈ ಮುಗಿಯೋ ಮೂಲಕ ಜಾರಿಕೊಂಡಿದ್ದಾರೆ!
No Comment! Be the first one.