ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಕ್ರೇಜ್ ದಿನೇ ದಿನೇ ಏರುತ್ತಲೇ ಇದೆ. ಭಾರತ ಮಾತ್ರವಲ್ಲದೇ ನೆರೆ ಹೊರೆಯ ರಾಷ್ಟ್ರಗಳಲ್ಲೂ ಪೈಲ್ವಾನ್ ಹವಾ ಜೋರಾಗಿದ್ದು, ನೇಪಾಳ, ಭೂತಾನ್ ದೇಶಗಳಲ್ಲೂ ಪೈಲ್ವಾನ್ ಬಿಡುಗಡೆಯಾಗಲಿದೆ. ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದು ಹಿಂದಿ ವರ್ಷನ್ ನಲ್ಲಿ ಭಾರತದ ನೆರೆಹೊರೆಯ ರಾಷ್ಟ್ರಗಳಲ್ಲೂ ಬಿಡುಗಡೆಯಾಗುತ್ತಿರುವುದು ಕನ್ನಡಿಗರಲ್ಲಿ ಸಂತಸ ಮೂಡಿಸಿದೆ.

https://twitter.com/KicchaSudeep/status/1148831724664524800

ಸದ್ಯ ಚಿತ್ರತಂಡ ಶ್ರೀಲಂಕಾ ಹಾಗೂ ಪಾಕಿಸ್ತಾನ ರಾಷ್ಟ್ರಗಳಲ್ಲೂ ಸಿನಿಮಾ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಟ್ವಿಟ್‌ ಮಾಡಿರುವ ಸುದೀಪ್‌, ನಮ್ಮ ಕುಟುಂಬ ಇನ್ನಷ್ಟು ದೊಡ್ಡದಾಗಿದ್ದು, ಜೀ ಸ್ಟುಡಿಯೋಸ್‌ ಮೂಲಕ ಚಿತ್ರ ಉತ್ತರ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದ್ದಾರೆ. ಉತ್ತರ ಭಾರತದ ವಿತರಣೆಯ ಹಕ್ಕನ್ನು ಜೀ ಸ್ಟುಡಿಯೋಸ್ ಖರೀದಿಸಿದ್ದಕ್ಕೆ ಖುಷಿಯಲ್ಲಿರುವ ನಿರ್ದೇಶಕ ಕೃಷ್ಣ ಪೈಲ್ವಾನ್ ಒಂದು ಯೂನಿವರ್ಸಲ್ ಸಬ್ಜೆಕ್ಟ್. ಹಾಗಾಗಿ ಎಲ್ಲ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ. ಇದರಿಂದ ನನ್ನ ಮೇಲಿನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ ಎಂದಿದ್ದಾರೆ.

 

CG ARUN

ಇಂಡಿಯಾ ವರ್ಲ್ಡ್ ಕಪ್ ಸೆಮಿಫೈನಲ್ ಸೋತಿದಕ್ಕೆ ಗೊಳೋ ಎಂದ ಪಾರುಲ್ ಯಾದವ್!

Previous article

ಫೇಸ್ ಬುಕ್ ಗೆ ಶಿವಣ್ಣ ಎಂಟ್ರಿ!

Next article

You may also like

Comments

Leave a reply

Your email address will not be published. Required fields are marked *