ಸದ್ಯ ಟೀಸರ್ , ಪೋಸ್ಟರ್  ಮೂಲಕವೇ  ಪ್ರೇಕ್ಷಕರಲ್ಲಿ  ಪೈಲ್ವಾನ್  ಸಿನಿಮಾ  ಸಾಕಷ್ಟು  ಹವಾ ಕ್ರಿಯೇಟ್ ಮಾಡಿದೆ.  ಈ ಪೈಲ್ವಾನ್  ಸಿನಿಮಾದ ಬಗ್ಗೆ  ಅಭಿಮಾನಿಗಳು  ಸಾಕಷ್ಟು  ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಯಾಕೆಂದರೆ ಮೊದಲನೇ  ಬಾರಿಗೆ  ಕಿಚ್ಚ  ಸುದೀಪ್  ಅವರು ತಮ್ಮ ದೇಹವನ್ನ  ಹುರಿಗೊಳಿಸಿಕೊಂಡು ಕ್ಯಾಮೆರಾ  ಮುಂದೆ  ಬಂದಿದ್ದಾರೆ. ಅಲ್ಲದೇ  ಅವರು  ಕುಸ್ತಿಪಟು ಮತ್ತು ಬಾಕ್ಸಿಂಗ್  ಪಟುವಾಗಿ ಈ ಚಿತ್ರದಲ್ಲಿ  ಕಾಣಿಸಿಕೊಂಡಿದ್ದಾರೆ .ಆದರೆ  ಈ ಸಿನಿಮಾ  ಯಾವಾಗ ರಿಲೀಸ್  ಆಗುತ್ತದೆ ಎಂಬುವುದರ ಬಗ್ಗೆ  ಅಭಿಮಾನಿಗಳಲ್ಲಿ ಒಂದು ಪ್ರಶ್ನೆ  ಕಾಡತೊಡಗಿತ್ತು.

ಆಗಸ್ಟ್  ತಿಂಗಳಲ್ಲೇ ಸಿನಿಮಾ ಬಿಡುಗಡೆಯಾಗುತ್ತದೆ ಎಂಬುವುದು ಪಕ್ಕಾ  ಆದರೂ  ಕೂಡ  ನಿರ್ದಿಷ್ಟ ದಿನ ಯಾವುದು ಅಂತಾ  ಗೊತ್ತಿರಲಿಲ್ಲ. ಇನ್ನು  ಆಗಸ್ಟ್  29ಕ್ಕೆ  ಈ ಚಿತ್ರ ರಿಲೀಸ್ ಆಗುತ್ತದೆ  ಎಂದು  ಹೇಳಲಾಗಿತ್ತು. ಈ ಬಗ್ಗೆ  ಚಿತ್ರತಂಡ  ಸ್ಪಷ್ಟನೆ  ನೀಡಿದ್ದು, ಈ ಚಿತ್ರಕ್ಕೆ  ಪೋಸ್ಟ್  ಪ್ರೋಡಕ್ಷನ್  ನಡೆಯುತ್ತಿದೆ. ಹಾಗಾಗಿ ನಾವು ಕೂಡ  ಈ ಸಿನಿಮಾವನ್ನು  ಆಗಸ್ಟ್  29ಕ್ಕೆ ಬಿಡುಗಡೆ ಮಾಡಬೇಕೆಂಬ ಗುರಿ ಇಟ್ಟುಕೊಂಡಿದ್ದೇವೆ. ಪೈಲ್ವಾನ್  ಸಿನಿಮಾ ಕುರಿತು  ಚಿತ್ರತಂಡ  ಬೆಂಗಳೂರಿನಲ್ಲಿ  ಪತ್ರಿಕಾಗೋಷ್ಠಿ  ಕರೆದಿತ್ತು.  ಈ  ವೇಳೆ  ಸಿನಿಮಾದ ಬಗ್ಗೆ ಹಂತ ಹಂತವಾಗಿ  ಚಿತ್ರತಂಡದವರೇ  ಹೇಳಿಕೊಂಡರು. ನಿರ್ದೇಶಕ  ಕೃಷ್ಣ  ಮಾತಾನಾಡಿ, ಈಗಾಗಲೇ  ಈ ಚಿತ್ರದ  ಶೂಟಿಂಗ್  ಮುಗಿದಿದೆ.  ಸದ್ಯ ಈ ಸಿನಿಮಾದ  ಗ್ರಾಫಿಕ್ಸ್  ಕೆಲಸ ಮಾತ್ರ  ಬಾಕಿಯಿದೆ . ಪೈಲ್ವಾನ್  ಅಂದರೆ ಕ್ರೀಡಾ  ಸಿನಿಮಾವಾಗಿ ಮಾಡಬೇಕು  ಅಂತಾ ಪ್ಲ್ಯಾನ್  ಮಾಡಿಕೊಂಡಿದ್ದೆ . ಅದೇ ರೀತಿ  ಸುದೀಪ್  ಜೊತೆ ಮಾತುಕತೆ  ನಡೆಸಿ ಮಾಡಿರುವಂತಹ  ಸಿನಿಮಾವಾಗಿದೆ ಎಂದು ಹೇಳಿದ್ದರು. ಇನ್ನು ಸಿನಿಮಾದಲ್ಲಿ ಹೇಳೋಕೆ  ಜಾಸ್ತಿ ಇಲ್ಲ.  ಮಾಡುವುದು ಜಾಸ್ತಿ ಇತ್ತು. ಈ ಸಿನಿಮಾದಲ್ಲಿ ಸಾಕಷ್ಟು  ಶ್ರಮಕೊಟ್ಟು  ಮಾಡಲಾಗಿದೆ. ಇಂತಹ ಸಿನಿಮಾ ಮಾಡುವಾಗ  ಪಾತ್ರ ಏನು  ಬೇಡಿಕೆ  ಇಡುತ್ತೋ ಅದನ್ನ ಓರ್ವ ನಟ ಪೂರೈಸಲೇ ಬೇಕಾಗುತ್ತದೆ. ಪೈಲ್ವಾನ್  ಅಂತಾ  ಹೆಸರು  ಇಟ್ಟುಕೊಂಡು  ಸೆಟ್ ನಲ್ಲಿ  ಬಟ್ಟೆ ಬಿಚ್ಚಿದಾಗ  ಮಾನ ಮಾರ್ಯಾದೆ  ಹೋಗಬಾರದು. ಹಾಗಾಗಿ ಈ ಚಿತ್ರಕ್ಕಾಗಿ  ನಾನು ಸಾಕಷ್ಟು ವರ್ಕೌಟ್  ಮಾಡಿದ್ದೆ. ಈ ಚಿತ್ರದ  ಚಿತ್ರೀಕರಣದ ವೇಳೆ  ಮೊದ ಮೊದಲು ಬಟ್ಟೆ  ಬಿಚ್ಚುವುದಕ್ಕೆ  ಮುಜುಗರವಾಗುತ್ತಿತ್ತು. ಕೊನೆ ಕೊನೆಗೆ  ನಾನೇ  ಹೊಂದಿಕೊಂಡು ಬಿಟ್ಟೇ  ಎಂದರು  ಸುದೀಪ್ .

ಈ ಸಿನಿಮಾದಲ್ಲಿ  ಕುಸ್ತಿ, ಬಾಕ್ಸಿಂಗ್  ಜೊತೆ  ಎಮೋಷನಲ್  ಕೂಡ  ಇದೆ  ಎಂದು ನಟ  ಸುದೀಪ್  ಹೇಳಿದ್ದಾರೆ.  ಪೈಲ್ವಾನ್ ಕಿಚ್ಚ ಸುದೀಪ್  ಇನ್ನು ಸಿನಿಮಾ ಕರಿಯರ್ ನಲ್ಲಿ  ಬಿಗ್  ಸ್ಪೆಷಲ್  ಅಂತಾನೆ  ಹೇಳಬಹುದು.  ಯಾಕಂದರೆ ಇಲ್ಲಿಯವರೆಗೂ  ಒಂದು  ಚಿತ್ರಕ್ಕಾಗಿ  ಸುದೀಪ್  ಅವರು  ಜಿಮ್ ನಲ್ಲಿ  ಸಿಕ್ಕಾಪಟ್ಟೆ  ಬೆವರು  ಹರಿಸಿದ  ಉದಾಹರಣೆ  ಇರಲಿಲ್ಲ.  ಜಿಮ್  ಅಂದರೆ  ಆಸಕ್ತಿ ಇರದ  ಕಿಚ್ಚ ಸುದೀಪ್,  ಈ ಚಿತ್ರಕ್ಕಾಗಿ ತಿಂಗಳುಗಟ್ಟಲೇ  ವರ್ಕೌಟ್ , ಡಯಟ್  ಮಾಡಿದ್ದಾರೆ.  ಸುದೀಪ್  ಪತ್ರಿಕಾಗೋಷ್ಠಿಯಲ್ಲಿ  ಕೆಲವರಿಗೆ  ಟಾಂಗ್  ಕೊಟ್ಟರು. ಸುದೀಪ್  ಜಿಮ್ ನಲ್ಲಿ  ವರ್ಕೌಟ್ ಮಾಡಿ ಬಾಡಿ ಬೆಳೆಸಿಲ್ಲ, ಅದು ಸಿಜಿ  ಅಂತಾ  ಕೆಲವರು ಟೀಕಿಸಿದ್ದರು. ಇದಕ್ಕೆ ಸುದೀಪ್  ಅವರು  ಸರಿಯಾಗಿಯೇ  ಪ್ರತ್ಯುತ್ತರ  ಕೊಟ್ಟಿದ್ದಾರೆ. ಅಂದಹಾಗೆ  ಈಗಾಗಲೇ  ಈ ಸಿನಿಮಾದ  ಥೀಮ್  ಸಾಂಗ್ ವೊಂದನ್ನು  ಚಿತ್ರತಂಡ  ರಿಲೀಸ್  ಮಾಡಿ ದೊಡ್ಡ  ಧಮಾಕವನ್ನೇ ಸೃಷ್ಠಿಸಿತ್ತು.  ಸದ್ಯ ಈ ಹಾಡು ಟ್ರೆಂಡ್  ಕ್ರಿಯೇಟ್  ಮಾಡಿದ್ದು,  ಅದರ ಬೆನ್ನಲ್ಲೆ  ಚಿತ್ರತಂಡ   ಇಂದು  ಕಣ್ಮಣಿಯೇ  ಅನ್ನೋ ಮತ್ತೊಂದು  ರೊಮ್ಯಾಂಟಿಕ್  ಸಾಂಗ್  ರಿಲೀಸ್  ಮಾಡಿದೆ.  ಸುದೀಪ್  ಹಾಗೂ  ಆಕಾಂಕ್ಷ ಒಟ್ಟಾಗಿ  ಡ್ಯೂಯೆಟ್  ಹಾಡಿರೋ  ಸಾಂಗ್  ಇದಾಗಿದ್ದು,  ಹಾಡಿಗೆ ನಾಗೇಂದ್ರ  ಪ್ರಸಾದ್  ಸಾಹಿತ್ಯ  ಹಾಗೂ  ಅರ್ಜುನ್  ಜನ್ಯಾ  ಸಂಗೀತ  ನಿರ್ದೇಶಿಸಿದ್ದಾರೆ.  ಇನ್ನು   ಸಿನಿಮಾ ಕನ್ನಡ, ತಮಿಳು.  ತೆಲಗು.  ಹಿಂದಿ, ಮಲಯಾಳಂ ಸೇರಿದಂತೆ  ಒಟ್ಟು  ಪಂಚ ಭಾಷೆಗಳಲ್ಲಿ  ಪೈಲ್ವಾನ್  ತೆರೆಕಾಣಲಿದೆ.  ಈ ಸಿನಿಮಾದಲ್ಲಿ  ಕಬೀರ್  ದುಹಾನ್  ಸಿಂಗ್ , ಸುನೀಲ್  ಶೆಟ್ಟಿ, ಶರತ್  ಲೋಹಿತಾಶ್ವ ಸೇರಿದಂತೆ  ದೊಡ್ಡ  ತಾರಾಬಳಗವೇ  ಇದ್ದು  ಸಿಕ್ಕಾಪಟ್ಟೆ  ನಿರೀಕ್ಷೆ  ಹೆಚ್ಚಿಸಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ವಿಷ್ಣು ಸರ್ಕಲ್‌ನಲ್ಲಿ ಹಾಡುಗಳ ಸೌಂಡು!

Previous article

ಕುರುಕ್ಷೇತ್ರದ ಮತ್ತೊಂದು ಟ್ರೇಲರ್ ರಿಲೀಸ್!

Next article

You may also like

Comments

Leave a reply

Your email address will not be published. Required fields are marked *