ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಮುಂದಿನ ವರ ಮಹಾಲಕ್ಷ್ಮಿ ಹಬ್ಬದಂದೆ ಬಿಡುಗಡೆಯಾಗಬೇಕಿತ್ತು. ಆದರೆ ಮುಂಬೈನಲ್ಲಿ ಸುರಿದ ಧಾರಾಕಾರ ಮಳೆಯ ಪರಿಣಾಮವಾಗಿ ಚಿತ್ರದ ಗ್ರಾಫಿಕ್ಸ್ ಕೆಲಸಗಳು ಲೇಟ್ ಆಗುವಂತೆ ಮಾಡಿಬಿಟ್ಟಿತ್ತು. ಇನ್ನು ಸೆಪ್ಟೆಂಬರ್ 2 ಕಿಚ್ಚ ಸುದೀಪ್ ಹುಟ್ಟುಹಬ್ಬದಂದೇ ಪೈಲ್ವಾನ್ ಬಿಡುಗಡೆಯಾಗಲಿದೆ ಎಂಬ ಸುದ್ದಿಯೂ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿತ್ತು. ಕಿಚ್ಚನ ಅಭಿಮಾನಿಗಳು ಡಬಲ್ ಖುಷಿಯಲ್ಲಿ ಅದಕ್ಕೂ ಸಿದ್ಧತೆ ಮಾಡಿಕೊಳ್ಳಲು ಪ್ರಾರಂಭಿಸಿದ್ದರು. ಆದರೆ ಆ ಪ್ಲ್ಯಾನ್ ಕೂಡ ಫ್ಲಾಪ್ ಆಗಿಹೋಯಿತು.
ಇನ್ನು ಆಗಸ್ಟ್ ಗೆ ಪೈಲ್ವಾನ್ ರಿಲೀಸ್,ಆಗ ಈಗ ಎನ್ನುತ್ತಿದ್ದ ನಿರ್ದೇಶಕ ಕೃಷ್ಣ ಅವರು ನಿಜಕ್ಕೂ ಪೈಲ್ವಾನ್ ಬಿಡುಗಡೆ ತಡವಾದದ್ದೇಕೆ ಎಂಬುದನ್ನು ಎಲ್ಲಿಯೂ ಬಹಿರಂಗಪಡಿಸಲಿಲ್ಲ. ಆದರೆ ಸದ್ಯ ಚಿತ್ರತಂಡವೇ ಇದಕ್ಕೆ ಉತ್ತರ ನೀಡಿದ್ದು ಪೈಲ್ವಾನ್ ಥಿಯೇಟರ್ ಸಮಸ್ಯೆಯಿಂದ ತಡವಾಯಿತು ಎಂದು ಹೇಳಿದ್ದಾರೆ.
ಹೌದು ಪೈಲ್ವಾನ್ ಬಹುಭಾಷೆಗಳಲ್ಲಿ ರಿಲೀಸ್ ಮಾಡಲು ಯೋಜಿಸಲಾಗಿದ್ದು, ಪ್ಯಾನ್ ಇಂಡಿಯಾ ಪೈಲ್ವಾನ್ ರಿಲೀಸ್ ಆಗುವ ಸಾಧ್ಯತೆ ಇದೆ. ಮಾಮೂಲಾಗಿ ಇದಕ್ಕೆ ಭಾರತದೆಲ್ಲೆಡೆ ಸ್ಕ್ರೀನ್ ಗಳನ್ನು ಮೊದಲೇ ಬುಕ್ ಮಾಡಬೇಕಾಗುತ್ತದೆ. ಆದರೆ ಬಹುಭಾಷೆಗಳಲ್ಲಿಯೂ ಸಾಕಷ್ಟು ಸ್ಟಾರ್ ಕಲಾವಿದರ ಸಿನಿಮಾಗಳು ಬಿಡುಗಡೆಯಾಗುತ್ತಲೇ, ಬಿಡುಗಡೆಯಾಗಬೇಕಾದ ಕಾರಣದಿಂದ ಪೈಲ್ವಾನ್ ಗೆ ಥಿಯೇಟರ್ ಸಮಸ್ಯೆ ಎದುರಾಗುತ್ತಲೇ ಇದೆ. ಅದನ್ನು ಮನಗಂಡ ಪೈಲ್ವಾನ್ ಚಿತ್ರತಂಡ ಬಿಡುಗಡೆ ತೊಂದರೆ ನಿವಾರಿಸಿಕೊಂಡು ಸೆಪ್ಟೆಂಬರ್ 12ರಂದು ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದೆ. ಪೈಲ್ವಾನ್ ಪಂಚಭಾಷೆಗಳಲ್ಲಿ ಏಕಕಾಲಕ್ಕೆ 2500 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿದೆ.