ಅಬ್ಬರಿಸೋಕೆ ಪೈಲ್ವಾನ್ ರೆಡಿ!

ಹೆಬ್ಬುಲಿ ಕೃಷ್ಣ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ನಿನ ಪೈಲ್ವಾನ್ ಸಿನಿಮಾ ಈಗಾಗಲೇ ಟೀಸರ್ ಹಾಗೂ ಫೋಸ್ಟರ್ ಗಳ ಮುಖಾಂತರ ಅಭಿಮಾನಿಗಳಲ್ಲಿ ಒಂದು ಮಟ್ಟಿನ ಕ್ರೇಜ್ ಹುಟ್ಟುಹಾಕಿದೆ. ಸದ್ಯ ಪೈಲ್ವಾನ್ ಯಾವಾಗ ರಿಲೀಸ್ ಭಾಗ್ಯ ಕಾಣುತ್ತದೋ ಎನ್ನುವ ನಿರೀಕ್ಷೆಯಲ್ಲಿ ಕಿಚ್ಚನ ಹುಡುಗರಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಫೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಪೈಲ್ವಾನ್ ಚಿತ್ರತಂಡ ಬ್ಯುಸಿಯಾಗಿದೆ.

ಹೆಬ್ಬುಲಿ ಕೃಷ್ಣರೇ ಅಗಲಿ, ಸುದೀಪ್ ಅವರೇ ಆಗಲಿ ಎಲ್ಲಿ ಕಂಡರೂ ಅಭಿಮಾನಿಗಳು ಸಿನಿಮಾ ರಿಲೀಸ್ ಯಾವಾಗ ಆಗುತ್ತದೆ ಎಂಬ ಪ್ರಶ್ನೆಯನ್ನೇ ಎತ್ತುತ್ತಿದ್ದರು. ಕಡೆಗೂ ಹೆಬ್ಬುಲಿ ಕೃಷ್ಣ ಸಿನಿಮಾ ರಿಲೀಸ್ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದು, ಕೆಲವೇ ದಿನಗಳಲ್ಲಿ ರಿಲೀಸ್ ದಿನಾಂಕವನ್ನು ಅನೌನ್ಸ್ ಮಾಡುತ್ತೇವೆಂದು ಕಿಚ್ಚನ ಅಭಿಮಾನಿಗಳ ಮನ ತಣಿಸಿದ್ದಾರೆ. ಇನ್ನು ಚಿತ್ರದಲ್ಲಿ ನಾಯಕಿಯಾಗಿ ಆಕಾಂಕ್ಷ ಸಿಂಗ್ ಕಾಣಿಸಿಕೊಂಡಿದ್ದು ಕಬೀರ್ ದುಹಾನ್ ಸಿಂಗ್, ಸುನೀಲ್ ಶೆಟ್ಟಿ, ಶರತ್ ಲೋಹಿತಾಶ್ವ ಸೇರಿದಂತೆ ಬಹುದೊಡ್ಡ ತಾರಾಂಗಣವೇ ಪೈಲ್ವಾನ್ ಗಿದೆ. ಸದ್ಯದಲ್ಲೇ ಕಿಚ್ಚ ಪೈಲ್ವಾನ್ ಪೋಷಾಕಿನಲ್ಲಿ ಥಿಯೇಟರ್ ನಲ್ಲಿ ಅಬ್ಬರಿಸಲಿದ್ದಾರೆ.


Posted

in

by

Tags:

Comments

Leave a Reply