ಉತ್ತರ ಕರ್ನಾಟಕ ನೆರೆ ಹಾವಳಿಯ ನೋವಿನಿಂದ ಚಿತ್ರದುರ್ಗದಲ್ಲಿ ರಿಲೀಸ್ ಆಗಬೇಕಿದ್ದ ಪೈಲ್ವಾನ್ ಆಡಿಯೋವನ್ನು ಮುಂದೂಡಿದ್ದಲ್ಲದೇ ಬೆಂಗಳೂರಿಗೆ ಸ್ಥಳ ಬದಲಾವಣೆ ಮಾಡಿಕೊಂಡಿರುವ ಚಿತ್ರತಂಡ ಸದ್ಯ ಪೈಲ್ವಾನ್ ಚಿತ್ರದ ಧ್ರುವತಾರೆ ಎಂಬ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ. ವಿಶೇಷವೆಂದರೆ ಈ ಹಾಡನ್ನು ಕರ್ನಾಟಕ, ಮಹಾರಾಷ್ಟ್ರ ಕೇರಳ ನೆರೆ ಸಂತ್ರಸ್ತರ ನೆರವಿಗೆ ಬಂದ ಧ್ರುವತಾರೆಗಳಾದ ಭಾರತೀಯ ಸೇನೆ, ನೆರೆ ಪರಿಹಾರ ತಂಡಗಳು, ಸ್ವಯಂ ಸೇವಾ ಕಾರ್ಯಕರ್ತರಿಗೆ ಪೈಲ್ವಾನ್ ಚಿತ್ರತಂಡ ಸಮರ್ಪಿಸಿದೆ.
ರಿಲೀಸ್ ಆಗಿರುವ ಧ್ರುವತಾರೆ ಎಂಬ ಲಿರಿಕಲ್ ಹಾಡು ಫೀಲಿಂಗ್ ಸಾಂಗ್ ಆಗಿದ್ದು, ಸುನೀಲ್ ಶೆಟ್ಟಿ, ನಾಯಕಿ ಆಕಾಂಕ್ಷ ಹಾಗೂ ಸುದೀಪ್ ಅವರ ಸೀನ್ ಪಿಕ್ಚರ್ ಗಳನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಕಿಚ್ಚ ಸುದೀಪ್ ಅಭಿನಯಿಸಿರುವ ಈ ಸಿನಿಮಾವನ್ನು ಹೆಬ್ಬುಲಿ ಕೃಷ್ಣ ನಿರ್ದೇಶನದ ಜತೆಗೆ ನಿರ್ಮಾಣವನ್ನು ಮಾಡುತ್ತಿದ್ದು, ಮುಂದಿನ ತಿಂಗಳ ಸೆಪ್ಟೆಂಬರ್ 12ರಂದು ಪೈಲ್ವಾನ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ಇದೇ ಆಗಸ್ಟ್ 18ರ ಭಾನುವಾರದಂದು ಬೆಂಗಳೂರಿನಲ್ಲಿ ಸಿಂಪಲ್ ಆಗಿ ಪೈಲ್ವಾನ್ ಆಡಿಯೋ ಕಾರ್ಯಕ್ರಮವೂ ಜರುಗಲಿದೆ.