ಎಲ್ಲ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಪೈಲ್ವಾನ್ ರಿಲೀಸ್ ಆಗಿ ಭಾರತದಾದ್ಯಂತ ಕಿಚ್ಚ ತೊಡೆತಟ್ಟಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕುತ್ತಿದ್ದ ಚಿತ್ರತಂಡ ಅಂತಿಮವಾಗಿ ಇದೇ ಸೆಪ್ಟೆಂಬರ್ ೧೨ರಂದು ರಿಲೀಸ್ ದಿನಾಂಕವನ್ನು ಅನೌನ್ಸ್ ಮಾಡಿದೆ. ಸಾಕಷ್ಟು ಪ್ರಿಪರೇಷನ್ ಮಾಡಿಕೊಂಡಿದ್ದರೂ ಸಹ ಪೈಲ್ವಾನ್ ಯಾಕೆ ಲೇಟ್ ಆಯ್ತು ಅಂತ ನಿರ್ದೇಶಕರನ್ನು ಕೇಳಿದರೆ ಮೌನ ವಹಿಸುತ್ತಿದ್ದರು. ಆದರೆ ಸ್ವತಃ ಹೆಬ್ಬುಲಿ ಕೃಷ್ಣ ಅವರೇ ಪೈಲ್ವಾನ್ ರಿಲೀಸ್ಗೆ ಏನು  ಕಾರಣ ಅನ್ನೋದನ್ನು ಇತ್ತೀಚಿಗಷ್ಟೇ ರಿವೀಲ್ ಮಾಡಿದ್ದಾರೆ.
ಭಾರತದಾದ್ಯಂತ ರಿಲೀಸ್ ಆಗಲಿರುವ ಪೈಲ್ವಾನ್ ಗೆ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳ ಸಿನಿಮಾಗಳ ಹಾವಳಿ ಹೆಚ್ಚಾಗಿತ್ತು. ಅದರಲ್ಲೂ ಬಹುನಿರೀಕ್ಷಿತ ಸಿನಿಮಾಗಳಾದ ಕನ್ನಡದ ಕುರುಕ್ಷೇತ್ರ, ಸಲ್ಮಾನ್ ಖಾನ್ ಅಭಿನಯದ ಭಾರತ್, ಪ್ರಭಾಸ್ ಅಭಿನಯದ ಸಾಹೋ ಚಿತ್ರಗಳು ಪರೋಕ್ಷವಾಗಿ ಪೈಲ್ವಾನ್ ಗೆ ಥಿಯೇಟರ್ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆ ಇತ್ತು. ಅಲ್ಲದೇ ಪ್ಯಾನ್ ಇಂಡಿಯಾ ರಿಲೀಸ್ ಮಾಡಲಾಗುವ ಸಿನಿಮಾಗಳಿಗೆ ಮೊದಲೇ ಸ್ಕ್ರೀನ್ಗಳನ್ನು ಬುಕ್ ಮಾಡಬೇಕಿರುತ್ತದೆ. ಆದರೆ ಪರಭಾಷೆಗಳ ಚಿತ್ರಗಳು ಸಾಕಷ್ಟು ಸ್ಕ್ರೀನ್ಗಳನ್ನು ಅವಧಿಗೂ ಮುನ್ನವೇ ಬುಕ್ ಮಾಡಿಕೊಂಡಿದ್ದವು. ಇದರಿಂದ ಪೈಲ್ವಾನ್ ಗೆ ಥಿಯೇಟರ್ ಸಮಸ್ಯೆಯೂ ಉಂಟಾಗಿತ್ತು. ಇನ್ನು ಮುಂಬೈನಲ್ಲಿ ಸುರಿದ ಧಾರಾಕಾರ ಮಳೆಯ ಪರಿಣಾಮವಾಗಿ ಚಿತ್ರದ ಗ್ರಾಫಿಕ್ಸ್ ಕೆಲಸಗಳ ತಡವಾಗುವಂತೆ ಮಾಡಿತ್ತು. ಇದು ಪೈಲ್ವಾನ್ ತಾಂತ್ರಿಕ ಕೆಲಸಗಳು ತಡವಾಗುವಂತೆ ಮಾಡಿಬಿಟ್ಟಿತ್ತು.
ಸದ್ಯ ಎಲ್ಲ ಕಂಟಕಗಳನ್ನು ಮೀರಿ ರೆಡಿಯಾಗಿರುವ ಪೈಲ್ವಾನ್ ಸಾಹೋ ಫ್ಲಾಪ್ನ ನಂತರ ಕುರುಕ್ಷೇತ್ರದ ಬಿಸಿ ತಣ್ಣಗಾದ ಬೆನ್ನಲ್ಲೆ ಆರಾಮಾಗಿ ಸೆಪ್ಟೆಂಬರ್ ೧೨ ರಂದು  ಬಿಡುಗಡೆಯಾಗುತ್ತಿದೆ. ಭಾರತದಾದ್ಯಂತ ಬರೋಬ್ಬರಿ ೨೫೦೦ರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಏಕಕಾಲಕ್ಕೆ ಪಂಚಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
CG ARUN

ನೆರೆ ಸಂತ್ರಸ್ತರಿಗೆ ನೆರವಾದರು ನಟ ಅರ್ಜುನ್ ಮಂಜುನಾಥ್ 

Previous article

ಭಯಂಕರ ಹಾಡಿಗೆ ಉಪ್ಪಿ ದನಿ!

Next article

You may also like

Comments

Leave a reply

Your email address will not be published. Required fields are marked *