ಬಾದ್ ಷಾ ಕಿಚ್ಚ ಸುದೀಪ್ ಮತ್ತು ಹೆಬ್ಬುಲಿ ಕೃಷ್ಣ ಕಾಂಬಿನೇಷನ್ನಿನ ಪೈಲ್ವಾನ್ ಸಿನಿಮಾ ಈಗಾಗಲೇ ಪೋಸ್ಟರ್, ಟೀಸರ್ ಗಳ ಮೂಲಕವೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿದೆ. ಸಿನಿಮಾದಲ್ಲಿ ಪೈಲ್ವಾನ್ ಸುದೀಪ್ ಅವರ ಹುರಿಗೊಳಿಸಿದ ದೇಹ, ಕೆಂಡಂತಹದ ಲುಕ್ಕಿಗೆ ಅಭಿಮಾನಿಗಳು ಮಸ್ತ್ ಮಜಾ ಮಾಡುತ್ತಿದ್ದಾರೆ. ಇದೀಗ ಸಿನಿಮಾ ರಿಲೀಸ್ ಗೆ ಕೆಲವೇ ತಿಂಗಳು ಬಾಕಿ ಇದೆ. ಪೈಲ್ವಾನ್ ಕುರಿತಾಗಿ ಹೊಸ ಸುದ್ದಿ ಏನಂದ್ರೆ ಬಾಲಿವುಡ್ ನ ಖ್ಯಾತವೆತ್ತರು ನಟಿಸಿರುವ ಈ ಚಿತ್ರಕ್ಕೆ ಹಿಂದಿಯಿಂದ ಆಫರ್ ಬಂದಿದ್ದು, ಬರೋಬ್ಬರಿ 14 ಕೋಟಿ ಮೊತ್ತಕ್ಕೆ ಡಬ್ಬಿಂಗ್ ಹಕ್ಕು ಸೇಲ್ ಆಗಿದೆ ಎಂದು ಹೇಳಲಾಗುತ್ತಿದೆ. ಸ್ಯಾಂಡಲ್ ವುಡ್ ನ ಮಟ್ಟಿಗಿದು ದುಬಾರಿ ಮತ್ತು ದಾಖಲೆಯ ಮೊತ್ತವಾಗಿದ್ದು, ರಿಲೀಸ್ ಗೂ ಮುನ್ನವೇ ಪೈಲ್ವಾನ್ ಅಬ್ಬರ ಜೋರಾಗಿಯೇ ಇದೆ.
ಪೈಲ್ವಾನ್ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಇದೇ ವರಮಹಾಲಕ್ಷ್ಮೀ ಹಬ್ಬಕ್ಕೆ ತೆರೆಕಾಣಲಿದೆ ಎಂದು ಹೇಳಲಾಗುತ್ತಿದೆ. ಸುದೀಪ್ ಗೆ ನಾಯಕಿಯಾಗಿ ಆಕಾಂಕ್ಷ ನಟಿಸುತ್ತಿದ್ದು, ಉಳಿದಂತೆ ಕಬೀರ್ ದುಹಾನ್ ಸಿಂಗ್, ಸುನೀಲ್ ಶೆಟ್ಟಿ, ಶರತ್ ಲೋಹಿತಾಶ್ವರಂತಹ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಇನ್ನು ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಲಿದೆ. ಕೆಜಿಎಫ್ ಸಿನಿಮಾದ ಅಬ್ಬರದ ನಂತರ ಕನ್ನಡದ ಮಾರುಕಟ್ಟೆಯ ರೇಟ್ ದಿನೇ ದಿನೇ ಹೆಚ್ಚಾಗುತ್ತಿರುವುದು ಆರೋಗ್ಯಕರ ಬೆಳವಣಿಗೆ.
No Comment! Be the first one.