ಹೆಬ್ಬುಲಿ ಖ್ಯಾತಿಯ ಕೃಷ್ಣ ಕಿಚ್ಚ ಸುದೀಪ್ ಕಾಂಬಿನೇಷನ್ನಿನ ಸಿನಿಮಾ ಪೈಲ್ವಾನ್. ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ವಿಚಾರಗಳಿಂದ ಚರ್ಚೆಯಾಗುತ್ತಲೇ ಇರುವ ಪೈಲ್ವಾನ್ ಮತ್ತೊಮ್ಮೆ ಸುದ್ದಿಯಾಗಿದೆ. ಕನ್ನಡ ಸೇರಿದಂತೆ ಎಂಟು ಭಾಷೆಗಳಲ್ಲಿ ಪೈಲ್ವಾನ್ ಆಗಸ್ಟ್ 8ರಂದು ಏಕಕಾಲಕ್ಕೆ ರಿಲೀಸ್ ಆಗಲಿದ್ದು, ಎಷ್ಟು ಸ್ಕ್ರೀನ್ ಗಳಲ್ಲಿ ಬಿಡುಗಡೆ ಭಾಗ್ಯ ಕಾಣಲಿದೆ ಎಂಬ ಅಭಿಮಾನಿಗಳ ಗೊಂದಲಕ್ಕೆ ತೆರೆ ಎಳೆದಿದೆ. ಹೌದು ಪೈಲ್ವಾನ್ ಚಿತ್ರವನ್ನು ಸದ್ಯ 2,500 ಸ್ಕ್ರೀನ್ ಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ರಿಲೀಸ್ ವೇಳೆಗೆ ಅದರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆಯಂತೆ. ಚಿತ್ರೀಕರಣವನ್ನು ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ಪೈಲ್ವಾನ್ ಹಿಂದಿ, ತೆಲುಗು, ತಮಿಳು ವಿತರಣೆಯ ಹಕ್ಕುಗಳ ಮಾತುಕತೆ ಅಂತಿಮ ಹಂತದಲ್ಲಿಯೂ ಇದೆಯಂತೆ.

ಭಾರತದುದ್ದಕ್ಕೂ ಸಂಚನವನ್ನುಂಟು ಮಾಡಿದ ಕೆಜಿಎಫ್ ಚಾಪ್ಟರ್ 1 ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ 2,000ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ತೆರೆ ಕಂಡು ಏಕ ಕಾಲಕ್ಕೆ ರಿಲೀಸ್ ಆದ ಸ್ಟಾರ್ ಚಿತ್ರಗಳನ್ನೇ  ಸೈಡಿಗಟ್ಟಿತ್ತು. ಈಗ ಪೈಲ್ವಾನ್ ಕೂಡ ಒಂದು ಹೆಜ್ಜೆ ಮುಂದಿದ್ದು, ಮತ್ತೆ ಇನ್ಯಾವ ಇತಿಹಾಸ ಸೃಷ್ಟಿಸಲಿದೆಯೋ ಕಾದು ನೋಡ್ಬೇಕು. ಇನ್ನು ಪೈಲ್ವಾನ್ ನಲ್ಲಿ ಹಿಂದಿ ಭಾಷೆಯ ಕಿರುತೆರೆ ನಟಿ ಆಕಾಂಕ್ಷಾ ಸಿಂಗ್, ಬಾಲಿವುಡ್ ನಟ ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್, ಸುಶಾಂತ್ ಸಿಂಗ್, ಅವಿನಾಶ್, ಶರತ್ ಲೋಹಿತಾಶ್ವ ಅಭಿನಯಿಸಿದ್ದಾರೆ. ಹಾಲಿವುಡ್ ನ ಲಾರ್ನೆಲ್ ಸ್ಟೋವಲ್ ಸಾಹಸ, ಅರ್ಜುನ್ ಜನ್ಯಾ ಸಂಗೀತ, ಕರುಣಾಕರ್ ಛಾಯಾಗ್ರಹಣ ಚಿತ್ರಕ್ಕಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಲಯನ್ ಕಿಂಗ್ ಚಿತ್ರಕ್ಕೆ ಬ್ರಹ್ಮಾನಂದಂ ದನಿ!

Previous article

ರಜನಿ ಪುತ್ರಿಯ ಮೇಲೆ ಟ್ರೋಲಿಗರು ಗರಂ!

Next article

You may also like

Comments

Leave a reply

Your email address will not be published. Required fields are marked *