ಕಿಚ್ಚಾ ಸುದೀಪ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಕಿಚ್ಚ ಅಭಿನಯಿಸಿರೋ ಪೈಲ್ವಾನ್ ಚಿತ್ರದ ಹೊಸಾ ಲುಕ್ಕೊಂದು ಬಿಡುಗಡೆಯಾದದ್ದೇ ಅಭಿಮಾನಿಗಳೆಲ್ಲ ಸುದೀಪ್ ದೇಹದಾರ್ಢ್ಯ ಕಂಡು ಹೌಹಾರಿದ್ದಾರೆ. ಇದೇ ಮೊದಲ ಬಾರಿಗೆ ಈ ಚಿತ್ರಕ್ಕಾಗಿ ಸುದೀಪ್ ದೇಹವನ್ನು ಸಜ್ಜುಗೊಳಿಸಿಕೊಂಡಿದ್ದಾರೆಂಬ ಸುದ್ದಿಯಾಗಿತ್ತಲ್ಲಾ? ಅದರ ಅಸಲೀ ಖದರ್ ಎಂಥಾದ್ದೆಂಬುದನ್ನು ಈಗ ಬಿಡುಗಡೆಯಾಗಿರೋ ಲುಕ್ ಸ್ಪಷ್ಟಪಡಿಸಿದೆ!
ಪ್ರತೀ ಚಿತ್ರಗಳಲ್ಲಿಯೂ ಆಯಾ ಪಾತ್ರಗಳಿಗೆ ತಕ್ಕಂತೆ ಲುಕ್ಕು ಬದಲಾಯಿಸಿಕೊಳ್ಳುತ್ತಲೇ ಬಂದಿರುವವರು ಸುದೀಪ್. ಆದರೆ ಅವರೆಂದೂ ಸಲ್ಮಾನ್ ಖಾನ್ನಂತೆ ಶರ್ಟು ಬಿಚ್ಚಿ ಪೋಸು ಕೊಟ್ಟಿರಲಿಲ್ಲ. ಪೈಲ್ವಾನ್ ಚಿತ್ರಕ್ಕಾಗಿ ಅವರು ಥೇಟು ಕುಸ್ತಿ ಪಟುವಿನಂಥಾ ದೇಹ ಪ್ರದರ್ಶನ ಮಾಡಿದ್ದಾರೆ. ಜೊತೆಗೆ ಅವರ ಹೇರ್ ಸ್ಟೂಲೂ ಬದಲಾಗಿಬಿಟ್ಟಿದೆ.
ಇಂಥಾದ್ದದೊಂದು ಔಟ್ ಲುಕ್ ಪಡೆದುಕೊಳ್ಳಲು ಸುದೀಪ್ ವರ್ಷಾಂತರಗಳ ಕಾಲ ಶ್ರಮ ಪಟ್ಟಿದ್ದರು. ಇದಕ್ಕಾಗಿಯೇ ಮೊದಲ ಬಾರಿ ಜಿಮ್ನತ್ತ ಮುಖ ಮಾಡಿ ಕಸರತ್ತು ಮಾಡಿದ್ದರು. ಇದರಿಂದಲೇ ಫಟ್ ಆಗಿ ಕುಸ್ತಿಪಟುವಿನ ರೂಪದಲ್ಲಿ ಸುದೀಪ್ ಮಿಂಚಿದ್ದಾರೆ. ಇನ್ನೊಂದು ಶೇಡಿಗಾಗಿ ಹತ್ತು ಕೇಜಿಗಿಂತಲೂ ಅಧಿಕ ತೂಕ ಇಳಿಸಿಕೊಂಡೂ ಸುದೀಪ್ ತಯಾರಾಗಿದ್ದಾರೆ. ಅಂತೂ ಸುದೀಪ್ ಅವರ ಈ ಹೊಸಾ ಗೆಟಪ್ ಅಭಿಮಾನಿಗಳನ್ನು ಹುಚ್ಚೇಳುವಂತೆ ಮಾಡಿದೆ. ಈ ಮೂಲಕವೇ ಮತ್ತೊಮ್ಮೆ ಪೈಲ್ವಾನನ ಅಬ್ಬರ ಶುರುವಾಗಿದೆ.
#