ಹಿರಿಯ ನಿರ್ದೇಶಕ ಸಿ.ವಿ. ಶಿವಶಂಕರ್ ಅವರ ಪುತ್ರ ವೆಂಕಟ್ ಭಾರದ್ವಾಜ್. ಎ ಡೇ ಇನ್ ದಿ ಸಿಟಿ, ಕೆಂಪಿರ್ವೆ, ತಮಿಳಿನ ಉನರ್ವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಕೆಂಪಿರ್ವೆ ಚಿತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಎಲ್ಲ ಅಂದುಕೊಂಡಂತೇ ಆಗಿದ್ದಿದ್ದರೆ ಈ ಹೊತ್ತಿಗೆ ವೆಂಕಟ್ ಅವರ ಮತ್ತೊಂದು ಚಿತ್ರ ಆಮ್ಲೆಟ್ ತೆರೆಗೆ ಬರಬೇಕಿತ್ತು. ಅಷ್ಟರಲ್ಲಿ ಕೊರೋನಾ ವೈರಸ್ಸು ಆವರಿಸಿಕೊಂಡಿದ್ದರಿಂದ ಆಮ್ಲೆಟ್ ಬಿಡುಗಡೆ ಸ್ವಲ್ಪ ಮುಂದಕ್ಕೆ ಹೋಗಿದೆ. ವೆಂಕಟ್ ಭಾರದ್ವಾಜ್ ಅಸಾಧ್ಯ ಚುರುಕು. ಯಾವತ್ತೂ ಟೈಮ್ ವೇಸ್ಟ್ ಮಾಡಿದವರೇ ಅಲ್ಲ. ಏಕಾಏಕಿ ತಿಂಗಳುಗಟ್ಟಲೆ ಲಾಕ್‌ಡೌನ್ ಆದಾರೆ ಸುಮ್ಮನಿರಲು ಸಾಧ್ಯವೇ? ಮನೆಯಲ್ಲಿದ್ದುಕೊಂಡೇ ಎರಡು ಸ್ಕ್ರಿಪ್ಟ್ ರೆಡಿ ಮಾಡಿದ್ದರು. ಅದರಲ್ಲಿ ಒಂದನ್ನು ತೆಗೆದುಕೊಂಡು ಇದ್ದಲ್ಲಿಂದಲೇ ಚಿತ್ರೀಕರಣವನ್ನೂ ಪೂರೈಸಿ ಸಿನಿಮಾ ರೆಡಿ ಮಾಡಿದ್ದಾರೆ. ಲೌಕ್ ಡೌನ್ ದಿನಗಳನ್ನು ವೆಂಕಟ್ ನಿಜಕ್ಕೂ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ತಮ್ಮ ಅನುಭವವನ್ನು ವೆಂಕಟ್ ಅವರೇ ಇಲ್ಲಿ ಬರೆದಿದ್ದಾರೆ. ಓದಿ..

ಲಾಕ್ಡೌನ್ ಸಂದಿಗ್ದ ಪರಿಸ್ಥಿತಿಯಲ್ಲಿ ಸಮಯವನ್ನು ಹಾಳುಮಾಡದೆ ನೆರವೇರಿದ ಅದ್ಭುತ ಪ್ರಯತ್ನ ದಿ ಪೈಂಟರ್. ಈ ಲಾಕ್ಡೌನ್ ಸಂದರ್ಭದಲ್ಲಿ ನಾನು ಸುಮಾರು ೨  ಕಥೆ ಮಾಡಿದೆ , ಆದರೂ ಇನ್ನೂ ಏನೋ ಮಾಡಬೆಕೆಂಬ ತವಕ, ಯಾಕೆ ಒಂದು ಚಲನಚಿತ್ರ ಮಾಡಬಾರದು ಎಂಬ ಮೆದುಳಿನ ಚಕ್ರ ಜೋರಾಗಿ ತಿರುಗತೊಡಗಿತು ಆಗ ಹುಟ್ಟಿದು “ದಿ ಪೈಂಟರ್”

ಇಂದಿನ ಲಾಕ್ಡೌನ್ ಪರಿಸ್ಥಿತಿ ಗೆ ತಕ್ಕಂತೆ ಒಂದು ಚಾಲೆಂಜಿಂಗ್ ಸಬ್ಜೆಕ್ಟ್ ರೆಡಿ ಮಾಡಿದೆ ಆಗ ಅದು ಏಪ್ರಿಲ್ ಮೊದಲ ವಾರ, ಇವತ್ತಿನ ಪರಿಸ್ಥಿತಿ ಹೇಗೆ ಕೆಲವರು ಒಳ್ಳೆಯದಕ್ಕೆ  ಕೆಲವರು ಹೇಗೆ ಕೆಟ್ಟದ್ದಕ್ಕೆ  ಉಪಯೋಗಿಸುತ್ತಾರೆ ಮತ್ತು ಪ್ರಯತ್ನಿಸುತ್ತಾರೆ ಎಂಬುದನ್ನ “ದಿ ಪೈಂಟರ್” ನಲ್ಲಿ ನಾನು ಹೇಳಿದ್ದೀನಿ. ಇದು ಒಂದು  ಥ್ರಿಲ್ಲರ್ ಮತ್ತು ಸಸ್ಪೆನ್ಸ್ ಕಥಾ ವಸ್ತು ಹೊಂದಿದೆ.  ಏಪ್ರಿಲ್ ೨ನೇ ವಾರ ದಿಂದ  ೧೦ ದಿನಗಳ ಶೂಟಿಂಗ್ ನಡೆಸಿದ್ದೇನೆ, ಸುಮಾರು ೯೦ ನಿಮಿಷದ ಫೀಚರ್ ಚಿತ್ರ ಇದಾಗಿದೆ, ೫ ಲೊಕೇಶನ್ , ೫ ಜನ ಕ್ಯಾಮರಾಮನ್ , ೧೭ ಜನ ನಟರು ಮತ್ತು ತಂತ್ರಜ್ಞರು ಇದರಲ್ಲಿ ದುಡಿದಿದ್ದಾರೆ, ಚೆನ್ನೈ ಬೆಂಗಳೂರು, ಕನಕಪುರ ಹೆಬ್ಬಾಳ ತುಮಕೂರುಗಳಲ್ಲಿ ಶೂಟಿಂಗ್ ನಡೆಸಿದ್ದೇವೆ. ಉತ್ತಮ ಯೋಜನೆಗೆ ನಮ್ಮ ತಂಡ ನನಗೆ ಕೈ ಜೋಡಿಸಿತು.

ಎಲ್ಲ ನಟರು ಮತ್ತು ತಂತ್ರಜ್ಞರು ತಮ್ಮ ಕೆಲಸಕ್ಕೆ ಒಳ್ಳೆ ನ್ಯಾಯ ಒದಗಿಸಿದ್ದಾರೆ, ದಿನಕ್ಕೆ ಮಲ್ಟಿಪಲ್ ಲೊಕೇಶನ್ ಶೂಟ್ ಮಾಡಲು ದೊಡ್ಡ ಗುಂಡಿಗೆ ಬೇಕು ಅದು ಈ ಪರಿಸ್ಥಿತಿಯಲ್ಲಿ, I Believed VIrutal Utilized VIrtually…. ಶಾಟ್ ಗಳ ಚಿತ್ರೀಕರಣವಾದ ಬಳಿಕ ಅದನ್ನು Mother Locationಗೆ ಕಳಿಸಿ (ಹಬ್ ಗೆ ಕಳಿಸಿ ) ಆ ಶಾಟ್ ನೋಡಿ  ಸರಿ ಇದೆಯಾ ಎಂದು ಪರಿಗಣಿಸಲಾಗುತ್ತಿತ್ತು, like HUB and SPOKE Model IT ನಲ್ಲಿ ಉಪಯೋಗಿಸುವ ವಿಧಾನ ನಾನು ಇಲ್ಲಿ ಪ್ರಯೋಗಿಸಿದೆ.

ಈ ಚಿತ್ರದಲ್ಲಿ ಎಲ್ಲ ನಟರು ತಂತ್ರಜ್ಞರು ಎಲ್ಲ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ, ಲೈಟ್ ಬಾಯ್, ಕಾಸ್ಟ್ಯೂಮ್ಸ್, makeup, ಆರ್ಟ್ಸ್ ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ನನ್ನ ಬಳಿ ೨ ಲೈಟ್ ಇತ್ತು ಆದರೆ ಅದಕ್ಕೆ ಇನ್ನು ಕೆಲವು ಲೈಟ್ ನ ಅವಶ್ಯಕತೆಯಿತ್ತು. ಅಗ ನಮ್ಮ ಮನೆಯಲ್ಲಿ ಇರುವ ಸೆಟ್ ಪ್ರಾಪರ್ಟೀಸ್ ಅಪಯೋಗಿಸಿ ಬಿದಿರು ಕಡ್ಡಿ, ಹಗ್ಗ, ಬಲ್ಬ್ ಮತ್ತು ಎಲೆಕ್ಟ್ರಿ ವೈರ್ನ ಕನೆಕ್ಟ್  ಮಾಡಿ ಸುಮಾರು ೨ ಲೈಟ್ ಮಾಡಿದ್ದೆವು. ಇಲ್ಲಿ ಪ್ರತಿಯೊಂದು ಹೆಜ್ಜೆಯು ಒಂದು ಚಾಲೆಂಜ್ .. ಅದು ನಮಗೆ ತುಂಬಾ ಖುಷಿ ಕೊಟ್ಟಿತು. ಯಾವ ರೀತಿಯೂ compromise ಆಗದೆ ನಾನು ಕಥೆಗೆ ಏನು ಬೇಕೋ ಅದು ತುಂಬಿದ್ದೇನೆ.

ಶೂಟಿಂಗ್ ಸಮಯದಲ್ಲಿ ನಾವುಗಳೇ ಸುಮಾರು ಮಧ್ಯಾಹ್ನ ೧ರಿಂದ ೩ ಗಂಟೆ ಬ್ರೇಕ್ ತೆಗೆದುಕೊಂಡು ನಾವೇ ಅಡುಗೆ ಮಾಡಿ ಊಟ ಮಾಡಿ ಆಮೇಲೆ ಶೂಟ್ ಶುರುಮಾಡಿದ್ದೆವು. ಒಂದು ಒಳ್ಳೆ lockdown ಅನುಭವದ ಚಿತ್ರ ಪೈಂಟರ್.

ನಮ್ಮ ಮನೆಗಳ ಇಂಟರ್ನೆಟ್ ಕನೆಕ್ಷನ್ ನಾವು ದಿನ ನಿತ್ಯ ಸುಮಾರು ೭೦ GB  ಡೇಟಾ ವಿಡಿಯೋ ಮತ್ತು ಸೌಂಡ್ ಕಂಟೆಂಟ್ ಅನ್ನು ಒಂದು ಜಾಗದಿಂದ ಟ್ರಾನ್ಸ್ಫರ್ ಮಾಡುತ್ತಿದ್ವಿ, ಆ ದಿನದ  ಶೂಟ್ ಮಾಡಿದ್ದ ಚಿತ್ರಗಳನ್ನು ಮತ್ತು ಧ್ವನಿ ಗ್ರಹಿಸಿದ ಫೈಲ್ಗಳನ್ನೂ ಇಂಡೆಕ್ಸ್ ಮಾಡಿ ಅದನ್ನು ಹಾರ್ಡ್ ಡಿಸ್ಕ್ ಗೆ ಕಾಪಿ ಮಾಡಿ, ಕನ್ವರ್ಷನ್ ಮಾಡಿ ಅದನ್ನು  ಎಡಿಟಿಂಗ್ ರಿಪೋರ್ಟ್ ಗೆ ರೆಡಿ ಮಾಡುತ್ತಿದ್ವಿ. ಇದೆಲ್ಲ ಒಂದು ಒಳ್ಳೆ ಚಾಲೆಂಜಿಂಗ್ ಆದ ಅನುಭವ.

ಒಂದು ಒಳ್ಳೆ ಅನುಭವ,  ಮನೆಯಲ್ಲಿ ೫ ಜನ ಅಷ್ಟೇ, ಎಲ್ಲರೂ ಆ ಶಾಟ್ ನಲ್ಲಿ ಆಕ್ಟ್ ಮಾಡಬೇಕು, ಅವರೇ ಕ್ಯಾಮೆರಾ ಮುಂದೆ ಆಕ್ಟ್ ಮಾಡಬೇಕು ಆಗ ಅವರೇ ಕ್ಯಾಮೆರಾ ಮತ್ತು ಸೌಂಡ್ ರೋಲ್ ಮಾಡಿ ಕ್ಯಾಮೆರಾ ಮುಂದೆ ಬಂದು ನಿಂತು  ಸುಮಾರು  ೫ ಸೆಕೆಂಡ್ ಬಿಟ್ಟು ಆಕ್ಷನ್ ಹೇಳಿದ ನಂತರ ನಟನೆ ಶುರು ಮಾಡಬೇಕು. ಶಾಟ್ ಮುಗಿದ ನಂತರ ೫ ಸೆಕೆಂಡ್ lag ಮಾಡಿ ಕಟ್ ಹೇಳಬೇಕು… ಇವೆಲ್ಲಾ ಅಪರೂಪದ ಅನುಭವಗಳು!

ಸಧ್ಯಕ್ಕೆ ಚಿತ್ರೀಕರಣ ಮುಗಿದು ಅದು ಎಡಿಟಿಂಗ್ ಟೇಬಲ್’ನಲ್ಲಿ ನಮ್ಮ ಎಡಿಟರ್ ಚಂದನ್ ಸಿನಿಮಾವನ್ನು ರೆಡಿ ಮಾಡುತ್ತಿದ್ದಾರೆ. ಅಂದಾಜು ಜೂನ್ ಮೊದಲ ವಾರದಲ್ಲಿ ಚಿತ್ರ ಸಂಪೂರ್ಣ ತಯಾರಾಗಲಿದೆ. ಇದು ಲಾಕ್ಡೌನ್ ಇತಿಹಾಸದಲ್ಲಿ ನಡೆದ ಒಂದು ಕನ್ನಡ ಚಲನ ಚಿತ್ರ ಪ್ರಯೋಗ ಅಂತ ಹೇಳೋದಕ್ಕೆ ಖುಷಿ ಆಗುತ್ತೆ.   ಮಾಡ್ತೀನಿ ಮಾಡ್ತೀನಿ ಅಂತ ಹೇಳೋದು ಬಿಟ್ಟು ನಾನು ಇಲ್ಲಿ ಮಾಡಿದ್ದೀನಿ ಅಂತ ಹೇಳೋಕ್ಕೆ ತುಂಬಾ  ಹೆಮ್ಮೆ ಆಗುತ್ತೆ. ನನ್ನ  ಚಿತ್ರ ಆಮ್ಲೆಟ್ ಮುಗಿದು ತೆರೆಗೆ ಬರಲು ಸಿದ್ಧವಾಗಿದೆ,  ಅಂದುಕೊಂಡಂತೇ ಆದರೆ ಈ ವರ್ಷ ನನ್ನ ೨ ಚಿತ್ರ ತೆರೆಗೆ ಬರುತ್ತದೆ.

ತಾರಾಗಣ : ವೆಂಕಟ್ ಭರದ್ವಾಜ್, ರಾಜ್  ಕಮಲ್, ಭಾಷಾ, ನವೀನ್ ಪ್ರಸಾದ್, ಕಬೀರ್ ಸೋಮಯಾಜಿ, ಶಮೀಕ್, ಉಮಾ, ಶಮಾ, ವೈಷ್ಣವಿ, ವೆಂಕಟ್ ಶಾಸ್ತ್ರಿ, ಮನೋಜ್, ಕಿರಣ್, ಮಿಥುನ್, ಸಂಜಯ್

– ವೆಂಕಟ್ ಭಾರದ್ವಾಜ್

CG ARUN

ಕನ್ನಡದ ‘ಮನರೂಪ’ಕ್ಕೆ ಫಾಲ್ಕೆ ಚಿತ್ರೋತ್ಸವದಲ್ಲಿ 3 ಪ್ರಶಸ್ತಿಗಳ ಗರಿ

Previous article

ನಿಮಗೆ ಮಾತ್ರ ಯಾಕಿಷ್ಟು ಆತುರ…

Next article

You may also like

Comments

Leave a reply

Your email address will not be published. Required fields are marked *

More in cbn