ಸದಾ ಭಾರತದೊಂದಿಗೆ ಒಂದಿಲ್ಲೊಂದು ವಿಚಾರವಾಗಿ ಕಾಲುಕೆರೆದುಕೊಂಡು ಜಗಳಕ್ಕೆ ನಿಂತಿರುವ ಪಾಕಿಸ್ತಾನ ಮತ್ತೆ ಕ್ಯಾತೆ ತೆಗೆದಿದೆ. ಇತ್ತೀಚಿಗೆ ನರೇಂದ್ರ ಮೋದಿ ಸರ್ಕಾರ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ನಂತರ ಮತ್ತೆ ಭಾರತ ಪಾಕಿಸ್ತಾನ ಸಂಬಂಧ ಹದಗೆಟ್ಟಿದೆ.
ಜಮ್ಮು ಕಾಶ್ಮೀರದ ವಿಚಾರವಾಗಿ ಪಾಕಿಸ್ತಾನ ಯುದ್ಧ ಸಂದೇಶ ರವಾನಿಸಿದ ಬೆನ್ನಲ್ಲೇ ಸಿನಿಮಾ ಕ್ಷೇತ್ರದ ಮೇಲೂ ತನ್ನ ಸಿಟ್ಟು ತೀರಿಸಿಕೊಳ್ಳುತ್ತಿದೆ. ಪಾಕಿಸ್ತಾನದಲ್ಲಿ ಭಾರತೀಯ ಸಿನಿಮಾಗಳಿಗೂ ನಿಷೇಧ ಹೇರಲಾಗಿದೆ. ಇಲ್ಲಿ ಯಾವ ಸಿನಿಮಾಗಳ ಪ್ರದರ್ಶನವನ್ನೂ ಮಾಡುವಂತಿಲ್ಲ ಎಂದು ಆದೇಶ ನೀಡಲಾಗಿದೆ. ಅಲ್ಲದೇ ‘ಪಾಕಿಸ್ತಾನದ ಯಾವುದೇ ಥಿಯೇಟರ್ಗಳಲ್ಲಿ ಭಾರತದ ಸಿನಿಮಾಗಳು ಪ್ರಸಾರವಾಗಕೂಡದು’ ಎಂದು ಪಾಕ್ ಮಾಹಿತಿ ಮತ್ತು ಪ್ರಸಾರ ಇಲಾಖೆ ಟ್ವೀಟ್ ಮಾಡಿದೆ.