ಲೋಕೇಶ್ ಕನಕರಾಜ್ ಸದ್ಯ ಇಂಡಿಯಾದ ಸ್ಟಾರ್ ಡೈರೆಕ್ಟರ್. ಮಾನಗರಮ್, ಕೈದಿ, ಮಾಸ್ಟರ್ ಮತ್ತು ವಿಕ್ರಂ ಈ ನಾಲ್ಕು ಹಿಟ್ ಸಿನಿಮಾಗಳನ್ನು ನೀಡಿರುವ ಲೋಕೇಶ್ ಲಿಯೋ ಚಿತ್ರವನ್ನು ಆರಂಭಿಸಿದ್ದಾರೆ. ಇದಾಗುತ್ತಿದ್ಧಂತೇ ಪ್ಯಾನ್ ಇಂಡಿಯಾ ಲೆವೆಲ್ಲಿನ ಮಲ್ಟಿ ಸ್ಟಾರರ್ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದಲ್ಲಿ ಭಾರತದ ಎಲ್ಲ ಭಾಷೆಗಳ ಸೂಪರ್ ಸ್ಟಾರ್ಗಳು ಪಾಲ್ಗೊಳ್ಳಲಿದ್ದಾರೆ.
ಸಂಜಯ್ ದತ್, ತ್ರಿಶಾ, ವಿಜಯ್ ಸೇತುಪತಿ, ಕಮಲಹಾಸನ್ ಮತ್ತು ವಿಜಯ್ ಈ ಚಿತ್ರದಲ್ಲಿರಲಿರೋದು ಬಹುತೇಕ ಕನ್ಫರ್ಮ್ ಆಗಿದೆ. ಕನ್ನಡದಿಂದ ಯಾವ ನಟ ಆ ಚಿತ್ರದ ಭಾಗವಾಗಬಹುದು ಅನ್ನೋದು ಸದ್ಯದ ಪ್ರಶ್ನೆ. ಈಗ ಲೋಕೇಶ್ ಕನಕರಾಜ್ ಕಣ್ಣು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮೇಲೆ ಬಿದ್ದಿದೆ ಅನ್ನುತ್ತಿದೆ ಮೂಲ. ರಕ್ಷಿತ್ ಮಾತ್ರ ಈ ಬಗ್ಗೆ ಏನೂ ಹೇಳಿಕೊಂಡಿಲ್ಲ. ಇದು ಮಾತ್ರವಲ್ಲದೆ, ಡಾಲಿಕೂಡಾ ಈ ಸಿನಿಮಾದಲ್ಲಿ ನಟಿಸಲಿದ್ದಾರಂತೆ.
ಶಿವರಾಜ್ ಕುಮಾರ್ ಈಗಾಗಲೇ ರಜಿನಿಯ ಜೊತೆ ಜೈಲರ್ ಮತ್ತು ಧನುಷ್ ಜೊತೆಗೆ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸುದೀಪ್ ಸಾಕಷ್ಟು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಉಪೇಂದ್ರ ಮತ್ತು ದುನಿಯಾ ವಿಜಯ್ ಕೂಡಾ ಈಗ ಪ್ಯಾನ್ ಇಂಡಿಯಾದ ಬೇಡಿಕೆಯ ನಟರಾಗಿದ್ದಾರೆ. ಬಹುಭಾಷಾ ಸಿನಿಮಾ ಅಂದ ತಕ್ಷಣ ಕನ್ನಡದ ಹೀರೋಗಳು ಇರಲೇಬೇಕು ಎನ್ನುವ ಮಟ್ಟಕ್ಕೆ ಬಂದು ನಿಂತಿರೋದು ಖುಷಿಯ ವಿಚಾರ. ಕಲಾವಿದರು ಮಾತ್ರವಲ್ಲದೆ, ಕನ್ನಡದ ತಂತ್ರಜ್ಞರು ಕೂಡಾ ಬೇಡಿಕೆ ಪಡೆಯುತ್ತಿರೋದು ಹೆಮ್ಮೆಯ ಸಂಗತಿಯಾಗಿದೆ.
No Comment! Be the first one.