ನಟ ಶಿವ ಕಾರ್ತಿಕೇಯನ್ ತಮ್ಮ 16ನೇ ಸಿನಿಮಾ ಶುರು ಮಾಡಲು ಎಲ್ಲ ಸಿದ್ದತೆಗಳನ್ನು ನಡೆಸಿಕೊಂಡಿದ್ದಾರೆ. ಆ ಸಿನಿಮಾಕ್ಕೆ ಎಸ್ ಕೆ 16 ಎಂಬ ಟೈಟಲ್ನನ್ನು ಕೂಡ ಫಿಕ್ಸ್ ಮಾಡಲಾಗಿದೆಯಂತೆ. ವಿಶೇಷವೆಂದರೆ ಈ ಸಿನಿಮಾವನ್ನು ಪಂಡಿರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಪಂಡಿರಾಜ್ ಮತ್ತು ಶಿವ ಕಾರ್ತಿಕೇಯನ್ ರವರ ಮೂರನೇ ಸಿನಿಮಾವಾಗಿದ್ದು, ಈ ಮೊದಲು ಮರೀನ, ಕೇಡಿ ಬಿಲ್ಲಾ ಕಿಲಾಡಿ ರಂಗ ಸಿನಿಮಾಗಳಲ್ಲಿ ಜತೆಯಾಗಿದ್ದರು. ಎಸ್ ಕೆ 16 ಸಿನಿಮಾವನ್ನು ಸನ್ ಪಿಕ್ಚರ್ಸ್ ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೇ ಇತ್ತೀಚಿಗೆ ಚಿತ್ರತಂಡ ಪಾತ್ರವರ್ಗಗಳ ಆಯ್ಕೆಯಲ್ಲಿಯೂ ಸಖತ್ ಬ್ಯುಸಿಯಾಗಿದೆ.
ತುಪ್ಪರಿವಲನ್ ನಲ್ಲಿ ನಟಿಸಿದ್ದ ಅನು ನಾಯಕಿಯಾಗಿ ಆಯ್ಕೆಯಾಗಿದ್ದು, ಐಶ್ವರ್ಯ ರಾಜೇಶ್ ಕೂಡ ನಾಯಕಿಯಾಗಲಿದ್ದಾರೆ. ಇನ್ನು ಕಡಾಯ್ ಕುಟ್ಟಿ ಸಿಂಗಮ್ ಗೆ ಸಂಗೀತ ಸಂಯೋಜನೆ ಮಾಡಿದ್ದು ಡಿ ಇಮ್ಮಾನ್ ಈ ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದು, ನೀವ್ ಶಾ ಛಾಯಾಗ್ರಹಣ ಮಾಡಲಿದ್ದಾರೆ. ಇನ್ನು ಎಸ್.ಕೆ 16ನಲ್ಲಿ ಮೋಸ್ಟ್ ವಾಂಟೆಡ್ ಕಮೆಡಿಯನ್ ಗಳಾದ ಕಾಲಿವುಡ್ ಯೋಗಿ ಬಾಬು ಮತ್ತು ಸೂರಿಯೂ ಪಾತ್ರವರ್ಗದಲ್ಲಿದ್ದಾರೆ.
No Comment! Be the first one.