ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಹೊಸದೊಂದು ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಸಾಯಿ ಧರಮ್ ರವರ ಸಹೋದರನಾದ ಪಂಜಾ ವೈಷ್ಣವ್ ತೇಜ್ ಈ ಸಿನಿಮಾದಲ್ಲಿ ನಾಯಕನಾಗಿಯೂ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ರಂಗಸ್ಥಳಂ ನಲ್ಲಿ ಸಹ ಬರಹಗಾರನಾಗಿದ್ದ ಬುಚಿ ಬಾಬು ಸನ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚಿಗೆ ಚಿತ್ರತಂಡ ವಿಜಯ್ ಸೇತುಪತಿಯವನ್ನು ಭೆಟ್ಟಿಮಾಡಿ ಪ್ರಧಾನ ಪಾತ್ರವೊಂದಕ್ಕೆ ಬಣ್ಣ ಹಚ್ಚಲು ರಿಕ್ವೆಸ್ಟ್ ಮಾಡಿದ್ದಾರೆ ಎನ್ನಲಾಗಿದೆ.
ಸದ್ಯದ ಸುದ್ದಿ ಏನಂದ್ರೆ ಚಿತ್ರದ ಟೈಟಲ್ ನಲ್ಲಿಯೇ ಗೊಂದಲವೆದ್ದಿದ್ದು, ಸಿನಿಮಾದಲ್ಲಿ ನಾಯಕನು ಮೀನು ಹಿಡಿಯುವವನ ಪಾತ್ರವನ್ನು ನಿರ್ವಹಿಸುತ್ತಿದ್ದುದ್ದರಿಂದ ಚಿತ್ರಕ್ಕೆ ಜಾಲರಿ ಎಂದು ಇಡಲಾಗಿತ್ತಂತೆ. ಆದರೆ ಮಾಧ್ಯಮ ಮಿತ್ರರ ಸಲಹೆಯ ಮೇರೆಗೆ ಆ ಟೈಟಲ್ ಕೇಳುಗರಿಗೆ ಅರ್ಥವಾಗುವುದಿಲ್ಲ. ಆದ್ದರಿಂದ ಉಪ್ಪೇನಾ ಎಂದು ಇಡಲು ಸೂಚಿಸಿದ್ದಾರೆ ಎನ್ನಲಾಗಿದೆ. ಸದ್ಯದಲ್ಲಿ ಬದಲಾದ ಟೈಟಲ್ ನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುವುದಂತೆ. ಅಂದಹಾಗೆ ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ರವರು ಸಂಗೀತ ಸಂಯೋಜನೆಯನ್ನು ಮಾಡುತ್ತಿದ್ದಾರೆ.