ಸದಾ ಕಾಡುವ ಚೆಂದದ ಹಾಡುಗಳ ಮೂಲಕವೇ ಪ್ರಸಿದ್ಧಿ ಪಡೆದಿರೋ ಡಾ. ವಿ.ನಾಗೇಂದ್ರ ಪ್ರಸಾದ್ ನಿರ್ದೇಶಕರಾಗಿ, ನಟನಾಗಿಯೂ ಗುರುತಿಸಿಕೊಂಡಿದ್ದಾರೆ. ಹೊಸಾ ಸೃಷ್ಟಿಯ ಹಂಬಲ ಹೊಂದಿರೋ ಅವರೀಗ ಮಹತ್ವಾಕಾಂಕ್ಷೆಯ ಸಿನಿಮಾವನ್ನು ಆರಂಭಿಸಿದ್ದಾರೆ. ವಸಿಷ್ಠ ಸಿಂಹ ಪ್ರಧಾನ ಪಾತ್ರದಲ್ಲಿ ನಟಿಸಲಿರುವ ಈ ಚಿತ್ರಕ್ಕೆ ‘ಪಂಥ ಎಂಬ ಹೆಸರಿಡಲಾಗಿದೆ.
ಮೊನ್ನೆ ದಿನ ನಾಗೇಂದ್ರ ಪ್ರಸಾದ್ ಅವರ ಆಫೀಸಿನಲ್ಲಿ ಸ್ಕ್ರಿಪ್ಟ್ ಪೂಜೆ ಮಾಡುವ ಮೂಲಕ ಈ ಚಿತ್ರಕ್ಕೆ ಚಾಲನೆ ದೊರೆತಂತಾಗಿದೆ. ಸರಳವಾಗಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ನಾಗೇಂದ್ರ ಪ್ರಸಾದ್ ಅವರ ಕೆಲವೇ ಆತ್ಮೀಯರು ಮಾತ್ರ ಹಾಜರಿದ್ದರು.
ವಸಿಷ್ಠ ಕನ್ನಡದ ಪ್ರತಿಭಾವಂತ ನಟ. ವೆರೈಟಿ ಪಾತ್ರಗಳನ್ನು ನಿಭಾಯಿಸಬಲ್ಲ ತಾಕತ್ತಿರುವವರು. ನಾಗೇಂದ್ರ ಪ್ರಸಾದ್ ಕನ್ನಡ ಚಿತ್ರರಂಗ ಕಂಡ ಅಪರೂಪದ ಸಾಧಕ. ಪ್ರಾಕಾರ ಯಾವುದೇ ಆದರೂ ತಮ್ಮ ಅಕ್ಷರಗಳ ಮೂಲಕ ಕೇಳುಗರ ಎದೆಗೆ ದಾಟಿಸುವ ಹಾಡುಗಳನ್ನು ಬರೆಯುತ್ತಾ ಬಂದವರು. ಟಾಪ್ ಸ್ಟಾರ್ಗಳ ಇಂಟ್ರಡಕ್ಷನ್ ಹಾಡುಗಳನ್ನು ನಾಗೇಂದ್ರ ಪ್ರಸಾದ್ ಅವರು ಬರೆದರೇನೇ ಅದು ಪ್ರೇಕ್ಷಕರಿಗೆ ರುಚಿಸೋದು ಅನ್ನೋದು ಸಿನಿಮಾದವರ ನಂಬಿಕೆ. ಜೊತೆಗೆ ಅದು ಪ್ರೇಮಗೀತೆಯಿರಲಿ, ವಿರಹಗೀತೆಯಾಗಲಿ, ಐಟಂ ಸಾಂಗಾದರೂ ಕವಿರತ್ನ ನಾಗೇಂದ್ರ ಪ್ರಸಾದ್ ತಮ್ಮ ಅಕ್ಷರಗಳನ್ನು ಪೋಣಿಸಿಕೊಡುತ್ತಾರೆ. ಕಾಲಕಾಲಕ್ಕೆ ಅಪ್ಡೇಟ್ ಆಗುತ್ತಿರುವ ಕಾರಣಕ್ಕೋ ಏನೋ ನಾಗೇಂದ್ರ ಪ್ರಸಾದ್ ಅವರ ಸಾಲುಗಳು ಯಾವತ್ತಿಗೂ ಹೊಸದಾಗಿಯೇ ಇರುತ್ತವೆ.
ಹಾಡುಗಳನ್ನು ಬರೆಯುವುದರಲ್ಲಿ ಎಷ್ಟೇ ಬ್ಯುಸಿಯಿದ್ದರೂ, ಆಗಾಗ ಒಂದೊಂದು ಸಿನಿಮಾ ನಿರ್ದೇಸಿಸುತ್ತಲೇ ಬಂದಿರುವ ನಾಗೇಂದ್ರ ಪ್ರಸಾದ್ ಅವರ ‘ಪಂಥದ ಕುರಿತ ಇನ್ನಷ್ಟು ಮಾಹಿತಿಗಳು ಸದ್ಯದಲ್ಲೇ ಹೊರಬರಲಿದೆ…
No Comment! Be the first one.