ರೌಡಿಗಳ ಸಿನಿಮಾಗೆ ಪೊಲೀಸ್ ಗೆಸ್ಟ್!

ಪಂಟ್ರು ಅನ್ನೋ ಸಿನಿಮಾದ ಆಡಿಯೋ ಮತ್ತು ಟ್ರೇಲರ್ ರಿಲೀಸಾಗಿದೆ. ಪ್ರಶಾಂತ್ ಸಿದ್ದಿ, ನಾರಾಯಣಸ್ವಾಮಿ, ಮಧು ಮಂದಗೆರೆ ಮುಂತಾದವರು ನಟಿಸಿರುವ ಈ ಪಂಟ್ರು ಟ್ರೇಲರು ಎದೆ ಝಲ್ಲೆನಿಸುವ ರಕ್ತಪಾತದಿಂದ ಕೂಡಿದೆ. ಟ್ರೇಲರ್ರಿನ ತುಂಬಾ ಲಚಕ್ ಪಚಕ್ ಅಂತಾ ಚುಚ್ಚುವ, ಕೊಚ್ಚುವ, ರಕ್ತ ಹರಿಸುವ ದೃಶ್ಯಗಳೇ ತುಂಬಿಹೋಗಿವೆ. ಅದರೆ ‘ಇದು ಯಾವ ಕಾರಣಕ್ಕೂ ಎ ಸರ್ಟಿಫಿಕೇಟ್ ಪಿಕ್ಚರ್ ಅಲ್ಲ. ಟ್ರೇಲರ್ ನೋಡಿ ಗಾಬರಿ ಪಟ್ಕಂಬೇಡಿ. ನಮ್ ಫಿಲಂಗೆ ಯು/ಎ ಸರ್ಟಿಫಿಕೇಟು ಸಿಕ್ಕೈತೆ. ಈ ಸಿನಿಮಾನ ಫ್ಯಾಮಿಲಿ ಸಮೇತ ಬಂದು ಜನ ನೋಡ್ಬೇಕು’ ಎನ್ನುತ್ತಿದ್ದಾರೆ. ‘ಸಣ್ಣಪುಟ್ಟ ತಪ್ಪು ಮಾಡಿದವರನ್ನು ಜನ ರೌಡಿ ಅಂತಾ ಹಣೆಪಟ್ಟಿ ಕಟ್ಟಿಬಿಡುತ್ತಾರೆ. ಯಾರೂ ರೌಡಿಗಳಾಗಿರೋಲ್ಲ. ನಾವು ಕ್ರಿಯೇಟ್ ಮಾಡಿಬಿಡ್ತೀವಿ’ ಅನ್ನೋದು ಡೈರೆಕ್ಟರ್ ಸ್ಪೀಚು.

ವಿಶೇಷವೆಂದರೆ ಈ ಸಿನಿಮಾದ ಟ್ರೇಲರ್ ಬಿಡುಗಡೆಗೆ ಪೊಲೀಸ್ ಅಧಿಕಾರಿ ಮಹ್ಮದ್ ಅವರು ಆಗಮಿಸಿ ‘ಹೌದೌದು ಯಾರೂ ರೌಡಿಗಳಾಗಿರೋದಿಲ್ಲ. ನಾವೇ ರೌಡಿಗಳನ್ನು ಸೃಷ್ಟಿಸಿಬಿಡ್ತೀವಿ’ ಎಂದುಬಿಟ್ಟಿದ್ದಾರೆ. ಇವರು ಅಪರಾಧಿಗಳ ಮನಃಪರಿವರ್ತಿಸುವ ಜವಾಬ್ದಾರಿ ಹೊಂದಿದ್ದಾರಂತೆ‌. ಈ ಟ್ರೇಲರನ್ನು ನೋಡಿದವರಲ್ಲಿ ಅನೇಕರು ಕ್ರೈಂ ಅನ್ನು ವೈಭವೀಕರಿಸುವ ಇಂಥಾ ನಿರ್ದೇಶಕರ ಮನಃಪರಿವರ್ತಿಸಲು ಯಾರಾದರೂ ಅಧಿಕಾರಿಗಳನ್ನು ನೇಮಿಸಬೇಕು ಎಂದು ಮಾತಾಡಿಕೊಳ್ಳುತ್ತಿರೋದಂತೂ ನಿಜ. ನೀವೂ ಟ್ರೇಲರ್ ನೋಡಿ ಅಭಿಪ್ರಾಯ ತಿಳಿಸಿ..

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಹರೀಶ್ ರಾಜ್ ಈಗ `ಕಿಲಾಡಿ ಪೊಲೀಸ್’!

Previous article

ಲೂಸ್ ಮಾದ ಮನೆಗೆ ಐಶ್ವರ್ಯ ಲಕ್ಷ್ಮಿ ಎಂಟ್ರಿ!

Next article

You may also like

Comments

Leave a reply

Your email address will not be published. Required fields are marked *