ಫ್ಲೇವರಿಗೂರಾಜಶೇಖರ್ ನಿರ್ದೇಶನದ ಪರದೇಸಿ ಕೇರಾಫ್ ಲಂಡನ್ ಈ ವಾರ ತೆರೆ ಕಾಣುತ್ತಿದೆ. ವಿಜಯ್ ರಾಘವೇಂದ್ರ ಮತ್ತು ರಾಜಶೇಖರ್ ಈ ಹಿಂದೆ ರಾಜ ಲವ್ಸ್ ರಾಧೆ ಎಂಬ ಯಶಸ್ವೀ ಚಿತ್ರವೊಂದನ್ನು ಕೊಟ್ಟಿದ್ದರು. ಇದೀಗ ಇದೇ ಜೋಡಿ ಮತ್ತೆ ಒಂದಾಗಿರೋ ಪರದೇಸಿ ಕೇರಾಫ್ ಲಂಡನ್ ಬಗ್ಗೆ ಸಹಜವಾಗಿಯೇ ಪ್ರೇಕ್ಷಕರಲ್ಲೊಂದು ಕುತೂಹಲವಿದೆ. ಇದುವೇ ಈ ಸಿನಿಮಾಕ್ಕಾಗಿ ಜನ ಕಾಯುವಂತೆಯೂ ಮಾಡಿದೆ.
ಪರದೇಸಿ ಕೇರಾಫ್ ಲಂಡನ್ ಅಂದಾಕ್ಷಣ ಈ ಚಿತ್ರಕ್ಕೂ ಲಂಡನ್ನಿಗೂ ನೇರಾ ನೇರ ಕನೆಕ್ಷನ್ನಿದೆ ಎಂಬ ಭಾವನೆ ಕಾಡೋದು ಸಹಜವೇ. ಆದರೆ ಈ ಶೀರ್ಷಿಕೆಯಲ್ಲಿಯೇ ಒಂದು ಸರ್ಪ್ರೈಸನ್ನು ನಿರ್ದೇಶಕ ರಾಜಶೇಖರ್ ಇಟ್ಟಿದ್ದಾರೆ. ಅದೇನೆಂಬುದು ಇದೇ ಶುಕ್ರವಾರ ಜಾಹೀರಾಗಲಿದೆ.
ವಿಜಯ್ ರಾಘವೇಂದ್ರ ಅವರನ್ನು ಪ್ರೇಕ್ಷಕರು ಈ ವರೆಗೂ ನೋಡಿರದಂಥಾ ರೀತಿಯಲ್ಲಿ ತೋರಿಸೋ ಉದ್ದೇಶದಿಂದಲೇ ರಾಜಶೇಖರ್ ಕಥೆಯನ್ನು ಸಿದ್ಧಪಡಿಸಿದ್ದರಂತೆ. ವಿಭಿನ್ನ ಜಾಡಿನ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರಗೆ ಇಬ್ಬರು ನಾಯಕಿಯರಿದ್ದಾರೆ. ಸ್ನೇಹಾ ಮತ್ತು ಪೂಜಾ ನಾಯಕಿಯರಾಗಿ ನಟಿಸಿದ್ದಾರೆ.
ಈಗಾಗಲೇ ಕನ್ನಡ ಕೋಗಿಲೆ ಖ್ಯಾತಿಯ ಗಂಗಮ್ಮ ಹಾಡಿರೋ ಹಾಡೂ ಸೇರಿದಂತೆ ಎಲ್ಲ ಹಾಡುಗವೆ. ಪರದೇಸಿ ಕೇರಾಫ್ ಲಂಡನ್ ಇಂಥಾ ನಾನಾ ನಿರೀಕ್ಷೆ, ಕುತೂಹಲಗಳ ಒಡ್ಡೋಲಗದಲ್ಲಿಯೇ ತೆರೆ ಕಾಣಲು ರೆಡಿಯಾಗಿದೆ. ಈ ಚಿತ್ರದ ಅಸಲೀ ಕಥೆ ಏನೆಂಬುದು ಜಾಹೀರಾಗಲು ಇನ್ನು ದಿನಗಳಷ್ಟೇ ಬಾಕಿ ಉಳಿದಿಿದೆ.
#
No Comment! Be the first one.