ವಿಜಯ್ ರಾಘವೇಂದ್ರ ಅಭಿನಯದ ಪರದೇಸಿ ಕೇರಾಫ್ ಲಂಡನ್ ಬಿಡುಗಡೆಯ ಹೊಸ್ತಿಲಲ್ಲಿದೆ. ರಾಜಶೇಖರ್ ನಿರ್ದೇಶನದ ಈ ಚಿತ್ರ ಶೀರ್ಷಿಕೆರಯಿಂದಲೇ ಸೆಳೆದುಕೊಂಡು ಎಲ್ಲರನ್ನೂ ಆವರಿಸಿಕೊಳ್ಳಲು ಕಾರಣವಾಗಿರುವವರು ನಿರ್ದೇಶಕ ರಾಜಶೇಖರ್. ಸಿನಿಮಾ ಎಂಬ ಮಾಯೆಯಿಂದಾಗಿರುವ ಪವಾಡದಂಥಾ ಪಲ್ಲಟಗಳಿಗೆ ದಂಡಿ ದಂಡಿ ಉದಾಹರಣೆಗಳಿವೆ. ಎಲ್ಲಿಯೋ ಕಳೆದು ಹೋಗಬೇಕಾದವರು ಸಿನಿಮಾ ಸೆಳೆತಕ್ಕೆ ಸಿಕ್ಕು ಮತ್ತೇನೋ ಆಗಿದ್ದಾರೆ. ಎಂತೆಂತಾದ್ದೋ ರಿಸ್ಕುಗಳನ್ನು ಮೈ ಮೇಲೆಳೆದುಕೊಂಡು ಗುರುತಿಸಿಕೊಂಡಿದ್ದಾರೆ. ರಾಜಶೇಖರ್ ಅವರದ್ದೂ ಕೂಡಾ ಸಿನಿಮಾ ಮಾಯೆಯ ಚಮತ್ಕಾರಕ್ಕೆ ಸೂಕ್ತ ಉದಾಹರಣೆಯಂಥಾ ವ್ಯಕ್ತಿತ್ವ!

ರಾಜಶೇಖರ್ ಅವರು ಓದಿದ್ದು ಇಂಜಿನೀರಿಂಗ್. ಆದರೆ ಒಡಲೊಳಗಿದ್ದದ್ದು ಸಿನಿಮಾ ತಪನೆ. ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಕಾಲದಲ್ಲಿಯೇ ರಾಜಶೇಖರ್ ಮಿಮಿಕ್ರಿ ಕಲೆಯಿಂದ ಇಡೀ ಕಾಲೇಜಿನ ಕೇಂದ್ರಬಿಂದುವಾಗಿದ್ದವರು. ಡಾ. ರಾಜ್ ಕುಮಾರ್, ವಿಷ್ಣುವರ್ಧನ್‌ರಂಥಾ ಮೇರು ನಟರ ಪರ್ಫೆಕ್ಟ್ ಮಿಮಿಕ್ರಿಯಿಂದಲೇ ಕಲಾಸಕ್ತಿ ಬೇಳೆಸಿಕೊಂಡಿದ್ದವರಿಗೆ ಕಥೆ ಬರೆಯುವ ಗೀಳೂ ಅಂಟಿಕೊಂಡಿತ್ತು. ಕಾಲೇಜು ಮ್ಯಾಗಜೈನಿನಲ್ಲಿ ಅವರ ಕಥೆಗಳು ಪ್ರಕಟವಾಗಿದ್ದವು. ಇದಕ್ಕೆಲ್ಲಾ ಕಾಲೇಜು ದಿನಗಳ ಸ್ನೇಹಿತರ ತುಂಬು ಸಹಕಾರವೂ ಇದ್ದುದರಿಂದ ರಾಜಶೇಖರ್ ಮತ್ತಷ್ಟು ಉತ್ತೇಜಿತರಾಗಿದ್ದರು.

ಬಿಇ ಪದವಿ ಪೂರೈಸಿದ ಘಳಿಗೆಯಲ್ಲಿ ವಿಪರೀತ ಸಿನಿಮಾ ಗೀಳು ಅಚಿಟಿಸಿಕೊಂಡಿದ್ದ ರಾಜಶೇಖರ್ ಅವರಿಗೆ ತಿಎಂಜಿ ಕಂಪೆನಿಯಲ್ಲಿ ಟ್ರಾನ್ಸ್‌ಲೇಷನ್ ಎಕ್ಸಿಕ್ಯೂಟಿವ್ ಆಗಿ ಒಂದೊಳ್ಳೆ ಕೆಲಸವೂ ಸಿಕ್ಕಿತ್ತು. ಆ ಕಾಲಕ್ಕೇ ಅವರ ಸಂಬಳ ಅಖಂಡ ಎಂಬತೈದು ಸಾವಿರ ರೂಪಾಯಿ. ಆದರೆ ಇದು ತಾನಿರಬೇಕಾದ ಕ್ಷೇತ್ರವಲ್ಲ ಎಂಬ ಬಗ್ಗೆ ಅವರಿಗೆ ಸದಾ ಆತಂಕ ಕಾಡುತ್ತಿತ್ತಲ್ಲಾ? ಕಡೆಗೂ ಗಟ್ಟಿ ಮನಸು ಮಾಡಿ ಎಂಬತೈದು ಸಾವಿರದ ಕೆಲಸವನ್ನು ತೊರೆದು ಪ್ರಖ್ಯಾತ ಸಿನಿಮಾ ತರಬೇತಿ ಸಂಸ್ಥೆಯಾದ ಎಸ್‌ಐಟಿಗೆ ಸೇರಿಕೊಂಡ ರಾಜಶೇಖರ್ ಅವರಿಗೆ ಅಲ್ಲಿ ಸಿನಿಮಾ ಜಗತ್ತಿನ ಅಸಲೀ ವ್ಯಾಕರಣ ಅರ್ಥವಾಗಿತ್ತು. ಅಲ್ಲಿಯೇ ಖ್ಯಾತ ಕ್ಯಾಮೆರಾಮನ್ ಸಂತೋಷ್ ರೈ ಪಾತಾಜೆ, ಜಗದೀಶ್ ವಾಲಿ ಮುಂತಾದವರೆಲ್ಲಾ ರಾಜಶೇಖರ್ ಅವರಿಗೆ ಜೊತೆಗಾರರಾಗಿ ಸಿಕ್ಕಿದ್ದರು.

ಆ ಬಳಿಕ ಬದುಕಿನ ಮತ್ತೊಂದು ಆಯಾಮಕ್ಕೆ ತೆರೆದುಕೊಂಡ ರಾಜಶೇಖರ್ ಈಟಿವಿಯಲ್ಲಿ ಎಂಟು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು. ಅದಾದ ನಂತರ ಆಕಾಶ್ ಆಡಿಯೋ ಸಂಸ್ಥೆಯಲ್ಲಿಯೂ ಒಂದಷ್ಟು ಕಾಲ ಕೆಲಸ ಮಾಡಿದವರಿಗೆ ತನ್ನ ನಿಜವಾದ ಆಸಕ್ತಿ ಇರುವುದು ಮತ್ತು ತಾನೇನಾದರೂ ಸಾಧಿಸಬೇಕಾಗಿರುವುದೆಲ್ಲ ಸಿನಿಮಾ ಕ್ಷೇತ್ರದಲ್ಲಿಯೇ ಎಂಬ ವಿಚಾರವೂ ಸ್ಪಷ್ಟವಾಗಿತ್ತು. ಅಂಥಾದ್ದೊಂದು ಸೇಲೆತದಿಂದಲೇ ಅವರು ನಿರ್ದೇಶನ ಮಾಡಿದ್ದ ಮೊದಲ ಚಿತ್ರ ‘ಈ ಸಂಭಾಷಣೆ’. ಈ ಚಿತ್ರದ ಮೂಲಕವೇ ನಟಿ ಹರಿಪ್ರಿಯಾ ಕೂಡಾ ಪ್ರಮುಖ ನಾಯಕಿಯಾಗಿ ಹೊರ ಹೊಮ್ಮಿದ್ದರು.

ಈ ಚಿತ್ರದಿಂದಲೇ ಸಿನಿಮಾ ಅಂದರೇನೆಂಬ ಸವಿಸ್ತಾರವಾದ ಪಾಠವನ್ನು ಪ್ರಾಕ್ಟಿಕಲ್ಲಾಗಿಯೇ ಕಲಿತುಕೊಂಡ ರಾಜಶೇಖರ್ ಮೊದಲ ಚಿತ್ರವಾದ ನಂತರ ತೆಗೆದುಕೊಂಡಿದ್ದು ಮೂರು ವರ್ಷಗಳಷ್ಟು ಸುದೀರ್ಘವಾದ ಸಮಯ. ಈ ಗ್ಯಾಪಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಹಲವಾರು ಸಾಕ್ಷ್ಯಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಆ ನಂತರದಲ್ಲಿ ಲವ್ಸ್ ರಾಧೆ ಚಿತ್ರ ರೂಪುಗೊಂಡು ಯಶ ಕಂಡಿದ್ದೀಗ ಇತಿಹಾಸ.

ಈ ಯಶಸ್ಸಿನ ಜೊತೆಗೇ ಆರಂಭವಾದ ಚಿತ್ರ ಪರದೇಸಿ ಕೇರಾಫ್ ಲಂಡನ್. ವಿಜಯ ರಾಘವೇಂದ್ರ ಅವರನ್ನು ಬೇರೆಯದ್ದೇ ರೀತಿಯಲ್ಲಿ ಪ್ರೇಕ್ಷಕರಿಗೆ ಮುಖಾಮುಖಿಯಾಗಿಸೋ ಉದ್ದೇಶದಿಂದಲೇ ಈ ಚಿತ್ರದ ಕಥೆ ರೆಡಿಯಾಗಿದೆ. ಕಾಮಿಡಿಯ ಜೊತೆಗೇ ಹಲವಾರು ವಿಶೇಷತೆಗಳನ್ನು ಹೊಂದಿರೋ ಈ ಚಿತನಿದೇ ತಿಂಗಳು ಬಿಡುಗಡೆಯಾಗಲಿದೆ.

#

CG ARUN

ಲವರ್ ಬಾಯ್ಸ್ ವಿತ್ ಆರೆಂಜ್!

Previous article

ಸಲಾಂ ರಾಕಿಂಗ್ ಭಾಯ್!

Next article

You may also like

Comments

Leave a reply

Your email address will not be published. Required fields are marked *