ಭಾನವಿ ಕ್ಯಾಪ್ಚರ್ಸ್ ಕನ್ನಡದ ಗುಣಮಟ್ಟದ ನಿರ್ಮಾಣ ಸಂಸ್ಥೆಯಾಗಿ ಬೆಳೆಯುವುದರೊಂದಿಗೆ ಯೂ ಟ್ಯೂಬ್ ಕ್ಷೇತ್ರದಲ್ಲೂ ಗಟ್ಟಿಯಾಗಿ ನೆಲೆ ಕಂಡುಕೊಳ್ಳುತ್ತಿದೆ. ಪಬ್ಲಿಕ್ ಟಾಯ್ಲೆಟ್ ನಂಥಾ ಕಾಡುವ ಕಂಟಂಟಿನ ಕಿರು ಚಿತ್ರವನ್ನು ನೀಡಿದ್ದ ಭಾನವಿ ಈಗ ಪಾರಿವಾಳ ಎನ್ನುವ ಒನ್ ಶಾಟ್ ನಲ್ಲಿ ಚಿತ್ರೀಕರಿಸಿರುವ ಹಾಡನ್ನು ಬಿಡುಗಡೆ ಮಾಡಿದೆ. ಹೊಸಬರನ್ನು ಪ್ರೋತ್ಸಾಹಿಸಬೇಕು, ಹೊಸ ಪ್ರಯೋಗಗಳನ್ನು ಮಾಡಬೇಕು ಎಂಬ ಮನಸ್ಥಿತಿ ಹೊಂದಿರುವ ಭಾನವಿ ಕ್ಯಾಪ್ಚರ್ಸ್ ನ ಸೂತ್ರಧಾರ ಅರುಣ್ ಸುರೇಶ್ (ಸುರೇಶ್ ಬಾಬು) ಮತ್ತು ಅದರ ಮೇಲ್ವಿಚಾರ ಶ್ರೀಕಾಂತ್ ಕಷ್ಯಪ್ ಅವರ ಶ್ರಮಕ್ಕೆ ಶರಣೆನ್ನಬೇಕು…
ಇತ್ತೀಚಿನ ದಿನಗಳಲ್ಲಿ ಸಿನಿಮಾರಂಗಕ್ಕೆ ಬರುವವರಿಗೆ ಆಲ್ಬಂ, ಷಾರ್ಟ್ ಫಿಲಂ ಮೇಕಿಂಗ್ ಒಂದು ಪ್ಲಾಟ್ಫಾರಂ ಆಗುತ್ತಿದೆ. ಇದರಲ್ಲಿ ತಮ್ಮ ಪ್ರತಿಭಾವಂತಿಕೆ ತೋರಿಸಿದರೆ ಅಂಥವರಿಗೆ ಮುಂದೆ ಸಿನಿಮಾ ರಂಗದಲ್ಲಿ ಖಂಡಿತ ಅವಕಾಶ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಇತ್ತೀಚೆಗಷ್ಟೇ ಪಬ್ಲಿಕ್ ಟಾಯ್ಲೆಟ್ ಎನ್ನುವ ಕಿರುಚಿತ್ರ ನಿರ್ಮಿಸಿದ ಭಾನವಿ ಕ್ಯಾಪ್ಚರ್ ಸಂಸ್ಥೆ ಇದೀಗ ಪಾರಿವಾಳ ಎಂಬ ಆಲ್ಬಂ ವೀಡಿಯೋ ಸಾಂಗ್ನ್ನು ಮಾಡಿದೆ. ಚಿನ್ನಿಪ್ರಕಾಶ್ ಅವರ ಶಿಶ್ಯ, ಮೂಲತ: ನೃತ್ಯ ಸಂಯೋಜಕರಾದ ರಾಂಕಿರಣ್ ಈ ಹಾಡಿನಲ್ಲಿ ಅಭಿನಯಿಸುವುದರ ಜೊತೆಗೆ ತಾವೇ ಕೊರಿಯೋಗ್ರಾಫ್ ಕೂಡ ಮಾಡಿದ್ದಾರೆ.
ವಿಶೇಷವಾಗಿ ಈ ಹಾಡನ್ನು ಸಿಂಗಲ್ ಟೇಕ್ನಲ್ಲಿ ಕ್ಯಾಮೆರಾಮನ್ ಅಭಿಷೇಕ್ ಜಿ.ಕಾಸರಗೋಡು ಸೆರೆಹಿಡಿದಿದ್ದು, ಅಗಸ್ತ್ಯ ಸಂತೋಷ್ ಇದರ ಸಾಹಿತ್ಯ ರಚಿಸಿ ರಾಗಸಂಯೋಜನೆ ಮಾಡಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ ಈ ಪಾರಿವಾಳದ ಹಾಡು ಬಿಡುಗಡೆಯಾಗಲಿದ್ದು, ಸದ್ಯ ಕನ್ನಡ ಸಾಂಗ್ ಮಾತ್ರ ಹೊರಬಂದಿದೆ. ಮುಂದಿನ ದಿನಗಳಲ್ಲಿ ಪ್ರತಿವಾರ ಒಂದೊಂದು ಭಾಷೆಯ ಹಾಡನ್ನು ರಿಲೀಸ್ ಮಾಡುವ ಯೋಜನೆಯನ್ನು ಈ ತಂಡ ಹಮ್ಮಿಕೊಂಡಿದೆ. ಇನ್ನು ಎಲ್ಲಾ ಛಾಷೆಯಲ್ಲೂ ಗಾಯಕ ಶಶಾಂಕ್ ಶೇಷಗಿರಿ ಅವರೇ ಹಾಡಿದ್ದಾರೆ. ನಾಯಕ ರಾಮ್ಕಿರಣ್ ಹಾಗೂ ನಾಯಕಿ ತೇಜಸ್ವಿನಿ ಶರ್ಮ ಅವರ ಅಭಿನಯವಿರುವ ಭಾನವಿ ಕ್ಯಾಪ್ಚರ್ ನಿರ್ಮಾಣದ ಈ ಹಾಡಿನ ಸಾಹಿತ್ಯದಲ್ಲಿ ಭಗ್ನಪ್ರೇಮಿಯೊಬ್ಬನ ಮನದ ವಿರಹವೇದನೆಯನ್ನು ಹೇಳಲು ಟ್ರೈ ಮಾಡಲಾಗಿದೆ.
ಹಿರಿಯ ನೃತ್ಯನಿರ್ದೇಶಕ ಚಿನ್ನಿಪ್ರಕಾಶ್ ಅವರು ಈ ವೀಡಿಯೋ ಆಲ್ಬಂ ಹಾಡನ್ನು ರೇಣುಕಾಂಬ ಥಿಯೇಟರಿನಲ್ಲಿ ಬಿಡುಗಡೆ ಮಾಡಿ ಶಿಶ್ಯನಿಗೆ ಶುಭ ಹಾರೈಸಿದರು. ಗಾಯಕ ವಿನು ಮನಸು ಮಾತನಾಡುತ್ತ ನನಗೆ ಈ ಹಾಡು ಸಿಕ್ಕಿದ್ದು, ಗೆಳೆಯ ವಿನು ಮನಸು ಅವರಿಂದ. ಮೊದಲು ಕನ್ನಡದಲ್ಲಿ ಹಾಡಿದೆ, ನಂತರ ಐದೂ ಭಾಷೆಗಳಲ್ಲಿ ಹಾಡಬೇಕೆಂದರು, ಮಲಯಾಳಂನಲ್ಲಿ ಹಾಡೋದು ಸ್ವಲ್ಪ ಕಷ್ಟವಾಯಿತು. ಈ ಹಾಡಿಗೆ ಮೇನ್ ಹೀರೋ ಎಂದರೆ ಅಭಿಷೇಕ್, ಸ್ವಲ್ಪವೂ ಗ್ಯಾಪ್ ಕೊಡದೆ ಹಾಡನ್ನು ಅವರು ಸೆರೆಹಿಡಿಯಬೇಕಿತ್ತು ಎಂದು ಹೇಳಿದರು.
ನಂತರ ರಾಮ್ಕಿರಣ್ ಮಾತನಾಡಿ ನಾವೆಲ್ಲ ಸೇರಿ ಏನಾದರೂ ಡಿಫರೆಂಟಾಗಿ ಟ್ರೈಮಾಡಬೇಕು ಎಂದು ಹೊರಟಾಗ ಈ ಕಾನ್ಸೆಪ್ಟ್ ಹೊಳೆಯಿತು, ಆಗಲೇ 6 ಚಿತ್ರಗಳಿಗೆ ಕ್ಯಾಮೆರಾವರ್ಕ್ ಮಾಡಿದ್ದ ಅಭಿಷೇಕ್, ವಿಭಿನ್ನ ಪ್ರಯತ್ನವಾಗಿ ಒನ್ಟೇಕ್ನಲ್ಲಿ ಈ ಸಾಂಗನ್ನು ಸೆರೆಹಿಡಿದಿದ್ದಾರೆ. ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಒಂದೇ ರಾತ್ರಿ ಈ ಹಾಡನ್ನು ಚಿತ್ರೀಕರಿಸಿದ್ದೇವೆ ಎಂದು ಹೇಳಿಕೊಂಡರು.
ಕೊನೆಯಲ್ಲಿ ಮಾತನಾಡಿದ ಚಿನ್ನಿಪ್ರಕಾಶ್, ಯುವರತ್ನ ಸಾಂಗ್ ಮಾಡುವಾಗ ಕಿರಣ್ ಈ ಹಾಡನ್ನು ಕೇಳಿಸಿದ, ಸಖತ್ತಾಗಿತ್ತು, ನಾನೇ ಕೊರಿಯೋಗ್ರಾಫ್ ಮಾಡಬೇಕು ಅನ್ನಿಸುವಷ್ಟು ಆಕರ್ಷಕವಾಗಿತ್ತು, ನಾನಾಗಿದ್ರೆ ಈ ಹಾಡನ್ನು 4-5 ದಿನ ಮಾಡ್ತಿದ್ದೆ, ಆದರೆ ಈತನ ಆಲೋಚನೆ ಕಂಡು ಆಶ್ಚರ್ಯವಾಯ್ತು, ಅಲ್ಲಿ ನಾನೀ ಇದ್ರೂ ಇಷ್ಟು ಚೆನ್ನಾಗಿ ಮಾಡಲು ಆಗ್ತಿರಲಿಲ್ಲ,ನಾನೆಲ್ಲೇ ಹೋದರೂ ರಾಮ್ಕಿರಣ್ ನನ್ನ ಶಿಶ್ಯ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ, ಈ ಹಾಡು ಮಿಲಿಯನ್ಗಟ್ಟಲೆ ವೀಕ್ಷಣೆಯಾಗಿ ಯಶಸ್ಸು ಗಳಿಸಲಿ ಎಂದು ಹಾರೈಸಿದರು.
No Comment! Be the first one.