ರಮೇಶ್ ಅರವಿಂದ್ ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿಯೇ ನಿರ್ದೇಶನ ಮಾಡುತ್ತಿರೋ ಚಿತ್ರ ಬಟರ್‌ಫೈ. ಈ ಚಿತ್ರದ ಮೂಲಕವೇ ಬಹು ಕಾಲದಿಂದ ಮರೆಯಾಗಿದ್ದ ಪಾರುಲ್ ಯಾದವ್ ಪಾರ್ವತಿಯಾಗಿ ಬಂದಿದ್ದಾರೆ. ಪ್ಯಾರ್‌ಗೆ ಆಗ್ಬಿಟ್ಟೈತೆ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಬಂದು ಆ ನಂತರವೂ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದ ಪಾರುಲ್ ಬಹು ಕಾಲದಿಂದ ಕಣ್ಮರೆಯಾಗಿದ್ದಳು. ಆದರೀಗ ಆಕೆ ನಟಿ ಕಂ ನಿರ್ಮಾಪಕಿಯಾಗಿ ಮರಳಿ ಬಂದಿದ್ದಾರೆ.


ಒಂದು ಮನಮಿಡಿಯುವ, ಚೇತೋಹಾರಿ ಕಥಾನಕ ಹೊಂದಿರುವ ಈ ಚಿತ್ರ ಹಿಂದಿಯಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ಗಳಿಸಿತ್ತು. ಬಾಕ್ಸಾಫೀಸಿನಲ್ಲಿಯೂ ದಾಖಲೆ ಸೃಷ್ಟಿಸಿದ್ದ ಈ ಚಿತ್ರ ಕಂಗನಾಗೂ ಭಾರೀ ಹೆಸರು ತಂದು ಕೊಟ್ಟಿತ್ತು. ಕಂಗನಾ ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ಪಾರುಲ್ ಯಾದವ್ ಮಾಡುತ್ತಿದ್ದಾರೆ.


ವಿಚಾರ ಇದಲ್ಲ.
ವರ್ಷಕ್ಕೆ ಮುಂಚೆ ಮುಂಬೈನ ತನ್ನ ಮನೆ ಬಳಿ ವಾಕ್’ಗೆಂದು ತೆರಳಿದ್ದ ಪಾರೂಲ್ ಯಾದವ್ ಮೇಲೆ ಬೀದಿನಾಯಿಗಳು ಅಟ್ಯಾಕ್ ಮಾಡಿ ತೀವ್ರವಾಗಿ ಗಾಯಗೊಳಿಸಿದ್ದವು. ವಾರಗಟ್ಟಲೆ ಆಸ್ಪತ್ರೆಗೆ ಅಡ್ಮಿಟ್ ಆಗಿ ಚೇತರಿಸಿಕೊಂಡು ಹೊರಬಂದಿದ್ದರು ಪಾರೂಲ್. ನಂತರ ಓಲಾ ಕ್ಯಾಬ್ ಡ್ರೈವರ್ ಒಬ್ಬ ಪಾರೂಲ್ ಅವರ ಬ್ಯಾಗ್ ಮತ್ತು ಬೆಲೆಬಾಳುವ ವಾಚ್ ಅನ್ನು ಎಗರಿಸಿದ್ದ. ಕಡೆಗೆ ಪೊಲೀಸರು ಅದನ್ನು ಹುಡುಕಿಕೊಟ್ಟಿದ್ದರು. ಈಗ ಪಾರೂಲ್ ಆಯತಪ್ಪಿ ಕೆಳಕ್ಕೆ ಬಿದ್ದೆ ಕೈ ಮೂಳೆ ಮುರಿದುಕೊಂಡಿದ್ದಾರೆ.

ಇತ್ತ ಬಟರ್’ಫ್ಲೈ ಬಿಡುಗಡೆಗೆ ತಯಾರಾಗುತ್ತಿರುವ ಸಂದರ್ಭದಲ್ಲೇ ಪಾರೂಲ್ ಕೈ ಮುರಿದುಕೊಂಡಿದ್ದಾರೆ. ಯಾಕೋ ಏನೋ ಸಮಸ್ಯೆ, ಸಂಕಟಗಳೆಲ್ಲಾ ಪಾರೂಲ್ ಅವರನ್ನೇ ಹುಡುಕಿಕೊಂಡು ಬರುತ್ತಿರುವಂತೆ ಕಾಣುತ್ತಿದೆ. ಒಳ್ಳೆಯದೇನೋ ಘಟಿಸುವ ಮುಂಚೆ ಇಂಥಾ ಸವಾಲುಗಳು ಎದುರಾಗೋದು ಸಹಜ. ಈಕೆ ಅನುಭವಿಸುತ್ತಿರುವ ಬಾಧೆಗಳಿಗೆಲ್ಲಾ ಬಟರ್’ಫ್ಲೈ ಬಿಡುಗಡೆಯ ನಂತರ ಮುಕ್ತಿ ದೊರೆಯುವಂತಾಗಲಿ!

CG ARUN

ಕುಸ್ತಿ ಅಖಾಡದಿಂದ ಬಾಕ್ಸಿಂಗ್ ರಿಂಗ್ ಒಳಗೆ ಜಿಗಿಯುವ ಪೈಲ್ವಾನ್!

Previous article

ಪಾಪ್‌ಕಾರ್ನ್ ಮಂಕಿ ಟೈಗರ್ ಜೊತೆ ಸೋಮ್ ಸಿಂಗ್!

Next article

You may also like

Comments

Leave a reply

Your email address will not be published. Required fields are marked *