ರಮೇಶ್ ಅರವಿಂದ್ ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿಯೇ ನಿರ್ದೇಶನ ಮಾಡುತ್ತಿರೋ ಚಿತ್ರ ಬಟರ್ಫ್ಲೈ. ಈ ಚಿತ್ರದ ಮೂಲಕವೇ ಬಹು ಕಾಲದಿಂದ ಮರೆಯಾಗಿದ್ದ ಪಾರುಲ್ ಯಾದವ್ ಪಾರ್ವತಿಯಾಗಿ ಬಂದಿದ್ದಾರೆ. ಪ್ಯಾರ್ಗೆ ಆಗ್ಬಿಟ್ಟೈತೆ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಬಂದು ಆ ನಂತರವೂ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದ ಪಾರುಲ್ ಬಹು ಕಾಲದಿಂದ ಕಣ್ಮರೆಯಾಗಿದ್ದರು. ಆದರೀಗ ಆಕೆ ನಟಿ ಕಂ ನಿರ್ಮಾಪಕಿಯಾಗಿ ಮರಳಿ ಬಂದಿದ್ದಾರೆ.
ಹಿಂದಿಯಲ್ಲಿ ಕಂಗನಾ ರನೌತ್ ಮುಖ್ಯಭೂಮಿಕೆಯಲ್ಲಿ ನಟಿಸಿ ಸೂಪರ್ ಹಿಟ್ ಆಗಿದ್ದ ಚಿತ್ರ ಕ್ವೀನ್. ಅದರ ರೀಮೇಕ್ ಬಟರ್ ಫ್ಲೈ ಚಿತ್ರ. ಇದು ಏಕ ಕಾಲದಲ್ಲಿ ಕನ್ನಡ ತಮಿಳು ಮತ್ತು ತೆಲುಗಿನಲ್ಲಿಯೂ ರೆಡಿಯಾಗುತ್ತಿದೆ. ಕನ್ನಡ ಮತ್ತು ತಮಿಳಿನಲ್ಲಿ ರಮೇಶ್ ಅರವಿಂದ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಇದರಲ್ಲಿ ಕನ್ನಡ ಭಾಷೆಯ ಬಟರ್ಫ್ಲೈನಲ್ಲಿ ಪಾರುಲ್ ಯಾದವ್ ಪಾರ್ವತಿಯಾಗಿ ಕಾಂಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್ ಮೂಲಕ ಪಾರೂಲ್ ಖುಷಿ ಹಂಚಿಕೊಂಡಿದ್ದಾರೆ.
‘ನಾನೀಗ ಪಾರ್ವತಿಯಾಗಿ ಬರುತ್ತಿದ್ದೇನೆ. ಈ ಬಗ್ಗೆ ತುಂಬಾ ಖುಷಿಯಿಂದಿದ್ದೇನೆ’ ಎಂಬರ್ಥದಲ್ಲಿ ಪಾರುಲ್ ಯಾದವ್ ಹೇಳಿಕೊಂಡಿದ್ದಾರೆ. ಜೊತೆಗೆ ಪಾರ್ವತಿಯಾಗಿ ತನ್ನ ಲುಕ್ ಹೇಗಿದೆ ಎಂಬ ಸ್ಯಾಂಪಲ್ ಫೋಟೋ ಒಂದನ್ನೂ ಕೂಡಾ ಹಾಕಿಕೊಂಡಿದ್ದಾರೆ. ಈ ನಟನೆಯ ಜೊತೆಗೇ ಪಾರುಲ್ ಈ ಚಿತ್ರದ ನಿರ್ಮಾಣದಲ್ಲಿಯೂ ಭಾಗಿಯಾಗಿದ್ದಾರಂತೆ.
ಒಂದು ಮನಮಿಡಿಯುವ, ಚೇತೋಹಾರಿ ಕಥಾನಕ ಹೊಂದಿರುವ ಈ ಚಿತ್ರ ಹಿಂದಿಯಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ಗಳಿಸಿತ್ತು. ಬಾಕ್ಸಾಫೀಸಿನಲ್ಲಿಯೂ ದಾಖಲೆ ಸೃಷ್ಟಿಸಿದ್ದ ಈ ಚಿತ್ರ ಕಂಗನಾಗೂ ಭಾರೀ ಹೆಸರು ತಂದು ಕೊಟ್ಟಿತ್ತು. ಕಂಗನಾ ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ಪಾರುಲ್ ಯಾದವ್ ಮಾಡುತ್ತಿದ್ದಾರೆ.
#
No Comment! Be the first one.