ಬೆಂಗಳೂರಿನ ಯಡಿಯೂರು ವಾರ್ಡ್ ವ್ಯಾಪ್ತಿಯ ಸೌತ್ ಎಂಡ್ ಸರ್ಕಲ್ ನ ಬಳಿ ಪಾಲಿಕೆಯ ವತಿಯಿಂದ ಸ್ಥಾಪಿಸಿರುವ ಡಾ|| ಪಾರ್ವತಮ್ಮ ರಾಜ್ ಕುಮಾರ್ ರವರ ಕಂಚಿನ ಪ್ರತಿಮೆಗೆ ಇತ್ತೀಚಿಗೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಮರ್ಪಣೆ ಸಲ್ಲಿಸಿದರು.
ಅಂದ ಹಾಗೆ ಈ ಪ್ರತಿಮೆಯನ್ನು ಮೇ 31 ರಂದು ಉಪಮುಖ್ಯಮಂತ್ರಿ ಡಿ.ಪರಮೇಶ್ವರ್ ಲೋಕಾರ್ಪಣೆ ಮಾಡಿದರು. ಕನ್ನಡ ಚಲನಚಿತ್ರ ಇತಿಹಾಸದಲ್ಲೆ ಇದೇ ಮೊದಲ ಬಾರಿಗೆ ನಿರ್ಮಾಪಕಿಯೊಬ್ಬರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಡಾ.ರಾಜ್ ಕುಟುಂಬದ ಅಪ್ಪಟ ಅಭಿಮಾನಿಯಾಗಿರುವ ಮಾಜಿ ಕಾರ್ಪೋರೇಟ್ ಎನ್ ಎಂ ರಮೇಶ್ ನೇತೃತ್ವದಲ್ಲಿ ಈ ಪ್ರತಿಮೆ ನಿರ್ಮಾಣವಾಗಿದೆ. ಈ ಕಂಚಿನ ಪ್ರತಿಮೆಯನ್ನು ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
No Comment! Be the first one.