ಸುಮಲತಾ ಅಂಬರೀಷ್ ಮತ್ತು ಹರಿಪ್ರಿಯಾ ನಟನೆಯ ‘ಡಾಟರ್ ಆಫ್ ಪಾರ್ವತಮ್ಮ’ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ ‘ಯು’ ಪ್ರಮಾಣ ಪತ್ರ ಸಿಕ್ಕಿದ್ದು, ಮೇ 24ರಂದು ತೆರೆಕಾಣಲಿದೆ. ಸದ್ಯ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಚಿತ್ರತಂಡ ಹಾಡುಗಳನ್ನು ಒಂದೊಂದಾಗಿಯೇ ಬಿಡುಗಡೆ ಮಾಡುತ್ತಿದೆ. ವಿಶೇಷವೆಂದರೆ ವಿಧುನ್ ಮುಕುಂದನ್ ಸಂಗೀತ ಸಂಯೋಜನೆ ಮಾಡಿರುವ ಒಂದು ಗೀತೆಗೆ ‘ಡಾಲಿ’ ಧನಂಜಯ ಲಿರಿಕ್ಸ್ ಬರೆದಿದ್ದಾರೆ.
ಹೌದು‘..ಡಾಲಿ ಪಾರ್ವತಮ್ಮ’ ಬಳಗಕ್ಕೊಂದು ಅವರೊಂದು ಹಾಡು ಬರೆದುಕೊಟ್ಟಿದ್ದು, ಅದನ್ನು ‘ರೋರಿಂಗ್ ಸ್ಟಾರ್’ ಶ್ರೀಮುರಳಿ ಇಂದು (ಮೇ 8) ಬಿಡುಗಡೆ ಮಾಡಲಿದ್ದಾರೆ. ಕೇಳುಗರಿಗೆ ಸಂಜೆ 5 ಗಂಟೆಗೆ ಪಿಆರ್ಕೆ ಯುಟ್ಯೂಬ್ ಚಾನೆಲ್ನಲ್ಲಿ ಈ ಗೀತೆ ಲಭ್ಯವಾಗಲಿದೆ. ‘..ಪಾರ್ವತಮ್ಮ’ ಮೂಲಕ ನಿರ್ದೇಶಕನಾಗಿ ಪರಿಚಯಗೊಳ್ಳುತ್ತಿರುವ ಶಂಕರ್, ಈ ಹಿಂದೆ ಧನಂಜಯ ನಟಿಸಿದ್ದ ‘ಜೆಸ್ಸಿ’ ಸಿನಿಮಾಕ್ಕೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಧನಂಜಯಗೆ ಇರುವ ಸಾಹಿತ್ಯಾಸಕ್ತಿ ಬಗ್ಗೆ ಶಂಕರ್ ಆಗಲೇ ತಿಳಿದುಕೊಂಡಿದ್ದರಂತೆ. ‘ನಮ್ಮ ಸಿನಿಮಾದ ಕ್ಲೈಮ್ಯಾಕ್ಸ್ಗೂ ಮುನ್ನ ಬರುವ ಹಾಡಿದು. ಅಲ್ಲಿಯವರೆಗೂ ಕಥೆ ಏನಾಗಿದೆ ಎಂಬುದನ್ನು ಸಾರಾಂಶದ ರೀತಿ ಕಟ್ಟಿಕೊಡುವ ಸಾಹಿತ್ಯ ಬೇಕಿತ್ತು. ಧನಂಜಯ ಅವರನ್ನು ಕೇಳಿಕೊಂಡಾಗ ಖುಷಿಯಿಂದ ಒಪ್ಪಿಕೊಂಡರು. ಸನ್ನಿವೇಶವನ್ನು ಅರ್ಥಮಾಡಿಕೊಂಡು, ಸೂಕ್ತ ಸಾಲುಗಳನ್ನೇ ಬರೆದುಕೊಟ್ಟಿದ್ದಾರೆ’ ಎಂಬುದು ನಿರ್ದೇಶಕರ ಅಂಬೋಣ. ‘ಜೀವಕ್ಕಿಲ್ಲಿ ಜೀವ ಬೇಟೆ ಪಾಪಿ ಯಾರೋ ಇಲ್ಲಿ.. ಕೊಂದು ತಿನ್ನೋ ರೂಲೇ ಉಂಟು ಪಾಪ ಯಾವುದಿಲ್ಲಿ..’ ಎಂದು ಶುರುವಾಗುವ ಈ ಹಾಡಿಗೆ ಕಾರ್ತಿಕ್ ಚೆನ್ನೊಜಿ ರಾವ್, ನಾರಾಯಣ್ ಶರ್ಮಾ ಮತ್ತು ಮಿಧುನ್ ಮುಕುಂದನ್ ಜತೆಯಾಗಿ ಧ್ವನಿ ನೀಡಿದ್ದಾರೆ.
No Comment! Be the first one.