ಈಗ ಸಾಮಾಜಿಕ ಜಾಲತಾಣಗಳಲ್ಲೆಲ್ಲ ಶೀತಲ್ ಶೆಟ್ಟಿ ಅಭಿನಯದ ಪತಿಬೇಕು ಡಾಟ್ ಕಾಮ್ ಚಿತ್ರದ ಡೈಲಾಗಿನದ್ದೇ ಸಂಚಲನ. ‘ಊರೋರಿಗೆಲ್ಲ ಹೆದರ‍್ಕೊಂಡು ಇಬ್ರು ರೂಮೊಳಗೆ ಸೇರಿಕೊಂಡ್ರೆ ಲವ್ ಮ್ಯಾರೇಜ್, ಊರೋರೆಲ್ಲ ಸೇರಿ ಇಬ್ರನ್ನ ರೂಮೊಳಗೆ ಬಿಟ್ರೆ ಅದು ಆರೇಂಜ್ಡ್ ಮ್ಯಾರೇಜ್’ ಎಂಬ ಡೈಲಾಗಿನ ಡಬ್‌ಸ್ಮ್ಯಾಶ್ ವಿಡಿಯೋಗಳು ವ್ಯಾಪಕವಾಗಿ ಹರಿದಾಡಲಾರಂಭಿಸಿವೆ.

ವಾರದ ಹಿಂದಷ್ಟೇ ಈ ಚಿತ್ರದ ಟ್ರೈಲರ್ ಲಾಂಚ್ ಆಗಿತ್ತು. ಅದಾಗಿ ದಿನ ಕಳೆಯುವಷ್ಟರಲ್ಲಿಯೇ ಈ ಡೈಲಾಗು ಎಲ್ಲರಿಗೂ ಇಷ್ಟವಾಗಿತ್ತು. ಅದರಲ್ಲಿಯೂ ವಿಶೇಷವಾಗಿ ಹುಡುಗೀರು ಈ ಡೈಲಾಗನ್ನು ಡಬ್‌ಸ್ಮ್ಯಾಶ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತಿದ್ದಾರೆ. ನೋಡುತ್ತಲೇ ಇದೊಂದು ಕ್ರೇಜ್ ಆಗಿ ರೂಪಾಂತರ ಹೊಂದಿದೆ. ಇದೀಗ ೧೫೦೦ಕ್ಕೂ ಹೆಚ್ಚು ಹುಡುಗಿಯರು ಈ ಡೈಲಾಗನ್ನು ಡಬ್‌ಸ್ಮ್ಯಾಶ್ ಮಾಡಿದ್ದಾರೆ!

ಡಬ್‌ಸ್ಮ್ಯಾಶ್‌ಗೆ ಪ್ರಸಿದ್ಧವಾದ ಮ್ಯೂಸಿಕಲಿ ಸೇರಿದಂತೆ ಸಕಲ ಆಪ್‌ಗಳಲ್ಲಿಯೂ ಈ ಡೈಲಾಗ್ ಇದೀಗ ಟ್ರೆಂಡಿಂಗಿನಲ್ಲಿದೆ. ಈ ಬೆಳವಣಿಗೆ ಕಂಡು ನಿರ್ದೇಶಕ ರಾಕೇಶ್ ಸೇರಿದಂತೆ ಇಡೀ ಚಿತ್ರತಂಡ ಖುಷಿಗೊಂಡಿದೆ. ಈಗಾಗಲೇ ಪತಿಬೇಕು ಡಾಟ್ ಕಾಮ್ ಚಿತ್ರದ ಯಾಕಪ್ಪ ದೇವರೆ ಆಡಿಸ್ತ್ಯ ಕ್ಯಾಬರೆ ಹಾಡು ಇಂಥಾದ್ದೇ ಕ್ರೇಜ್‌ಗೆ ಕಾರಣವಾಗಿದೆ.

ಈ ಹಿಂದೆ ತರ‍್ಲೆ ನನ್ ಮಕ್ಳು ಅಂತೊಂದು ಚಿತ್ರ ಮಾಡಿದ್ದ ನಿರ್ದೇಶಕ ಪ್ರೇಮ್ ಶಿಷ್ಯ ರಾಕೇಶ್ ಅವರ ಎರಡನೇ ಚಿತ್ರ ಪತಿಬೇಕು ಡಾಟ್‌ಕಾಮ್. ಮಧ್ಯಮವರ್ಗದ ತಲ್ಲಣಗಳ ಅನಾವರಣದಂತಿರೋ ಈ ಚಿತ್ರದ ಮೂಲಕ ಮೊದಲ ಸಲ ಶೀತಲ್ ಶೆಟ್ಟಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದ್ದಾರೆ. ಇದೀಗ ಟ್ರೈಲರ್‌ಗೆ ಸಿಕ್ಕಿರುವ ಭಾರೀ ಮೆಚ್ಚುಗೆಯಿಂದಾಗಿ ಚಿತ್ರಂಡ ಭರಪೂರ ಗೆಲುವಿನ ನಿರೀಕ್ಷೆ ಹೊಂದಿದೆ.

#

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಚಾಲಾಕಿ ಮನಸಿನ ಪಾದರಸ ಸಂಚಾರ!

Previous article

ದಮಯಂತಿಯಾಗಲಿದ್ದಾರಾ ರಾಧಿಕಾ?

Next article

You may also like

Comments

Leave a reply

Your email address will not be published. Required fields are marked *