ನಿರ್ದೇಶಕ ಪವನ್ ಒಡೆಯರ್ ಈಗ ಫಾದರ್ ಆಗಿದ್ದಾರೆ!
2018ರ ನಡುವಿನಲ್ಲಿ ಅಪೇಕ್ಷಾ ಪುರೋಹಿತ್ ಜೊತೆ ಪವನ್ ಮದುವೆಯಾಗಿದ್ದರು. ತಮ್ಮದೇ ನಿರ್ದೇಶನದ ಮೊದಲ ಸಿನಿಮಾ ಗೋವಿಂದಾಯ ನಮಃ ಸಿನಿಮಾ ಮತ್ತು ಆ ಸಿನಿಮಾಗೆ ತಾವೇ ಬರೆದ ಪ್ಯಾರ್ಗೇ ಆಗ್ಬುಟ್ಟೈತೆ ಹಾಡಿನ ಮೂಲಕ ಖ್ಯಾತಿ ಪಡೆದವರು ಪವನ್. ಆ ನಂತರ ತೆಲುಗಿನ ಪೋಟಗಾಡು, ಕನ್ನಡದ ರಣವಿಕ್ರಮ, ಗೂಗ್ಲಿ, ಜೆಸ್ಸಿ, ನಟರಾಜ ಸರ್ವೀಸ್, ನಟ ಸಾರ್ವಭೌಮ ಸಿನಿಮಾಗಳನ್ನು ನಿರ್ದೇಸಿಸಿದರು. ಪ್ರೀತಿ ಗೀತಿ ಇತ್ಯಾದಿ ಸಿನಿಮಾದಲ್ಲಿ ಹೀರೋ ಆಗಿಯೂ ನಟಿಸಿದರು. ಸದ್ಯ ಇವರ ನಿರ್ದೇಶನದ ರೇಮೋ ತೆರೆಗೆ ಬರಬೇಕಿದೆ. ಸಿನಿಮಾರಂಗಕ್ಕೆ ಬಂದು ಎಂಟು ವರ್ಷಗಳಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿರುವ ಒಡೆಯರ್ ಈಗ ಫಾದರ್ ಆಗಿರುವುದು ಅವರ ಖಾಸಗೀ ಬದುಕಿನ ಅಚೀವ್ ಮೆಂಟ್ ಅಂದುಕೊಳ್ಳಬಹುದು!
ಕೊರೋನಾದಂಥ ದುರಿತ ಕಾಲದಲ್ಲಿ ಸಿನಿಮಾ ಮಂದಿ ಸೊರಗಿಹೋಗಿದ್ದಾರೆ. ಅಂದುಕೊಂಡ ಕೆಲಸಗಳು ಸಲೀಸಾಗಿ ಸಾಗುತ್ತಿಲ್ಲ ಅನ್ನೋದು ಬಹುತೇಕರ ಕೊರಗು. ಇಂಥ ಸಮಯದಲ್ಲಿ ಖಾಸಗೀ ಬದುಕಿನ ನೆಮ್ಮದಿ, ಖುಷಿಗಳು ಅವರ ಪ್ರೊಫೆಷನಲ್ ಕೆರಿಯರಿಗೆ ಟಾನಿಕ್ ನೀಡುತ್ತದೆ. ಮಗ ಬಂದ ಖುಷಿಯಲ್ಲಿ ಪವನ್ ಮೈಂಡಲ್ಲಿ ಒಳ್ಳೆ ಕಾನ್ಸೆಪ್ಟುಗಳೂ ಜನ್ಮ ಪಡೆಯಲಿ.
ಪವನ್ ಒಡೆಯರ್ ಗೆ ಮಗ ಹುಟ್ಟಿದ ಖುಷಿ ಒಂದೆಡೆಯಾದರೆ, ʻಮಗುವಿನೊಂದಿಗೆ ಅಪ್ಪ ಕೂಡಾ ಹುಟ್ಟುತ್ತಾನೆʼ ಅನ್ನೋ ಮಾತಿದೆ. ಪವನ್ ಹುಟ್ಟಿದ ದಿನದಂದೇ ಪತ್ನಿ ಅಪೇಕ್ಷಾ ಮಗುವಿಗೆ ಜನ್ಮ ನೀಡಿದ್ದಾರೆ. ಇದು ಪವನ್ ಸಂತಸವನ್ನು ಇಮ್ಮಡಿಗೊಳಿಸಿದೆ. ಇದು ನನ್ನ ಈ ಹುಟ್ಟಿದ ದಿನಕ್ಕೆ ಸಿಕ್ಕ ವಂಡರ್ ಫುಲ್ ಗಿಫ್ಟ್ ಎಂದು ಸ್ವತಃ ಒಡೆಯರ್ ಹೇಳಿಕೊಂಡಿದ್ದಾರೆ…
ಒಳಿತಾಗಲಿ…
No Comment! Be the first one.