ಕನ್ನಡ ಭಾಷೆ ಸೇರಿದಂತೆ ತೆಲುಗು ಭಾಷೆಯಲ್ಲಿ ತಮ್ಮ ನಟನೆಯ ಛಾಪು ಮೂಡಿಸಿರುವ ಮೈಸೂರು ಲೋಕೇಶ್ ಮಗಳಾದ ಪವಿತ್ರ ಲೋಕೇಶ್ ಯಾರಿಗೆ ಗೊತ್ತಿಲ್ಲ. ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಪೋಷಕ ಪಾತ್ರಗಳ ಮೂಲಕವೇ ಫೇಮಸ್ಸಾದವರು. ಆದರೆ ಕಳೆದೊಂದು ವರ್ಷದಿಂದ ಕನ್ನಡದತ್ತ ತಿರುಗಿಯೂ ನೋಡದ ಪವಿತ್ರ ಲೋಕೇಶ್ ಈಗ ಮತ್ತೆ ಕನ್ನಡ ಕಿರುತೆರೆಗೆ ಕಮ್ ಬ್ಯಾಕ್ ಆಗಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಅರಮನೆ ಗಿಳಿ ಧಾರಾವಾಹಿಯಲ್ಲಿ ಊರ ಯಜಮಾನಿ ಮೀನಾಕ್ಷಿಯಮ್ಮನ ಪಾತ್ರದಲ್ಲಿ ಪವಿತ್ರಾ ಲೋಕೇಶ್ ಕಾಣಿಸಿಕೊಳ್ಳಲಿದ್ದಾರೆ. ಮೇ 20ರಿಂದ ಈ ಧಾರಾವಾಹಿ ಪ್ರಸಾರವಾಗಲಿದೆ.
No Comment! Be the first one.