ರಾಂಧವ ಚಿತ್ರತಂಡ ಸಾರ್ಥಕವಾದೊಂದು ಕೆಲಸವನ್ನು ಮಾಡಿದೆ. ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಮೃತಪಟ್ಟಿದ್ದ ಯೋಧ ಗುರು ಕುಟುಂಬಕ್ಕೆ ನೆರವು ನೀಡಲಾಗಿದೆ. ಈ ಚಿತ್ರದ ನಾಯಕ ಭುವನ್ ಸೇರಿದಂತೆ ಚಿತ್ರತಂಡ ಯೋಧನ ಮನೆಗೆ ತೆರಳಿ ಒಂದು ಲಕ್ಷ ರೂಪಾಯಿಗಳ ನೆರವು ನೀಡಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗುಡಿಗೆರೆ ಹುತಾತ್ಮ ಯೋಧ ಗುರು ಊರು. ಇದೀಗ ಈ ಊರ ತುಂಬಾ ಸ್ಮಶಾನ ಮೌನ ಆವರಿಸಿಕೊಂಡಿದೆ. ಏಕಾ ಏಕಿ ಬಂದೆರಗಿದ ಈ ಆಘಾತದಿಂದ ಮನೆ ಮಂದಿಯೆಲ್ಲ ಕಂಗಾಲಾಗಿದ್ದಾರೆ. ಅಲ್ಲಿಯೇ ತೆರಳಿ ಎಲ್ಲರಿಗೂ ಸಮಾಧಾನ ಹೇಳಿದ ರಾಂಧವ ಚಿಉತ್ರ ತಂಡ ಒಂದು ಲಕ್ಷ ರೂಪಾಯಿಗಳ ನೆರವನ್ನು ನೀಡಿದೆ.
ರಾಂಧವ ಚಿತ್ರ ತಂಡ ಸದ್ದಿಲ್ಲದೆ ನಡೆಸಿದ ಈ ಕೆಲಸ ನಿಜಕ್ಕೂ ಮೆಚ್ಚುವಂಥಾದ್ದೇ. ಸಿನಿಮಾ ಸೇರಿದಂತೆ ಯಾವುದೇ ಕ್ಷೇತ್ರವಿದ್ದರೂ ಇಡೀ ದೇಶದ ಎಲ್ಲರ ಮೇಲೆಯೂ ಯೋಧರ ಋಣವಿದ್ದೇ ಇದೆ. ಅಂಥಾ ವೀರ ಯೋಧನನ್ನು ಕಳೆದುಕೊಂಡು ದುಃಖದಲ್ಲಿರೋ ಕುಟುಂಬಿಕರಿಗೆ ಸಮಾಧಾನಬ ಹೇಳುವ ಜೊತೆಗೇ ಆರ್ಥಕವಾಗಿಯೂ ನೆರವಾಗಿರೋ ರಾಧವ ಚಿತ್ರ ತಂಡವನ್ನು ಮೆಚ್ಚಿಕೊಳ್ಳಲೇ ಬೇಕಿದೆ.
ಕಳೆದ ಆರು ತಿಂಗಳ ಹಿಂದಷ್ಟೇ ಗುರು ಮದುವೆಯಾಗಿದ್ದರು. ಹೆಚ್ಚೇನಲ್ಲ, ಈಗ್ಗೆ ವಾರದ ಹಿಂದಷ್ಟೇ ಹುಟ್ಟಿದೂರಿಗೆ ಬಂದು ಎಲ್ಲರೊಂದಿಗೂ ಖುಷಿಯಾಗಿ ಕಳೆದ ಗುರು ಮೊನ್ನೆಯಷ್ಟೇ ಕರ್ತವ್ಯಕ್ಕೆ ವಾಪಾಸಾಗಿದ್ದರು. ಅಷ್ಟರಲ್ಲಿಯೇ ಪಾಪಿ ಪಾಕಿಸ್ತಾನ ಪ್ರಣೀತ ರಕ್ಕಸ ಉಗ್ರರು ಅವರನ್ನು ಬಲಿ ತೆಗೆದುಕೊಂಡಿದ್ದಾರೆ. ಹೀಗೆ ಹುಲಿಯಂಥಾ ಯೋಧನನ್ನು ಕಳೆದುಕೊಂಡಿರೋ ಕುಟುಂಬದ ಕಣ್ಣೀರೊರೆಸೋ ಸಾರ್ಥಕ ಪ್ರಯತ್ನವನ್ನ ರಾಂಧವ ಚಿತ್ರತಂಡ ಮಾಡಿದೆ.
#