ಇಂಥ ಪಾತ್ರದಲ್ಲಿ ವಿನಯ್ ಅವರನ್ನ ನೋಡಲು ನಾನು ಇಷ್ಟ ಪಡುತ್ತೇನೆ. ಯಾವತ್ತಿಗೂ ಪಾತ್ರ ಮಾತನಾಡ ಬೇಕು. ಹೀರೋಗಿಂತ ಪಾತ್ರ ದೊಡ್ಡದು.
ವಿನಯ್ ನಿರ್ವಹಿಸಿರುವ ಪಾತ್ರ ಸಖತ್ ಕುತೂಹಲ ಮೂಡಿಸಿದೆ.. ಇಂತಹ ಸಿನಿಮಾಗಳನ್ನ ನೀವು ಮಾಡಿ , ನಿಮಗೆ ಒಪ್ಪುತ್ತದೆ.. ಖಂಡಿತವಾಗಿ ನಾನು ಈ ನಿಮ್ಮ ಸಿನಿಮಾಕ್ಕೆ ಸಪೋರ್ಟ್ ಮಾಡ್ತಿನಿ.
ಇದು ಕಿಚ್ಚ ಸುದೀಪ್ ಅವರು ವಿನಯ್ ರಾಜ್ ಕುಮಾರ್ ನಟನೆಯ ಪೆಪೆ ಸಿನಿಮಾದ ಬಗ್ಗೆ ವಿನಯ್ ರಾಜ್ ಕುಮಾರ್ ಬಳಿ ಮಾತನಾಡಿರೋ ಮೆಚ್ಚುಗೆಯ ಮಾತುಗಳು. ಇಂದು ಕಿಚ್ಚ ಸುದೀಪ್ ಅವರ ನಿವಾಸಕ್ಕೆ ಭೇಟಿ ನೀಡಿದ್ರು ವಿನಯ್ ರಾಜ್ ಕುಮಾರ್.. ಈ ಸಂದರ್ಭದಲ್ಲಿ ಪೆಪೆ ಸಿನಿಮಾದ ಶೋ ರೀಲ್ ನೋಡಿದ ಅಭಿನಯ ಚಕ್ರವರ್ತಿ ಬಾದ್ ಶ ಕಿಚ್ಚ ಸುದೀಪ್ ಮೆಚ್ಚುಗೆಯ ಮಾತುಗಳನ್ನ ಆಡಿದ್ದಾರೆ. ಇಂಥ ಸಿನಿಮಾಗಳನ್ನ ನೀವು ಮಾಡಬೇಕು. ರೋಜ್ ಹಿಡಿದು ಮರ ಸುತ್ತೋ ಪಾತ್ರಕ್ಕಿಂತ ಇಂಥ ಮಾಸ್ ಪಾತ್ರಗಳನ್ನ ಮಾಡಬೇಕು. ಪೆಪೆ ಪಾತ್ರ ನಿಮಗೆ ಒಪ್ಪುತ್ತದೆ. ಹೊಸ ಹೀರೋಗಳು ನಮ್ ಇಂಡಸ್ಟ್ರಿಗೆ ಬೇಕಾಗಿದೆ. ಈ ಸಿನಿಮಾವನ್ನು ಜನರಿಗೆ ದೊಡ್ಡ ಮಟಕ್ಕೆ ತಲುಪಿಸಿ. ಪ್ರೇಕ್ಷಕರು ಖಂಡಿತವಾಗಿ ಕೈ ಹಿಡಿಯುತ್ತಾರೆ. ನನ್ನ ಪೂರ್ತಿ ಬೆಂಬಲ ಪೆಪೆ ತಂಡದ ಮೇಲೆ, ನಿಮ್ಮ ಮೇಲೆ ಇರುತ್ತದೆ ಎಂದು ಮನಸಾರೆ ಆಲ್ ದಿ ಬೆಸ್ಟ್ ಹೇಳಿ ಹರಸಿದ್ದಾರೆ
ನಾಳೆ ಮಾಲ್ ಆಫ್ ಎಷಿಯಾದಲ್ಲಿ ನಡೆಯಲಿರುವ ಪೆಪೆ ಟ್ರೈಲರ್ ಲಾಂಚ್ ಇವೆಂಟ್ ಗೆ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಬಂದು ಟ್ರೈಲರ್ ಲಾಂಚ್ ಮಾಡಲಿದ್ದಾರೆ..
No Comment! Be the first one.