ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿಯನ್ನು ಕಡ್ಡಾಯಗೊಳಿಸುವ ಬಗ್ಗೆ ಕರ್ನಾಟಕ ಸರ್ಕಾರದ ಹೊಸ ಮಸೂದೆಯ ವಿರುದ್ಧ ಫೋನ್ ಪೇ ಸಿಇಓ ಸಮೀರ್ ನಿಗಮ್ ಕಮೆಂಟ್ ಮಾಡಿದ್ದರು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ವಿರೋಧ ಮಾಡಿರುವ ಫೋನ್ ಪೇ ವಿರುದ್ಧ ಬಾಯ್ಕಾಟ್ ಅಭಿಯಾನಗಳೂ ಶುರುವಾಗಿವೆ. ಸೋಷಿಯಲ್ ಮೀಡಿಯಾದಲ್ಲಿ ಜನ ತಮ್ಮ ಆಕ್ರೋಷವನ್ನು ಹೊರಹಾಕಿದ್ದಾರೆ. ಹಲವರು ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದ್ದಾರೆ.
ಈ ನಿಟ್ಟಿನಲ್ಲಿ ಫೋನೇ ಸಂಸ್ಥೆಯ ಕರ್ನಾಟಕದ ರಾಯಭಾರಿಯಾಗಿರುವ ಕಿಚ್ಚ ಸುದೀಪ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದು ಬಹುತೇಕರ ಪ್ರಶ್ನೆಯಾಗಿತ್ತು. ಮೂಲಗಳ ಪ್ರಕಾರ ಫೋನ್ ಪೇ ಕನ್ನಡಿಗರ ಕ್ಷಮೆ ಕೋರಿ, ರಾಜ್ಯ ಸರ್ಕಾರದ ನಿಲುವಿಗೆ ಬದ್ದವಾಗದಿದ್ದರೆ ಕಿಚ್ಚ ಸುದೀಪ್ ಅವರು ಫೋನ್ ಪೇ ರಾಯಭಾರತ್ವದಿಂದ ಹೊರಬರುವ ನಿರ್ಧಾರ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಹಾಗೆ ನೋಡಿದರೆ ಕಿಚ್ಚ ಸುದೀಪ್ ಅವರು ಹಣಕ್ಕಿಂತಾ ಕಲೆ, ಭಾಷೆಯನ್ನು ಹೆಚ್ಚು ಗೌರವಿಸುತ್ತಾ ಬಂದವರು. ದುಡ್ಡೇ ಮುಖ್ಯ ಅನ್ನೋದಾಗಿದ್ದರೆ ಕಿಚ್ಚ ಸುದೀಪ್ ನಟನೆಯ ಸಿನಿಮಾಗಳ ಸಂಖ್ಯೆ ಈ ಹೊತ್ತಿಗೆ ದುಪ್ಪಟ್ಟಾಗಿರುತ್ತಿತ್ತು. ಬೇಕಾದಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಬಹುದಿತ್ತು. ತಮ್ಮ ಅಭಿಮಾನಿಗಳಿಗೆ ಉತ್ತಮ ಸಂದೇಶವನ್ನಷ್ಟೇ ನೀಡಬೇಕು ಅಂತಾ ಬಯಸಿದವರು ಸುದೀಪ್. ನಾಡು ನುಡಿಯ ವಿಚಾರ ಬಂದಾಗ ಕೂಡಾ ಮುಂಚೂಣಿಯಲ್ಲಿ ನಿಂತವರು. ಹೀಗಿರುವಾಗ, ಫೋನ್ ಪೇ ಸಿಇಓ ತಮ್ಮ ನಿಲುವನ್ನು ಬದಲಿಸಿಕೊಳ್ಳಲಿದ್ದರೆ, ಮುಂದಿನ ದಿನಗಳಲ್ಲಿ ಕಿಚ್ಚ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸಿ ಹೊರಬರುವ ಸಾಧ್ಯತೆಗಳಿವೆ ಅನ್ನೋದು ಸದ್ಯ ಕೇಳಿಬರುತ್ತಿರುವ ಮಾಹಿತಿ…
No Comment! Be the first one.