ಬಾಲಿವುಡ್ನ ಖ್ಯಾತ ಫೋಟೋಗ್ರಾಫರ್ ದಾಬೂ ರತ್ನಾನಿ ಅವರ 2009ರ ಸ್ಟಾರ್ ಕ್ಯಾಲೆಂಡರ್ ನಿನ್ನೆ ಬಿಡುಗಡೆಯಾಗಿದೆ. ಬಾಲಿವುಡ್ ತಾರೆಯರು ರೂಪದರ್ಶಿಗಳಾಗಿರುವ ಕ್ಯಾಲೆಂಡರ್ ಇದು. ಸೆಕ್ಸೀ ನಟಿ ಸನ್ನಿ ಲಿಯೋನ್ ಕೂಡ ಇದರಲ್ಲಿ ಮಾಡೆಲ್. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಆಕೆಯ ಫೋಟೋ ಲಕ್ಷಾಂತರ ಜನರನ್ನು ಮುಟ್ಟಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸನ್ನಿ ಕೂಡ ತಮ್ಮ ಫೋಟೋವನ್ನು ಟ್ವಿಟರ್ನಲ್ಲಿ ಹಾಕಿಕೊಂಡು ಫೊಟೋಗ್ರಾಫರ್ ರತ್ನಾನಿಗೆ ಶುಭಾಶಯ ಕೋರಿದ್ದಾರೆ.
ದಾಬೂ ರತ್ನಾನಿ ಕಳೆದ 20 ವರ್ಷಗಳಿಂದ ಸೆಲೆಬ್ರಿಟಿ ಕ್ಯಾಲೆಂಡರ್ ಮಾಡುತ್ತಿದ್ದಾರೆ. ಈ ಬಾರಿ ಬಾಲಿವುಡ್ ತಾರೆಯರಾದ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಐಶ್ವರ್ಯಾ ರೈ, ಹೃತಿಕ್ ರೋಷನ್, ಸನ್ನಿಲಿಯೋನ್, ವಿದ್ಯಾ ಬಾಲನ್, ಅನುಷ್ಕಾ ಶರ್ಮಾ, ಅಕ್ಷಯ್ ಕುಮಾರ್, ಕೃತಿ ಸನೂನ್ ಮುಂತಾದವರು ಕ್ಯಾಲೆಂಡರ್ಗೆ ರೂಪದರ್ಶಿಗಳಾಗಿ ಪೋಸ್ ಕೊಟ್ಟಿದ್ದಾರೆ. ದಾಬೂ ಅವರು ಬಾಲಿವುಡ್ನ ಎಲ್ಲರ ಅಚ್ಚುಮೆಚ್ಚಿನ ಸೆಲೆಬ್ರಿಟಿ ಫೋಟೋಗ್ರಾಫರ್.
ದಾಬೂ ರತ್ನಾನಿ ಅವರ ಕಳೆದ 20 ವರ್ಷಗಳ ಕ್ಯಾಲೆಂಡರ್ನಲ್ಲಿರುವ ಏಕೈಕೆ ಬಾಲಿವುಡ್ ತಾರೆ ಐಶ್ವರ್ಯಾ ರೈ ಎನ್ನುವುದು ವಿಶೇಷ. ಉಳಿದಂತೆ ಪ್ರತೀ ವರ್ಷ ಅವರ ಕ್ಯಾಲೆಂಡರ್ಗೆ ನವತಾರೆಯರು ರೂಪದರ್ಶಿಗಳಾಗುತ್ತಾರೆ. ಈ ಬಾರಿ ಕಾರ್ತೀಕ್ ಆರ್ಯನ್, ಕೀರಾ ಅಡ್ವಾನಿ, ಜಾಹ್ನವಿ ಕಪೂರ್ ಕ್ಯಾಲೆಂಡರ್ಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ನಿನ್ನೆ ನಡೆದ ಕ್ಯಾಲೆಂಡರ್ ಲಾಂಚ್ನಲ್ಲಿ ವಿದ್ಯಾ ಬಾಲನ್, ಕೀರಾ ಅಡ್ವಾನಿ, ಸನ್ನಿ ಲಿಯೋನ್, ಕಾರ್ತೀಕ್ ಆರ್ಯನ್ ಮುಂತಾದವರು ಹಾಜರಿದ್ದು ದಾಬೂ ರತ್ನಾನಿಗೆ ಶುಭ ಹಾರೈಸಿದ್ದಾರೆ.
#
No Comment! Be the first one.