ಬಿ ಟೌನಿನ ಸ್ಟಾರ್ ನಟಿ ಪ್ರಿಯಾಂಕ ಚೋಪ್ರಾ ಮತ್ತು ಪತಿ ನಿಕ್ ಜೋನಸ್ ಇಬ್ಬರು ಫ್ಯಾಮಿಲಿ ಜತೆಯಾಗಿ ದಕ್ಷಿಣ ಫ್ಲೋರಿಡಾದ ಮಿಯಾಮಿ ಬೀಚ್ ನಲ್ಲಿ ಸಮ್ಮರ್ ಹಾಲಿಡೆಯಲ್ಲಿದ್ದಾರೆ. ಸಿನಿಮಾಗಳಿಂದ ಕೊಂಚ ರಿಲೀಫ್ ತೆಗೆದುಕೊಂಡು ಮಿಯಾಮಿಗೆ ತೆರಳಿರುವ ಪಿಗ್ಗಿ ಈಗ ನೋಡುಗರ ಕಣ್ಣು ಕುಕ್ಕುತ್ತಿದ್ದಾರೆ. ಬೀಚ್ ನಲ್ಲಿ ಬಿಕಿನಿ ಧರಿಸಿ ಓಡಾಡುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳಿಗೆ ಅಚ್ಚರಿಯನ್ನುಂಟು ಮಾಡಿದೆ. ಈ ಹಾಟ್ ವೆದರ್ ನಲ್ಲಿ ಫುಲ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುವುದಲ್ಲದೇ ಕೆಲವು ವಾಟರ್ ಗೇಮ್ ಗಳನ್ನು ಆಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕಪ್ಪು ಹಸಿರು ಬಣ್ಣದ ಬಿಕಿನಿ ಧರಿಸಿರುವ ಪ್ರಿಯಾಂಕಾ ಫೋಟೋ ಅಭಿಮಾನಿಗಳ ನಿದ್ದೆಗೆಡಿಸಿವೆ. ಅದೇ ಬಿಕಿನಿ ಮೇಲೆ ಲೈಫ್ ಜಾಕೆಟ್ ಧರಿಸಿ ಪಿಗ್ಗಿ ಜೆಟ್ ಸ್ಕೈ ಆಡಿದ್ದಾರೆ. ಅಂದಹಾಗೆ ಮಿಯಾಮಿ ಬೀಚ್ ಸೆಲೆಬ್ರೆಟಿಗಳ ಬೀಚ್ ಎಂದೇ ಖ್ಯಾತಿ ಗಳಿಸಿದೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸೆಲೆಬ್ರೆಟಿಗಳಿಗೆ, ಮಾಡೆಲ್ ಗಳಿಗೆ ಈ ಮಿಯಾಮಿ ಬೀಚ್ ಹಾಟ್ ಫೇವರೇಟ್.
No Comment! Be the first one.