“ಸತತ 25 ವರ್ಷಗಳ ಕಾಲ ಅವಕಾಶಕ್ಕಾಗಿ ಕಾಯುತ್ತಾ ಕುಳಿತಿದ್ದ ಡಬ್ಬಿಂಗ್ ಆರ್ಟಿಸ್ಟ್ ರವಿಶಂಕರ್ ಅವರ ಕೈ ಹಿಡಿದದ್ದು ಕನ್ನಡದ ಕೆಂಪೇಗೌಡ. ಯಾವ ಸ್ಟೇಜ್ ಹತ್ತಿದ್ದರೂ ಸಿಗ್ನೇಚರ್ ಶಾಟ್ ನಂತೆ ಇದನ್ನು ಹೇಳುತ್ತಲೇ ಬರುತ್ತಿದ್ದಾರೆ. ಕೆಂಪೇಗೌಡ ಸಿನಿಮಾದಲ್ಲಿ ಆರ್ಮುಗನಾಗಿ ಅಬ್ಬರಿದ ಮೇಲಂತೂ ರವಿಶಂಕರ್ ಹಿಂದಿರುಗಿ ನೋಡದ ಮಟ್ಟಿಗೆ ಕಡಿಮೆ ಅವಧಿಯಲ್ಲಿಯೇ ಬಹುಭಾಷೆಗಳಲ್ಲಿ ಲೀಡಿಂಗ್ ವಿಲನ್ ಆಗಿ ಮಿಂಚಿದವರು.
ಇವರ ವಿಚಾರ ಸದ್ಯಕ್ಕೆ ಯಾಕಂದ್ರೆ ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ನಟಿಸುತ್ತಿರುವ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಪೊಗರಿನಲ್ಲಿ ರವಿಶಂಕರ್ ಪ್ರಮುಖ ಪಾತ್ರದಲ್ಲಿದ್ದಾರೆ ಎಂಬ ವಿಚಾರ ಗಾಂಧೀನಗರದಲ್ಲಿ ಎದ್ದಿದೆ. ಹೌದು ರವಿಶಂಕರ್ ಪೊಗರು ಸಿನಿಮಾದಲ್ಲಿ ನಟಿಸುತ್ತಿದ್ದರೂ ಖಳನಾಯಕನಾ? ಪೋಷಕ ಪಾತ್ರದಲ್ಲಾ? ಎಂಬ ಸೀಕ್ರೆಟನ್ನು ಮಾತ್ರ ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ ಪೊಗರು ಟೀಮ್. ಆದರೆ ಪೊಗರಿನಲ್ಲಿ ಅಭಿನಯಿಸುವುದಂತೂ ಕನ್ ಫರ್ಮ್. ಇನ್ನು ದುಬಾರಿ ಮೇಕಿಂಗ್, ಧ್ರುವಾ ಗೆಟಪ್ ಮೂಲಕ ಈಗಾಗಲೇ ಸುದ್ದಿಯಲ್ಲಿರುವ ಪೊಗರು ಚಿತ್ರತಂಡ ಡಾಲಿ ಧನಂಜಯ್, ರಾಘವೇಂದ್ರ ರಾಜ್ ಕುಮಾರ್, ರಶ್ಮಿಕಾ ಮಂದಣ್ಣ ಎಂಟ್ರಿ ಮೂಲಕವೂ ಪದೇ ಪದೇ ಸುದ್ದಿಯಾಗುತ್ತಲೇ ಇತ್ತು. ಕೊಂಚ ಲೇಟಾಯ್ತು ಎನ್ನುವ ಅಪವಾದ ಬಿಟ್ಟರೇ ಮತ್ತೆಲ್ಲವೂ ಪೊಗರಿಗೆ ಪ್ಲಸ್ ಆಗಲಿದೆ.
No Comment! Be the first one.