ಪೊಗರು. ಈ ವರ್ಷದ ಬಹುನಿರೀಕ್ಷಿತ ಚಿತ್ರ! ಈಗಾಗಲೇ ಬಿಡುಗಡೆಯಾಗಿರುವ ಖರಾಬು ಸಾಂಗ್ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಧ್ರುವಾ ಸರ್ಜಾ ಅಭಿಮಾನಿಗಳು, ರಶ್ಮಿಕಾ ಮಂದಣ್ಣ ಫ್ಯಾನ್ಸು ಈ ಸಿನಿಮಾ ರಿಲೀಸಾದರೆ ಸಾಕು ಅಂತಾ ಕಾದು ಕುಳಿತಿದ್ದಾರೆ.
ಶ್ರೀ ಜಗದ್ಗುರು ಮೂವೀಸ್ ಲಾಂಛನದಲ್ಲಿ ಬಿ.ಕೆ. ಗಂಗಾಧರ್ ನಿರ್ಮಿಸಿರುವ ಪೊಗರು ಚಿತ್ರ ಇದೇ ಫೆಬ್ರವರಿ 19ರಂದು ತೆರೆಗೆ ಬರುತ್ತಿದೆ. ಬಂಪರ್ ಮತ್ತು ಬೈ ಟು ಲವ್ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆ.ವಿ.ಎನ್ ಪ್ರೊಡಕ್ಷನ್ಸ್ ʻಪೊಗರುʼ ಚಿತ್ರವನ್ನು ರಿಲೀಸ್ ಮಾಡುತ್ತಿದೆ. ಧ್ರುವಾ ಸರ್ಜಾ ಸಿನಿಮಾ ಅಂದರೇನೆ ಅಲ್ಲಿ ಅದ್ಧೂರಿ ಇರುತ್ತದೆ. ಈಗ ಕೆವಿಎನ್ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದರಿಂದ ಆ ಅಬ್ಬರ ಮತ್ತಷ್ಟು ಹೆಚ್ಚಾಗೋದು ಗ್ಯಾರೆಂಟಿ.
ಪೊಗರು ಚಿತ್ರಕ್ಕಾಗಿ ಧ್ರುವಾ ಸರ್ಜಾ ವರ್ಷಗಟ್ಟಲೆ ಶ್ರಮ ಹಾಕಿದ್ದಾರೆ. ಈ ಚಿತ್ರಕ್ಕಾಗಿ ತೂಕ ಇಳಿಸಿಕೊಳ್ಳುವ ಮತ್ತು ಹೆಚ್ಚಿಸಿಕೊಳ್ಳುವ ಪ್ರಕ್ರಿಯೆಗಾಗಿ ವಿಪರೀತ ಎನ್ನುವಷ್ಟು ಶ್ರಮ ಹಾಕಿದ್ದಾರೆ. ನಂದ ಕಿಶೋರ್ ನಿರ್ದೇಶನದ ಪೊಗರು ಚಿತ್ರ ಇವತ್ತು ಬರೀ ಕರ್ನಾಟಕದಲ್ಲಿ ಮಾತ್ರವಲ್ಲದೆ, ನೆರೆಯ ರಾಜ್ಯಗಳಲ್ಲೂ ಕ್ರೇಜ಼್ ಹುಟ್ಟಿಸಿದೆ. ಲಾಕ್ ಡೌನ್ ಸಂದರ್ಭದಲ್ಲಿ ಖರಾಬು ಹಾಡಿನ ರಿದಮ್ಮಿಗೆ ಬೇರೆ ಭಾಷೆಯ ಜನ ಕೂಡಾ ಸ್ಟೆಪ್ಪು ಹಾಕಿದ್ದರು. ಆ ಮೂಲಕ ಪೊಗರು ದೇಶವ್ಯಾಪಿ ಪ್ರಚಾರ ಪಡೆದಿದೆ.
ಈವರೆಗೆ ನಟಿಸಿರುವುದು ನಾಲ್ಕು ಚಿತ್ರಗಳಲ್ಲಾದರೂ ಧ್ರುವಾ, ಕನ್ನಡದ ಟಾಪ್ ಹೀರೋಗಳ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಧ್ರುವಾ ಸರ್ಜಾ ಹೆಸರು ಕೇಳಿದರೆ ಹುಡುಗರು ಮಾತ್ರವಲ್ಲ, ಮಹಿಳಾ ಅಭಿಮಾನಿಗಳೂ ಹುಚ್ಚೆದ್ದು ಕುಣಿಯುತ್ತಾರೆ. ಕಡಿಮೆ ಸಿನಿಮಾಗಳಲ್ಲಿ ಹೆಚ್ಚು ಅಭಿಮಾನಿ ವರ್ಗವನ್ನು ಸಂಪಾದಿಸಿರುವ ಕೀರ್ತಿ ಧ್ರುವಾ ಸರ್ಜಾ ಅವರದ್ದು.
ಸಿನಿಮಾಗೆ ಬಂದ ದಿನದಿಂದ ಇವತ್ತಿನವರೆಗೆ ಯಾವುದೇ ವಿವಾದಗಳನ್ನು ಮೈಮೇಲೆಳೆದುಕೊಳ್ಳದೆ, ತಾನಾಯಿತು ತನ್ನ ಕೆಲಸವಾಯಿತು ಅಂತಾ ಸಿನಿಮಾವನ್ನೇ ಧ್ಯಾನಿಸುತ್ತಾ, ಒಂದೊಂದು ಚಿತ್ರಕ್ಕೂ ವರ್ಷಗಟ್ಟಲೆ ಶ್ರಮಿಸುವ ಅಪರೂಪದ ನಟ ಧ್ರುವಾ.
ಪೊಗರು ಚಿತ್ರ ಅಂದುಕೊಂಡಹಾಗೇ ಯಶಸ್ಸು ಗಳಿಸಿದರೆ, ಧ್ರುವಾ ಅವರ ಜನಪ್ರಿಯತೆ ದ್ವಿಗುಣವಾಗುತ್ತದೆ. ಸದ್ಯ ಕನ್ನಡ ಚಿತ್ರರಂಗದ ರಥವನ್ನು ಮುಂದಕ್ಕೆಳೆಯಬಲ್ಲ ಕೆಲವೇ ಹೀರೋಗಳಲ್ಲಿ ಧ್ರುವಾ ಸರ್ಜಾ ಮುಂಚೂಣಿಯಲ್ಲಿದ್ದಾರೆ. ಈಗ ಕೆ.ವಿ.ಎನ್ ಪ್ರೊಡಕ್ಷನ್ಸ್ ಪೊಗರು ಬಿಡುಗಡೆ ಮಾಡುತ್ತಿರುವುದು ಚಿತ್ರರಂಗದಲ್ಲಿ ಪಾಸಿಟೀವ್ ಫೀಲ್ ಹುಟ್ಟಿಸಿದೆ!
No Comment! Be the first one.