ಕನ್ನಡದ ನಟಿ ಶರ್ಮಿಳಾ ಮಾಂಡ್ರೆ ಕೊರೋನಾ ಲಾಕ್ ಡೌನ್ ಸಮಯದಲ್ಲಿ, ಹೊತ್ತಲ್ಲದ ಹೊತ್ತಲ್ಲಿ ಕಾರಿನಲ್ಲಿ ಹೋಗಿ, ಗೋಡೆಗೆ ಗುದ್ದಿ, ಗಾಯಬ್ ಆಗಿದ್ದಳು. ನಾವು ಮೊದಲೇ ಅನುಮಾನಿಸಿದ್ದಂತೆ ಅದಕ್ಕೊಂದು ನಾಯಿ-ನರಿ ಕಥೆ ಕಟ್ಟಿ, ಪ್ರಕರಣವನ್ನು ಮುಚ್ಚಿಹಾಕುವ ಕೆಲಸ ವ್ಯವಸ್ಥಿತವಾಗಿಯೇ ನಡೆಯುತ್ತಿದೆ. ಈಗ  ಹೆಚ್ಚೂಕಮ್ಮಿ ಇಂಥದ್ದೇ ಪ್ರಕರಣವೊಂದು ನಡೆದಿದೆ. ಅದು ಮುಂಬೈನಲ್ಲಿ. ಕನ್ನಡದ ಲವ್ ಈಸ್ ಪಾಯ್ಸನ್ ಸಿನಿಮಾ ಸೇರಿದಂತೆ ಹಿಂದಿಯ ಅಷ್ಟಿಷ್ಟು ಚಿತ್ರಗಳಲ್ಲಿ ನಟಿಸಿರುವ ಲೇಡಿ ಪೂನಂ ಪಾಂಡೆ. ಮಾಡೆಲಿಂಗು, ನಟನೆಯಲ್ಲಿ ಹೆಸರು ಮಾಡಿದ್ದಕ್ಕಿಂತಾ, ಈಕೆ ಗಾಸಿಪ್ಪುಗಳ ಮೂಲಕ ಗುಲ್ಲೆಬ್ಬಿಸಿದ್ದೇ ಹೆಚ್ಚು!

ಮೊನ್ನೆ ದಿನ ಪೂನಂ ಪಾಂಡೆ ತನ್ನ ಬಾಯ್ ಫ್ರೆಂಡ್ ಸ್ಯಾಮ್ ಅಹ್ಮದ್ ಎಂಬಾತನ ಜೊತೆಗೆ ಮುಂಬೈನ ಮರೀನ್ ಡ್ರೈವ್ ಏರಿಯಾದಲ್ಲಿ ಅಂಡಲೆಯುತ್ತಿದ್ದಳಂತೆ. ಬಿಎಂಡಬ್ಲ್ಯೂ ಕಾರಿನಲ್ಲಿದ್ದ ಪೂನಂ ಮತ್ತಾಕೆಯ ಹುಡುಗನನ್ನು ಬೀಟ್ ಪೊಲೀಸರು ನಿಲ್ಲಿಸಿ ವಿಚಾರಿಸಿದಾಗ ಸರಿಯಾದ ಉತ್ತರವನ್ನೂ ನೀಡಿರಲಿಲ್ಲ. ಈ ಕಾರಣಕ್ಕಾಗಿ ಸೆಕ್ಷನ್ 269 ಮತ್ತು 188ರ ಭಾರತೀಯ ಸಂಡ ಸಂಹಿತೆಯ ಅಡಿಯಲ್ಲಿ ಈಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ವಿಚಾರವನ್ನು ಸ್ವತಃ ಪೊಲೀಸ್ ಅಧಿಕಾರಿ ಮೃತ್ಯುಂಜಯ ಹಿರೇಮಠ್ ಸ್ಪಷ್ಟಪಡಿಸಿದ್ದಾರೆ. ಆದರೆ ಪೂನಂ ಪಾಂಡೆ ‘ನನ್ನ ಪಾಡಿಗೆ ನಾನು ಮನೆಯಲ್ಲಿ ಕೂತು ಬ್ಯಾಕ್ ಟು ಬ್ಯಾಕ್ ಸಿನಿಮಾ ನೋಡುತ್ತಿದ್ದೇನೆ. ಮನೆಯಲ್ಲಿ ಸೇಫಾಗಿದ್ದೀನಿ’ ಅಂತಾ ವಿಡಿಯೋವನ್ನು ಬಿಟ್ಟು ಎಲ್ಲರನ್ನೂ ಗೊಂದಲಕ್ಕೆ ದೂಡಿದ್ದಾಳೆ

ಪೂನಂ ಪಾಂಡೆಯಂತಾ ಚೆಂಗಲೆತ್ತುವ ಕೆಲವು ನಟಿಯರಿಗೆ ಕೇಸು, ಜೈಲುಗಳೇನೂ ಹೊಸದಲ್ಲವಲ್ಲ? ಜಗತ್ತನ್ನು ಯಾಮಾರಿಸಲು ಇಂಥವರು ಎಂಥಾ ಸುಳ್ಳುಗಳನ್ನು ಬೇಕಾದರೂ ಸೃಷ್ಟಿಸುತ್ತಾರೆ. ನಂಬಿದರೆ ನಾಮ ಅಷ್ಟೇ!

CG ARUN

ತಾಯಿ ಕಣೋ ನಿನ್ನ ತಾಯಿ ಕಣೋ ಜೀವನದಾ ವರದಾನ…

Previous article

You may also like

Comments

Leave a reply

Your email address will not be published. Required fields are marked *