ದೊಡ್ಮನೆ ಮಕ್ಕಳನ್ನು ಒಂದೇ ಸಿನಿಮಾದಲ್ಲಿ ನೋಡಬೇಕೆಂದು ಕೋಟ್ಯಾಂತರ ಅಭಿಮಾನಿಗಳ ಬಹುದೊಡ್ಡ ಆಸೆ. ದಶಕದಿಂದಲೂ ಇಂತಹದ್ದೊಂದು ಬೇಡಿಕೆ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಕಾಡುತ್ತಿದ್ದರೂ ಸಹ ನಟಿಸುವುದಕ್ಕೆ ಕಾಲ ಕೂಡಿ ಬಂದಿಲ್ಲವೆಂಬುದು ಡಾ. ರಾಜ್ ಕುಮಾರ್ ಮಕ್ಕಳ ಉತ್ತರವಾಗಿತ್ತು. ನಟಿಸುತ್ತಾರೆ ಅನ್ನೋ ಗಾಳಿ ಸುದ್ದಿ ಎದ್ದರೂ, ಕಾಣದಂತೆ ಅಷ್ಟೇ ವೇಗದಲ್ಲಿ ಮರೆಯಾಗುತ್ತಿತ್ತು. ಆದ್ರೀಗ ಶಿವಣ್ಣ ಮತ್ತು ಪುನೀತ್ ರಾಜ್ ಕುಮಾರ್ ಒಟ್ಟಿಗೆ ನಟಿಸುವ ಎಲ್ಲ ಸೂಚನೆ ಸಿಕ್ಕಿದ್ದು, ಪೌರಾಣಿಕ ಕಥೆಯೊಂದರಲ್ಲಿ ಇಬ್ಬರೂ ಜೊತೆಯಾಗುವ ಸಮಯ ಹತ್ತಿರದಲ್ಲಿದೆ.
ಇನ್ನು ಶಿವಣ್ಣ ಪುನೀತ್ ಒಟ್ಟಿಗೆ ನಟಿಸಬೇಕು ಅನ್ನೋದು ಮೊದಲಿನಿಂದಲೂ ರಾಜ್ ಕುಟುಂಬದ ಆಸೆಯಾಗಿತ್ತು. ಅದರಲ್ಲೂ ಪಾರ್ವತಮ್ಮ ರಾಜ್ ಕುಮಾರ್ ಮಕ್ಕಳನ್ನು ಜೊತೆಯಾಗಿ ನೋಡಬೇಕು ಅಂತಾ ಕನಸು ಕಂಡಿದ್ದರು. ಆದರೆ ಇಲ್ಲಿ ತನಕ ಸಾಧ್ಯವಾಗಿರಲಿಲ್ಲ. ಇದೀಗ ‘ಭರತ ಬಾಹುಬಲಿ’ ಅನ್ನೋ ಸಿನಿಮಾದಲ್ಲಿ ನಟಿಸಲಿದ್ದಾರೆ ಅಂತಾ ಸುದ್ದಿಯಾಗಿದೆ. ಅಸಲಿಗೆ ಇದೊಂದು ಪೌರಾಣಿಕ ಕಥೆಯಾಗಿದ್ದು,ಇಬ್ಬರೂ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ಮತ್ತೊಂದೆಡೆ ‘ಮಾಸ್ಟರ್ಪೀಸ್’ ನಿರ್ದೇಶಕ ಮಂಜು ಮಾಂಡವ್ಯ ‘ಭರತ ಬಾಹುಬಲಿ’ ಅಂತಾ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿಏನಾದರೂ ಶಿವಣ್ಣ- ಪುನೀತ್ ಅಭಿನಯಿಸಲಿದ್ದಾರಾ ಅನ್ನೋ ಸಂದೇಹವೂ ಇದೆ. ಈ ಸಿನಿಮಾದಲ್ಲಿ ಭರತ-ಬಾಹುಬಲಿ ಪಾತ್ರಗಳೂ ಬಂದು ಹೋಗಲಿವೆ. ಈ ಪಾತ್ರಗಳಲ್ಲೇ ಇಬ್ಬರೂ ನಟಿಸ್ತಿದ್ದಾರಾ..? ಎಂಬ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ. ಇದೇನಾದರೂ ನಿಜವಾದಲ್ಲಿ ಶಿವಣ್ಣ- ಅಪ್ಪು ಅಭಿಮಾನಿಗಳಿಗೆ ದೊಡ್ಡ ಸೆಲೆಬ್ರೇಷನ್ ಅನ್ನೋದ್ರಲ್ಲಿ ಸಂಶಯವಿಲ್ಲ.
No Comment! Be the first one.