ಸದ್ಯ ಸಾಹೋ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿರುವ ಪ್ರಭಾಸ್ ಚಿತ್ರದ ಪ್ರಚಾರದ ಸಲುವಾಗಿ ಬೆಂಗಳೂರಿಗೆ ಬಂದಿದ್ದರು. ಬರೋಬ್ಬರಿ ಎರಡು ವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದೀರಾ. ಇಷ್ಟು ತಡವಾಗಲು ಕಾರಣವೇನು? ಎಂಬುದಕ್ಕೆ ನಗುತ್ತಲೇ ಉತ್ತರಿಸಿದ ಪ್ರಭಾಸ್ “‘ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿತ್ತು. ಹಾಗಾಗಿ ಇಷ್ಟು ಸಮಯ ಬೇಕಾಯಿತು” ಎಂದು ಚುಟುಕಾಗಿಯೇ ತಿಳಿಸಿದ್ದಾರೆ.
ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದ್ದರೂ ಸಹ ಸಾಹೋ ಕನ್ನಡಕ್ಕೆ ಏಕೆ ಡಬ್ ಆಗುತ್ತಿಲ್ಲ. ಕರ್ನಾಟಕದಲ್ಲಿಯೂ ನಿಮಗೆ ಅಭಿಮಾನಿಗಳು ಇದ್ದಾರಲ್ಲ ಎಂದು ಕೇಳಿದಾಗ ‘ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾಗಳು ಬರುವುದು ಈಗಷ್ಟೇ ಶುರುವಾಗಿದೆ. ನನ್ನ ಮುಂದಿನ ಸಿನಿಮಾ ಕನ್ನಡಲ್ಲೂ ಬರಬಹುದು ಅಷ್ಟೇ ಕನ್ನಡ ಸಿನಿಮಾದಲ್ಲಿಯೂ ನನಗೆ ನಟಿಸುವ ಆಸೆ ಇದೆ ಎಂದು ತಿಳಿಸಿದರು”. ಬಾಹುಬಲಿ ಚಿತ್ರದ ನಂತರ ಪ್ರಭಾಸ್ ಅಭಿನಯಿಸಿರುವ ಸಿನಿಮಾ ಇದಾಗಿದ್ದು, ಮುಂದಿನ ಶುಕ್ರವಾರ ಆಗಸ್ಟ್ 30ರಂದು ಸಾಹೋ ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಬರೋಬ್ಬರಿ 350 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾ ಪ್ರಭಾಸ್ ಪಾಲಿಗೆ ಸಾಕಷ್ಟು ಮಹತ್ವವನ್ನು ಹೊಂದಿರುವಂತದ್ದಾಗಿದ್ದು, ಸಾಕಷ್ಟು ಭರವಸೆಯೂ ಸಾಹೋ ಮೇಲಿದೆ.